ಮೈಸೂರು: ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಣ ಕೂಚ್ ಬಿಹಾರ್ ಟ್ರೋಫಿ 19 ವರ್ಷದೊಳಗಿನವರ ಕ್ರಿಕೆಟ್ ಟೂರ್ನಿಯ ಲೀಗ್ ಪಂದ್ಯವು ರೋಚಕ ಡ್ರಾ ಆಯಿತು. ಕರ್ನಾಟಕಕ್ಕೆ ಕೇವಲ ಎರಡು ರನ್ಗಳಿಂದ ಗೆಲುವು ಕೈತಪ್ಪಿತು.

ಇಲ್ಲಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ಪಂದ್ಯದ ಕಡೆಯ ದಿನವಾದ ಶುಕ್ರವಾರ 2ನೇ ಇನಿಂಗ್ಸ್ ಮುಂದುವರಿಸಿದ ಮಹಾರಾಷ್ಟ್ರ ತಂಡವು ಆರ್ಕಮ್ ಸಯ್ಯದ್ ಅರ್ಧಶತಕ (ಔಟಾಗದೇ 69) ಬಲದಿಂದ 72 ಓವರ್ಗಳಲ್ಲಿ 7ಕ್ಕೆ 239 ರನ್ಗಳಿಗೆ ಡಿಕ್ಲೇರ್ಡ್ ಮಾಡಿಕೊಂಡಿತು. 224 ರನ್ಗಳ ಗೆಲುವಿನ ಗುರಿ ಬೆನ್ನಟ್ಟಿದ ಆತಿಥೇಯ ಬಳಗಕ್ಕೆ ಅನ್ವಯ್ ದ್ರಾವಿಡ್ (57) ನಾಯಕನ ಆಟವಾಡಿ ಆಸರೆಯಾದರು. ಅವರಿಗೆ ಮಣಿಕಾಂತ್ ಶಿವಾನಂದ್ (47), ವರುಣ್ ಪಟೇಲ್ (41) ಹಾಗೂ ಆದೇಶ್ ಅರಸ್ (37) ನೆರವಾದರು. ಗೆಲುವಿನ ಸಮೀಪದಲ್ಲಿದ್ದ ಕರ್ನಾಟಕ ತಂಡವನ್ನು ಬೌಲಿಂಗ್ನಲ್ಲೂ ಆರ್ಕಮ್ ಸಯ್ಯದ್ ಕಾಡಿದರು. 33ಕ್ಕೆ 4 ವಿಕೆಟ್ ಉರುಳಿಸಿದ್ದಲ್ಲದೇ ಗೆಲುವಿನ ಲೆಕ್ಕಾಚಾರವನ್ನು ಬದಲಿಸಿದರು.

210ಕ್ಕೆ 7 ವಿಕೆಟ್ ಕಳೆದುಕೊಂಡು ಸೋಲಿನ ಭೀತಿಯಲ್ಲಿದ್ದ ಕರ್ನಾಟಕ ತಂಡವನ್ನು ವೈಭವ್ ಶರ್ಮಾ, ಧ್ಯಾನ್ ಹಿರೇಮಠ ವಿಕೆಟ್ ಬೀಳದಂತೆ ಕಾಯ್ದರಲ್ಲದೇ, ಗೆಲುವಿನ ಸಮೀಪ ತಂದರು. ಆದರೆ 2 ರನ್ ಬಾಕಿ ಇರುವಂತೆ ನಿಗದಿ ಓವರುಗಳು ಮುಗಿದ ಕಾರಣ ಪಂದ್ಯ ಡ್ರಾ ಆಯಿತು.

ಸಂಕ್ಷಿಪ್ತ ಸ್ಕೋರ್: ಮೊದಲ ಇನಿಂಗ್ಸ್: ಮಹಾರಾಷ್ಟ್ರ: 94.2 ಓವರ್ಗಳಲ್ಲಿ 304; ಕರ್ನಾಟಕ: 104 ಓವರ್ಗಳಲ್ಲಿ 320. 2ನೇ ಇನಿಂಗ್ಸ್: ಮಹಾರಾಷ್ಟ್ರ: 72 ಓವರ್ಗಳಲ್ಲಿ 7ಕ್ಕೆ239 (ಆರ್ಕಮ್ ಸಯ್ಯದ್ ಔಟಾಗದೇ 69; ಈಸಾ ಹಕೀಮ್ ಪುತ್ತಿಗೆ 42ಕ್ಕೆ 4). ಕರ್ನಾಟಕ: 82 ಓವರ್ಗಳಲ್ಲಿ 7ಕ್ಕೆ 221 (ಅನ್ವಯ್ ದ್ರಾವಿಡ್ 57; ಆರ್ಕಮ್ ಸಯ್ಯದ್ 33ಕ್ಕೆ 4, ಸ್ವಶಿಕ್ ಜಗತಾಪ್ 33ಕ್ಕೆ 2).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.