ಬೆಂಗಳೂರು: ಪ್ರತಿಭಾವಂತ ಯುವ ಆಟಗಾರ್ತಿ ಅದಿತಿ ಅಶೋಕ್ ಅವರು ಇಲ್ಲಿ ನಡೆಯುತ್ತಿರುವ 94ನೇ ಅಖಿಲ ಭಾರತ ಅಮೆಚೂರ್ ಗಾಲ್ಫ್ ಚಾಂಪಿ ಯನ್ಷಿಪ್ನ ಎರಡನೇ ದಿನವಾದ ಬುಧವಾರದ ಆಟದ ಅಂತ್ಯಕ್ಕೆ ಮುನ್ನಡೆ ಸಾಧಿಸಿದರು.

ಕರ್ನಾಟಕ ಗಾಲ್ಫ್ ಸಂಸ್ಥೆ ಕೋರ್ಸ್ನಲ್ಲಿ ಮಹಿಳೆಯರ ವಿಭಾಗದ 36 ಹೋಲ್ಗಳು ಪೈಪೋಟಿಯು ಮುಗಿದಾಗ ಅದಿತಿ (146; 72, 74) ಅವರು ಎರಡು ಸ್ಟ್ರೋಕ್ಗಳೊಂದಿಗೆ ಗುರ್ಬಾನಿ ಸಿಂಗ್ (148; 75, 73) ಅವರನ್ನು ಹಿಂದೆ ಹಾಕಿದರು.

ಶ್ರದ್ಧಾಂ ಜಲಿ ಸಿಂಗ್ (151), ಗೌರಿ ಮೊಂಗಾ (153), ವಾಣಿ ಕಪೂರ್ (153), ಶ್ರೇಯಾ ಘೈ (153), ಮಿಲಿ ಸರೊಹಾ (154), ಅಮನ್ದೀಪ್ ಡ್ರಾಲ್ (155), ತ್ಸೇವಾ ಮಲಿಕ್ (158) ಹಾಗೂ ರಬಿಯಾ ಗಿಲ್ (158) ಅವರು ನಂತರದ ಸ್ಥಾನದಲ್ಲಿದ್ದಾರೆ.

ಪುರುಷರ ವಿಭಾಗದ ತಂಡ ವಿಭಾಗದಲ್ಲಿ ಅಭಿನವ್ ಲೋಹನ್ ಮತ್ತು ಅಭಿಜಿತ್ ಚಡ್ಡಾ ಅವರನ್ನೊಳ ಗೊಂಡ ಭಾರತ ‘ಎ’ ತಂಡ (289) ಚಾಂಪಿಯನ್ ಆಗಿ ಹೊರಹೊಮ್ಮಿತು.

ವೈಯಕ್ತಿಕ ವಿಭಾಗದಲ್ಲಿ ಖಲೀನ್ ಜೋಶಿ (141; 68, 73) ಅವರು ಕೇವಲ ಒಂದು ಸ್ಟ್ರೋಕ್ ಅಂತರದಿಂದ ಅಭಿಜಿತ್ ಚಡ್ಡಾ (142; 71,72) ಅವರಿಗಿಂತ ಮುಂದಿದ್ದಾರೆ. ಸಿ.ಜಿ. ಸೋಮಯ್ಯ (142; 69, 73) ಕೂಡ ಅಭಿಜಿತ್ ಅವರಿಗೆ ಸಮನಾಗಿದ್ದಾರೆ. ಅಭಿನವ್ ಲೋಹನ್ (147), ಉದಯನ್ ಮಾನೆ (148) ಅವರು ನಂತರದ ಸ್ಥಾನದಲ್ಲಿದ್ದಾರೆ. ಜೈಬೀರ್ ಸಿಂಗ್, ರಾಹುಲ್ ರವಿ, ಸಿದ್ದಾರ್ಥ್ ಸೆಮ್ವಾಲ್, ಹನಿ ಬೈಸೊಯಾ, ಎಸ್.ಚಿಕ್ಕರಂಗಪ್ಪ ಅವರು ತಲಾ 150 ಸ್ಟ್ರೋಕ್ಗಳೊಂದಿಗೆ ಮೊದಲ 36 ಹೋಲ್ಗಳ ಕಾರ್ಯಾಚರಣೆ ಪೂರ್ಣಗೊಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.