ಗುರುವಾರ , ಮೇ 6, 2021
22 °C
ಪಡುಬಿದ್ರಿ: ಬೈಪಾಸ್ ವಿರೋಧಿಸಿ ಚುನಾವಣಾ ಬಹಿಷ್ಕಾರ

ಅಧಿಕೃತ ಆದೇಶದ ಪ್ರತಿಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿ ವೇಳೆ ಪಡುಬಿದ್ರಿ ಬೈಪಾಸ್ ನಿರ್ಮಾಣದ ಆದೇಶ ಕೈಬಿಟ್ಟಿ­ರುವ ಬಗ್ಗೆ ಅಧಿಕೃತವಾಗಿ ಆದೇಶ ಹೊರ­ಡಿ­ಸಿರುವುದನ್ನು ವಿರೋಧಿಸಿ ಪಡು­ಬಿದ್ರಿಯ ಬೈಪಾಸ್ ವಿರೋಧಿ ಹೋರಾ­ಟಗಾರರು ಲೋಕಸಭಾ ಚುನಾವಣೆ ಬಹಿಷ್ಕರಿಸುವ ಬಗ್ಗೆ ನಿರ್ಧರಿಸಿದ್ದಾರೆ.ಪಡುಬಿದ್ರಿ ಗುರುದೇವ್ ಟಾಕೀಸ್ ಹಿಂಭಾಗದ ದಲಿತ ಕಾಲೊನಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಪಡು­ಬಿದ್ರಿ ದ.ಸಂ.ಸ ಘಟಕಾಧ್ಯಕ್ಷ ಲೋಕೇಶ್ ಕಂಚಿನಡ್ಕ ಈ ಬಗ್ಗೆ ಮಾಹಿತಿ ನೀಡಿದರು.ರಾ.ಹೆ. ಚತುಷ್ಪಥ ಕಾಮಗಾರಿ ವೇಳೆ ಹೆದ್ದಾರಿ ಪ್ರಾಧಿಕಾರ ಪಡುಬಿದ್ರಿಯಲ್ಲಿ 3ಕಿ.ಮೀ. ದೂರದ ಬೈಪಾಸ್ ಯೋಜ­ನೆಗೆ ಮುಂದಾಗಿತ್ತು. ಈ ಬಗ್ಗೆ ಹಲವಾರು ಹೋರಾಟಗಳು ನಡೆದಿವೆ. ಕಳೆದ ಕೆಲವು ತಿಂಗಳ ಹಿಂದೆ ಬೈಪಾಸ್ ಯೋಜನೆ ಕೈಬಿಟ್ಟಿರುವುದಾಗಿ ಹೇಳಿ­ದ್ದರೂ ಅಧಿಕೃತ ದಾಖಲೆ ನೀಡುತ್ತಿಲ್ಲ. ಬೈಪಾಸ್ ಯೋಜನೆಯಿಂದ 28ದಲಿತ ಮನೆಗಳ ಕಾಲೊನಿ ಸಹಿತ ಸುಮಾರು 45ಕ್ಕೂ ಅಧಿಕ ಮನೆಗಳ ಕುಟುಂಬಸ್ಥರು ಸಂತ್ರಸ್ತರಾಗಲಿದ್ದಾರೆ.ಚುನಾವಣೆಗೆ ಮುನ್ನ ಪಡುಬಿದ್ರಿ ಹೆದ್ದಾರಿ ವಿಸ್ತರಣೆ ದಾಖಲಾತಿ ಪ್ರತಿ­ಯನ್ನು ನೀಡಬೇಕು ತಪ್ಪಿದಲ್ಲಿ ಪಡುಬಿದ್ರಿ ಹಾಗೂ ಆಸುಪಾಸಿನ ದಲಿತರು, ಅವರ ಸಂಬಂಧಿಕರು, ಹಾಗೂ ಸಂಭಾವ್ಯ ಸಂತ್ರಸ್ಥರು ಚುನಾವಣಾ ಬಹಿಷ್ಕಾರಕ್ಕೆ ನಿರ್ಧರಿಸಿದ್ದಾಗಿ ಹೇಳಿದ್ದಾರೆ.ಭಾನುವಾರ ಬೆಳಿಗ್ಗೆಯಿಂದಲೇ ಈ ಬಗ್ಗೆ ಸಭೆ ಕರೆದು ಸರ್ವರ ಅಭಿಪ್ರಾಯ ಕರೆದು ಈ ನಿರ್ಧಾರ ಕೈಗೊಳ್ಳಲಾಗಿದೆ. ಯಾರೊಬ್ಬರೂ ಯಾವುದೇ ಪ್ರಭಾವಕ್ಕೆ ಒಳಗಾಗುವುದಿಲ್ಲ ಎಂದು ಶಪಥ ಮಾಡಿದ್ದಾರೆ. ಕಳೆದ ಚುನಾವಣೆ ಸಂದರ್ಭ ಚುನಾವಣೆ ಬಹಿಷ್ಕಾರ ಹಾಕಿದ್ದಾಗ ಕಾಂಗ್ರೆಸ್‌ನ ರಾಜ್ಯ ಮುಖಂಡ ನಾರಾಯಣ ಸ್ವಾಮಿ ಬೈಪಾಸ್ ಯೋಜನೆ ರದ್ದುಗೊಳಿಸಿದ ಬಗ್ಗೆ ನನ್ನ ಬಗ್ಗೆ ದಾಖಲೆ ಇದೆ ಎಂದು ಪೊಳ್ಳು ಭರವಸೆ ನೀಡಿದ್ದರು. ಈ ಬಗ್ಗೆ ದಾಖಲಾತಿ ಪ್ರತಿ ಕೇಳಿದಾಗ ನಿರಾಕರಿಸುತ್ತಿದ್ದಾರೆ. ಹಾಗಾಗಿ ನಾವು ಈ ನಿರ್ಧಾರ ಕೈಗೊಂಡಿರುವುದಾಗಿ ಲೋಕೇಶ್ ಕಂಚಿನಡ್ಕ ಹೇಳಿದ್ದಾರೆ.ಈ ಬಗ್ಗೆ ಚುನಾವಣಾ ಆಯೋಗ, ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರು ಸಹಿತ ಸಂಬಂಧಿತ ಇಲಾಖೆ­ಗಳಿಗೆ ನಿರ್ಣಯ ಪ್ರತಿ ಕಳುಹಿಸಲಾಗು­ವುದು ಎಂದೂ ಲೋಕೇಶ್ ಕಂಚಿನಡ್ಕ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಇಮ್ತಿ­ಯಾಜ್ ಪಡುಬಿದ್ರಿ, ಮೊಹಮ್ಮದ್ ರಫೀಕ್ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.