ಸಂತೇಮರಹಳ್ಳಿ: ಅಧಿಕಾರಿಗಳ ನಿರ್ಲಕ್ಷ್ಯದಿಂದ ವಿಧವಾ ವೇತನದಿಂದ ಮಹಿಳೆಯೊಬ್ಬರು ವಂಚಿತರಾಗಿ ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ.

ಸಮೀಪದ ದೇಶವಳ್ಳಿ ಗ್ರಾಮದ ಕಮಲಮ್ಮ ಲೇಟ್ ಲಕ್ಷ್ಮಣ ಎಂಬುವವರು ವಿಧವಾ ವೇತನವನ್ನೆ ನಂಬಿ ಬದುಕುತ್ತಿದ್ದರು. ಕಳೆದ 10 ತಿಂಗಳಿನಿಂದ ವಿಧವಾ ವೇತನ ಸ್ಥಗಿತಗೊಂಡಿದೆ. ಕಮಲಮ್ಮನ ಗಂಡ ಲಕ್ಷ್ಮಣ ಎಂಬುವವರು ಕೂಲಿ ಮಾಡಿ ಹೆಂಡತಿ, ಇಬ್ಬರು ಮಕ್ಕಳನ್ನು ಸಾಕುತ್ತಿದ್ದರು. 2006 ರಲ್ಲಿ ಲಕ್ಷ್ಮಣ ಮರಣ ಹೊಂದಿದರು. ಅಂದಿನಿಂದ ಕಮಲಮ್ಮನಿಗೆ ಪ್ರತಿ ತಿಂಗಳು 400 ರೂ. ವಿಧವಾ ವೇತನ ಬರುತ್ತಿತ್ತು.

ಒಂದೇ ಗ್ರಾಮದ ಕಮಲಮ್ಮ ಲೇಟ್ ಕರಿನಾಯ್ಕ ಎಂಬುವವರಿಗೆ 1984-85ರಿಂದ ವಿಧವಾ ವೇತನ ಬರುತ್ತಿತ್ತು. ಗ್ರಾಮ ಲೆಕ್ಕಿಗರ ವಾರ್ಷಿಕ ವರದಿಯ ಪ್ರಕಾರ ಕಮಲಮ್ಮ ಲೇಟ್ ಕರಿನಾಯ್ಕ ಎಂಬುವವರು ಗ್ರಾಮದಿಂದ ಗುಳೆಹೋಗಿದ್ದಾರೆ. ಕಮಲಮ್ಮ ಲೇಟ್ ಲಕ್ಷ್ಮಣ ಇವರ ವಿಧವಾ ವೇತನದ ಆದೇಶದ ಸಂಖ್ಯೆ 0071028328 ಕಮಲಮ್ಮ ಲೇಟ್ ಕರಿನಾಯ್ಕ ಇವರ ಹೆಸರಿಗೆ ಬದಲಾವಣೆಯಾಗಿದೆ.

ಪರಿಣಾಮ ಕಮಲಮ್ಮ ಲೇಟ್ ಲಕ್ಷ್ಮಣ ಇವರ ಹೆಸರಿಗೆ ಬರುತ್ತಿದ್ದ ವಿಧವಾ ವೇತನ ಸ್ಥಗಿತಗೊಂಡಿದೆ. ಕಮಲಮ್ಮ ಲೇಟ್ ಕರಿನಾಯ್ಕ ಇವರ ಆದೇಶದ ಸಂಖ್ಯೆಗೆ ವಿಧವಾ ವೇತನ ಪ್ರತಿ ತಿಂಗಳು ಸಂದಾಯವಾಗುತ್ತಿದೆ. ಆದರೇ ನಿಜವಾದ ಪಲಾನುಭವಿಗೆ ವೇತನದಿಂದ ವಂಚಿಸಲಾಗಿದೆ.

ಕುಟುಂಬದ ಆದಾಯಕ್ಕೆ ಜಮೀನು ಇಲ್ಲ. ಜೀವನದ ಆಶ್ರಯಕ್ಕೆ ಕೂಲಿ ಮಾಡಿ ಇಬ್ಬರು ಗಂಡು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುತ್ತಿದ್ದರು. ಒಬ್ಬ ಮಗನಿಗೆ ಮದುವೆಯಾಗಿ ಹೆಂಡತಿ, 2 ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದಾನೆ. ಮತ್ತೊಬ್ಬ ಮಗನನ್ನು ಕೂಲಿ ಮಾಡಿ ಎಂ.ಎ. ಪದವಿವರೆಗೂ ವಿದ್ಯಾಬ್ಯಾಸ ಕೊಡಿಸಿದ್ದರು.

ಇವರಿಗೆ ಉಪನ್ಯಾಸಕ ಹುದ್ದೆಯು ದೊರಕಿತ್ತು. ಇದರಿಂದ ಕೂಲಿ ಮಾಡಿ ಸಾಕಿದ ಜೀವಕ್ಕೆ ನೆಮ್ಮದಿ ಸಿಕ್ಕಿದಂತಾಗಿತ್ತು. ಆದರೆ ವಿಧಿ ಈ ವಿಧವೆಯನ್ನು ನೆಮ್ಮದಿಯಾಗಿ ಮಗನ ಜೊತೆಯಲ್ಲಿ ಇರಲು ಬಿಡಲಿಲ್ಲ. ಉಪನ್ಯಾಸಕ ವೃತ್ತಿಯಿಂದ ಒಂದು ತಿಂಗಳ ವೇತನ ತರುವಷ್ಟರಲ್ಲಿ ಉಪನ್ಯಾಸಕ ಮಗ 8 ತಿಂಗಳ ಹಿಂದೆ ಅಕಾಲಿಕ ಮರಣಕ್ಕೆ ತುತ್ತಾದ. ಈ ಘಟನೆಯಿಂದ ನೊಂದ ಜೀವಕ್ಕೆ ವಿಧವಾ ವೇತನವೇ ಆಶ್ರಯವಾಯಿತು. ಇದೇ ಸಮಯಕ್ಕೆ ವಿಧವಾ ವೇತನವು ಸ್ಥಗಿತಗೊಂಡಿತ್ತು.

ಕಂದಾಯ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾರೂ ಗಮನ ಹರಿಸಿಲ್ಲ. ಇನ್ನೂ ಮುಂದಾದರೂ ಆಗಿರುವ ಅನ್ಯಾಯವನ್ನು ಸರಿಪಡಿಸಿ ವಿಧವಾ ವೇತನ ಪ್ರತಿ ತಿಂಗಳು ಬರುವಂತೆ ಅನುಕೂಲ ಮಾಡಿಕೊಡಬೇಕು ಎಂದು ಕಮಲಮ್ಮನ ಮಗ ಶ್ರೀನಿವಾಸ್ ಕಂದಾಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.