ಶುಕ್ರವಾರ, ಮೇ 14, 2021
31 °C

ಅನಾಥ ಮಕ್ಕಳಿಗೆ ಹಣ್ಣಹಂಪಲು ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಪ್ರಯುಕ್ತ ಎಸ್.ಆರ್.ವೈ. ಕ್ರಿಯೇಟಿವ್ ಇಂಡಿಯಾ ಟ್ರಸ್ಟ್ ವತಿಯಿಂದ ನಗರದ ಬಸವಮುಕ್ತಿ ಮಂದಿರದಲ್ಲಿ ಶನಿವಾರ ಅನಾಥ ಮಕ್ಕಳಿಗೆ ಹಣ್ಣು ಹಂಪಲು ವಿತರಿಸಲಾಯಿತು.ಡಾ. ಅಂಬೇಡ್ಕರ್ ಅವರು ಸಾಕಷ್ಟು ಕಷ್ಟದ ನಡುವೆ ಶಿಕ್ಷಣ ಪೂರೈಸಿದ್ದರು. ಸಮಾನತೆಯ ಆಧಾರದ ಮೇಲೆ ಸಮಾಜ ಕಟ್ಟಲು ಪ್ರಯತ್ನಿಸಿದ್ದರು ಎಂದು ಉಪನ್ಯಾಸಕ ವಿಜಯಕುಮಾರ ಪಾಂಚಾಳ್ ತಿಳಿಸಿದರು.ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಅರಿತು ಮೈಗೊಡಿಸಿಕೊಳ್ಳಬೇಕು ಎಂದು ಎಸ್.ಆರ್.ವೈ. ಕ್ರಿಯೇಟಿವ್ ಇಂಡಿಯಾ ಟ್ರಸ್ಟ್ ಅಧ್ಯಕ್ಷ ಯೋಗೀಶ ಚ. ಮಠದ ಸಲಹೆ ನೀಡಿದರು.ಟ್ರಸ್ಟ್ ಉಪಾಧ್ಯಕ್ಷ ರಫೀಕ್ ಎ. ಸೌದಾಗರ್, ಕಾರ್ಯದರ್ಶಿ ಸುನೀಲಕುಮಾರ ಪಿ. ಸಂತಪುರೆ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.