ಶನಿವಾರ, ಜನವರಿ 18, 2020
21 °C
ಮತದಾರ ಪಟ್ಟಿ ಪರಿಷ್ಕರಣೆ ಜಾಥಾ

ಅಧಿಕಾರಿಗಳೊಂದಿಗೆ ನಾಗರಿಕರ ವಾಗ್ವಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಜಿಎಫ್‌: ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ ಸಾರ್ವಜನಿಕರಲ್ಲಿ ಅರಿವು ಉಂಟು ಮಾಡಲು ನಗರಸಭೆ ಏರ್ಪ­ಡಿಸಿದ್ದ ಜಾಗೃತಿ ಜಾಥಾ ಸಂದರ್ಭದಲ್ಲಿ ಸಾರ್ವಜನಿಕರು ನಗರಸಭೆ ಅಧಿಕಾರಿ­ಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಸೋಮವಾರ ನಡೆಯಿತು.ರಾಬರ್ಟಸನ್‌ಪೇಟೆ ನಗರಸಭೆ ಮೈದಾನ­ದಲ್ಲಿ ಬೆರಳಣಿಕೆಯಷ್ಟು ಅಧಿ­ಕಾರಿಗಳು ಮತ್ತು ಕೆಲ ವಿದ್ಯಾರ್ಥಿಗಳು ಮತದಾರರ ಪಟ್ಟಿ ಪರಿಷ್ಕರಣೆ ಮಾಡಲು ಮೆರವಣಿಗೆ ನಡೆಸಲು ಸಿದ್ಧತೆ ನಡೆಸಿದ್ದರು. ಮೆರವಣಿಗೆಯನ್ನು ನೋಡಲು ಬಂದ ಸಾರ್ವಜನಿಕರು ನಗರಸಭೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ವಿಧಾನಸಭಾ ಚುನಾ­ವಣೆಗೆ ಮುನ್ನವೇ ಹದಿನೆಂಟು ಸಾವಿ­ರಕ್ಕೂ ಹೆಚ್ಚು ಅರ್ಜಿ ಸಲ್ಲಿಸಿದ್ದರೂ ಅರ್ಹ ಮತದಾರರಿಗೆ ಗುರುತಿನ ಚೀಟಿ ನೀಡಿಲ್ಲ. ಹಣ ಕೊಟ್ಟವರಿಗೆ ಮಾತ್ರ ಗುರುತಿನ ಚೀಟಿ ನೀಡಲಾಗಿದೆ.ಈ ಬಗ್ಗೆ ನಗರಸಭೆ ಆಯುಕ್ತರಿಗೆ ದೂರು ನೀಡಿದ್ದರೂ ಪ್ರಯೋಜನ­ವಾಗ­ಲಿಲ್ಲ, ಮತದಾರಪಟ್ಟಿ ಪರಿಷ್ಕರಣೆ ಬಗ್ಗೆ ಆಯುಕ್ತರ ಮಾತು ನಂಬಿದ ಅರ್ಹ ಮತದಾರರು ಚುನಾವಣೆಯಲ್ಲಿ ಮತ­ದಾನ ಮಾಡುವ ಅವಕಾಶ ಕಳೆದು­ಕೊಳ್ಳುವಂತಾಯಿತು ಎಂದು ಅಧಿ­ಕಾರಿ­ಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದರು.ಚುನಾವಣಾ ಶಾಖೆಯ ನೌಕರರಿಗೆ 200 ರೂಪಾಯಿ ಕೊಟ್ಟರೆ ಎರಡು ದಿನಗಳಲ್ಲಿ ಚೀಟಿ ಕೊಡುತ್ತಾರೆ. 500 ರೂಪಾಯಿ ನೀಡಿದರೆ ಒಂದೇ ದಿನದಲ್ಲಿ ನೀಡುತ್ತಾರೆ. ಹಣ ಕೊಡದವರಿಗೆ ಇದು­ವರೆವಿಗೂ ಚೀಟಿ ಕೊಟ್ಟಿಲ್ಲ. ನೌಕರನನ್ನು ವಿಚಾರಿಸಿದರೆ ಸರ್ವರ್‌ಡೌನ್ ಆಗಿದೆ.  ಕಂಪ್ಯೂಟರ್‌ ಲಾಕ್‌ ಆಗಿದೆ ಎಂಬ ಸಬೂಬು ಹೇಳುತ್ತಾರೆ ಎಂದು ನೊಂದ ಅರ್ಜಿದಾರ ಜಯಕುಮಾರ್‌ ಜರ್ರಿ ಆರೋಪಿಸಿದರು.ಸಾರ್ವಜನಿಕರನ್ನು ಸಮಾಧಾನ ಪಡಿಸಿದ ನಗರಸಭೆ ಮ್ಯಾನೇಜರ್‌ ನಂಜುಂಡ­­ಸ್ವಾಮಿ,  ಈ ಬಗ್ಗೆ ನನಗೆ ಗೊತ್ತಿರಲಿಲ್ಲ, ಇನ್ನು ಮುಂದೆ ಈ ರೀತಿ ಆಗ­ದಂತೆ ಎಚ್ಚರ ವಹಿಸುವುದಾಗಿ ಆಶ್ವಾ­ಸನೆ ನೀಡಿದರು. ನಂತರ ಮೆರವಣಿಗೆ ಪ್ರಾರಂಭವಾಯಿತು.

ಪ್ರತಿಕ್ರಿಯಿಸಿ (+)