ಶುಕ್ರವಾರ, ಫೆಬ್ರವರಿ 26, 2021
20 °C
ಸುವ್ಯವಸ್ಥಿತ ಚುನಾವಣೆಗೆ ಆಯೋಗದ ಪ್ರಯೋಗ

ಅತ್ಯಾಧುನಿಕ ವಿದ್ಯುನ್ಮಾ ನ ಮತಯಂತ್ರ ಬಳಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅತ್ಯಾಧುನಿಕ ವಿದ್ಯುನ್ಮಾ ನ ಮತಯಂತ್ರ ಬಳಕೆ

ಹಾವೇರಿ: ಮತದಾನ ಪ್ರಕ್ರಿಯೆ ಸುವ್ಯವಸ್ಥಿತವಾಗಿ ನಡೆಸುವ ಉದ್ದೇಶದಿಂದ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಸಕಲ ಸೌಲಭ್ಯವುಳ್ಳ ಅತ್ಯಾಧುನಿಕ ವಿದ್ಯುನ್ಮಾನ ಯಂತ್ರಗಳನ್ನು ಬಳಕೆ ಮಾಡ ಲಾಗುತ್ತಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಎಂ. ಮಂಜುನಾಥ ನಾಯ್ಕ್ ತಿಳಿಸಿದರು.ಈ ಮತಯಂತ್ರಗಳು ಸ್ವತಃ ತಪಾಸಣೆ ಮಾಡುವ ತಂತ್ರಾಂಶ ಹೊಂದಿವೆ. ಒಂದು ಕಂಟ್ರೋಲ್ ಯುನಿಟ್‌ಗೆ ೨೯ ಬ್ಯಾಲೆಟ್ ಯುನಿಟ್‌ಗಳನ್ನು ಜೋಡಿಸುವ ಹಾಗೂ ಬ್ಯಾಟರಿ ಗಳನ್ನು ಅಳವಡಿಸುವ ವ್ಯವಸ್ಥೆಯನ್ನು ಕಲ್ಪಿಸ ಲಾಗಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.ಮತದಾನ ಸಮಯದಲ್ಲಿ ಸಣ್ಣಪುಟ್ಟ ದೋಷ ಕಂಡು ಬಂದಲ್ಲಿ ಅದನ್ನು ಸಹ ಕಂಟ್ರೋಲ್ ಯುನಿಟ್ ಮಾಹಿತಿ ನೀಡಲಿದೆ. ಮತಯಂತ್ರಗಳ ಸುರಕ್ಷತೆಗೆ ಡೆಸ್ಟ್ರೋಯಬಲ್ ಕೀ, ಬ್ಯಾಲೆಟ್ ಯುನಿಟ್ ಟ್ಯಾಂಪರ್ ಪ್ರೂಫ್ ಅಳವಡಿಸಲಾಗಿದೆ. ಒಂದು ವೇಳೆ ಮತ ಎಣಿಕೆ ಸಂದರ್ಭದಲ್ಲಿ ಕಂಟ್ರೋಲ್ ಯುನಿಟ್‌ನಲ್ಲಿ ಅಂಕಿಗಳ ಬರದೇ ಹೋದರೂ ಪ್ರಿಂಟ್‌ ಮೂಲಕ ಮತಗಳ ವಿವರ ಪಡೆಯಬಹುದಾಗಿದೆ ಎಂದರು.ಮೂರು ನೀತಿ ಸಂಹಿತೆ ಪ್ರಕರಣ: ಜಿಲ್ಲೆಯಲ್ಲಿ ಈವರೆಗೆ ಮೂರು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ. ಒಂದು ಬಿಜೆಪಿ, ಎರಡು ಆಮ್‌ ಆದ್ಮಿ ಪಕ್ಷದ ವಿರುದ್ಧ ಪ್ರಕರಣದ ದಾಖಲಿಸಲಾಗಿದೆ ಎಂದ ಅವರು, ಅಕ್ರಮ ಮದ್ಯ ಮಾರಾಟ ಹಾಗೂ ಸಾಗಣೆ ಪ್ರಕರಣದಲ್ಲಿ ಅಂದಾಜು ೪,೭೫೦ರೂ.,ಗಳ ಮೌಲ್ಯದ ೨೫ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭೆ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆಗೆ ಒಟ್ಟು ೫೨,೨೦೦ ಅರ್ಜಿಗಳನ್ನು ಬಂದಿವೆ. ಇದೇ ೨೩ರೊಳಗೆ ಅಂತಿಮ ಮತದಾರರ ಪಟ್ಟಿ ಸಿದ್ಧಗೊಳ್ಳಲಿದೆ ಎಂದರು.ಹಾವೇರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಹಾವೇರಿ ಜಿಲ್ಲೆಯ ಎಲ್ಲ ತಾಲ್ಲೂಕುಗಳಿಂದ ೩೪ಸಾವಿರ ಅರ್ಜಿಗಳು, ಗದಗ ಜಿಲ್ಲೆಯ ಗದಗ, ರೋಣ, ಶಿರಹಟ್ಟಿ ವಿಧಾನಸಭೆ ಕ್ಷೇತ್ರಗಳಲ್ಲಿ ೧೮,೨೦೦ ಅರ್ಜಿಗಳು ಬಂದಿವೆ ಎಂದರು.ಕಂಟ್ರೋಲ್ ರೂಂ: ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ದೂರು ನೀಡಲು ಅಥವಾ ಮಾಹಿತಿ ಪಡೆಯಲು ಸಾರ್ವಜನಿಕರು ಹಾಗೂ ಅಧಿಕಾರಿಗಳ ಅನುಕೂಲಕ್ಕಾಗಿ ಕಂಟ್ರೋಲ್ ರೂಂ. ಸ್ಥಾಪಿಸಲಾಗಿದೆ. ದೂರವಾಣಿ–೦೮೩೭೫-೨೪೯೧೩೧/೩೨/೩೩/೩೪/೩೫/೩೬ ಹಾಗೂ ೨೪೯೧೪೧/೪೨/೪೩ಗೆ ಕರೆ ಮಾಡಬಹುದು ಎಂದು ಮಂಜುನಾಥ ನಾಯ್ಕ್ ತಿಳಿಸಿದರು.ಹೆಚ್ಚುವರಿ ಜಿಲ್ಲಾಧಿಕಾರಿ ಶಶಿಧರ ಕುರೇರ ಹಾಗೂ ಇತರ ಚುನಾವಣಾಧಿಕಾರಿಗಳು ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.