ಸೋಮವಾರ, ಜನವರಿ 20, 2020
19 °C

ಅತ್ಯಾಚಾರ: ರೆಸಾರ್ಟ್‌ನ ಇಬ್ಬರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿರುವನಂತಪುರ (ಪಿಟಿಐ): ಕಳೆದ ತಿಂಗಳು ಇಲ್ಲಿನ ಪೊಳಿಯೂರಿ ರೆಸಾರ್ಟ್‌ನಲ್ಲಿ ಬೆಂಗಳೂರು ಮೂಲದ ಸಾಫ್ಟ್‌ವೇರ್‌ ಉದ್ಯೋಗಿ ಮೇಲೆ ಅತ್ಯಾಚಾರ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ರೆಸಾರ್ಟ್‌ನ ಇಬ್ಬರು ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.ಅಸ್ಸಾಂನ ಜೊರ್ಹತ್‌ ಜಿಲ್ಲೆಯ  ಲಕಿನಾಥ್‌ (20) ಮತ್ತು ಪೆರ್ಸು ನೌಗಂ ಬಂಧಿತರು.  ಇವರ ದೇಹದ ಮೇಲೆ ಪರಚಿದ ಗುರುತುಗಳಿದ್ದು ಇಬ್ಬರೂ ವಿಚಾರಣೆ ವೇಳೆ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಇವರು ಗುತ್ತಿಗೆ ಆಧಾರದ ಕಾರ್ಮಿಕರಾಗಿದ್ದರು ಎಂದು ಪೊಲೀಸರು ಮಂಗಳವಾರ ಹೇಳಿದ್ದಾರೆ.ನ.28 ರಂದು ರಾತ್ರಿ 2.30ಕ್ಕೆ  ಮಹಿಳೆ ಕೊಠಡಿಗೆ ನುಗ್ಗಿದ ಇಬ್ಬರು ಅತ್ಯಾಚಾರ ನಡೆಸಿದ್ದರು. ಈಕೆ ಕೆಲಸದ ನಿಮಿತ್ತ ತನ್ನ ಸಹೋದ್ಯೋಗಿಗಳೊಂದಿಗೆ ಇಲ್ಲಿಗೆ ಬಂದಿದ್ದರು.

ಪ್ರತಿಕ್ರಿಯಿಸಿ (+)