ಗುರುವಾರ , ಮೇ 19, 2022
21 °C

ಅನನ್ಯ ರೇಷ್ಮೆ ಕಲಾಕೃತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೇಷ್ಮೆಯ ಹೊಳಪು, ಮೃದುತ್ವಕ್ಕೆ ಯಾವುದು ಸರಿಸಾಟಿಯಾಗಲಾರದು. ಅಪೂರ್ವ ಕಸೂತಿಯ ರೇಷ್ಮೆಯ ವಸ್ತ್ರಗಳು ಒಮ್ಮೊಮ್ಮೆ ಕಲಾಕೃತಿಯಂತೆ ಭಾಸವಾಗುತ್ತವೆ. ಅದೇ ರೇಷ್ಮೆಯ ಎಳೆಗಳಿಂದ ಕಲಾಕೃತಿ ರಚಿಸಿದರೆ? ಅಂತಹ ಕಲಾಕೃತಿಗಳು ಕೇವಲ ಕಲೆಯ ಮೆರುಗು ಎತ್ತಿಹಿಡಿಯುವುದಿಲ್ಲ. ಆ ಕಲಾವಿದರ ಜಾಣ್ಮೆ, ಕೌಶಲ್ಯಕ್ಕೂ ಕನ್ನಡಿ ಹಿಡಿಯುತ್ತವೆ.‘ಸುಕ್ಸಿಯು’ ರೇಷ್ಮೆಯ ಎಳೆಗಳಿಂದ ಕಲಾಕೃತಿ ರಚಿಸುವ ಪರಂಪರೆ. ಈ ಸಂಪ್ರದಾಯ ಪೂರ್ವ ಚೀನಾದಲ್ಲಿ 2000 ವರ್ಷಗಳಿಂದ ಚಾಲ್ತಿಯಲ್ಲಿದೆ. ತಾಯಿಯಿಂದ ಮಗಳಿಗೆ ಈ ಕಲೆ ಹರಿದುಬರುತ್ತದೆ. ಇಲ್ಲಿ ಅತಿ ಸೂಕ್ಷ್ಮ ಸೂಜಿಗಳನ್ನು ಬ್ರಶ್‌ನಂತೆ ಬಳಸಲಾಗುತ್ತದೆ. ರೇಷ್ಮೆಯ ಎಳೆಗಳು ಬಣ್ಣಗಳಾಗುತ್ತವೆ. ಮೊದಲು ರೇಷ್ಮೆ ಬಟ್ಟೆಯ ಚಿತ್ರಗಳನ್ನು ಬಿಡಿಸಿಕೊಳ್ಳಲಾಗುತ್ತದೆ. ಆನಂತರ ಅಲ್ಲಿ ಬಣ್ಣ ಹೆಣೆಯಲಾಗುತ್ತದೆ. ಕಸೂತಿ ಮಾಡುವ ಕಲಾವಿದೆ ಒಂದು ರೇಷ್ಮೆಯ ಎಳೆಯನ್ನು ಹೆಬ್ಬೆರಳ ಉಗುರಿನಿಂದ 16 ಭಾಗ ಮಾಡುವ ಚಾತುರ್ಯ ಹೊಂದಿರುತ್ತಾಳೆ.ಚೀನಾದ ಹಳ್ಳಿಗಾಡಿನ ಕಲಾವಿದರು ರೇಷ್ಮೆಯ ಎಳೆಗಳಿಂದ ಹೆಣೆದ ಕಲಾಕೃತಿಗಳ ಪ್ರದರ್ಶನ ‘ಸಿಲ್ಕ್ ಸ್ಟೋರಿ’ ಈಗ ನಗರದಲ್ಲಿ ನಡೆಯುತ್ತಿದೆ. ಗಿಣಿ, ಗಿಡುಗದಂತಹ ಪಕ್ಷಿಗಳು, ಹೂವುಗಳು, ರಾಜಕುಮಾರಿ, ದೇವತೆಯರ ಕಲಾಕೃತಿಗಳು ಇಲ್ಲಿ ಪ್ರದರ್ಶನಕ್ಕಿವೆ. ಪ್ರದರ್ಶನ ಗುರುವಾರ ಮುಕ್ತಾಯ. ಸ್ಥಳ: ಪ್ರತಿಮಾಸ್ ಆರ್ಟ್ ಗ್ಯಾಲರಿ, ಎಂ.ಜಿ. ರಸ್ತೆ.


 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.