ಶುಕ್ರವಾರ, ಮೇ 14, 2021
21 °C

ಅಪಘಾತ: ರೈಲು ಮಾರ್ಗ, ವೇಳಾಪಟ್ಟಿ ಬದಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ತಮಿಳುನಾಡಿನ ಚಿಟ್ಟೇರಿ ರೈಲು ನಿಲ್ದಾಣದ ಬಳಿ ಮಂಗಳವಾರ ರಾತ್ರಿ ಸಂಭವಿಸಿದ ರೈಲು ಅಪಘಾತದ ಹಿನ್ನೆಲೆಯಲ್ಲಿ ನೈರುತ್ಯ ರೈಲ್ವೆ ತನ್ನ ಕೆಲವು ರೈಲುಗಳು ಸಂಚರಿಸುವ ಮಾರ್ಗ ಮತ್ತು ಸಂಚಾರದ ವೇಳೆಯನ್ನು ಬದಲಿಸಿದೆ.ಮಾರ್ಗ ಬದಲಾದ ರೈಲುಗಳ ವಿವರ: ಗಾಡಿ ಸಂಖ್ಯೆ: 15228, ಮುಜಾಫರ್‌ಪುರ್- ಯಶವಂತಪುರ ಎಕ್ಸ್‌ಪ್ರೆಸ್ ರೈಲು ಚೆನ್ನೈ ಎಗ್ಮೋರ್, ವಿಲ್ಲುಪುರಂ, ವೃದ್ಧಾಚಲಂ ಹಾಗೂ ಸೇಲಂ ಮಾರ್ಗವಾಗಿ ಸಂಚರಿಸಲಿದೆ.ಗಾಡಿ ಸಂಖ್ಯೆ: 12510, ಗುವಾಹಟಿ- ಬೆಂಗಳೂರು ಎಕ್ಸ್‌ಪ್ರೆಸ್ ರೈಲನ್ನು ಗುಡೂರು, ರೇನಿಗುಂಟ, ಕಾಟ್ಪಾಡಿ ಹಾಗೂ ಜೋಲಾರ್‌ಪೇಟೆ ಮಾರ್ಗವಾಗಿ ಸಂಚರಿಸುವಂತೆ ಸೂಚಿಸಲಾಗಿದೆ.ಗಾಡಿ ಸಂಖ್ಯೆ: 22601, ಚೆನ್ನೈ- ಶಿರಡಿ ಎಕ್ಸ್‌ಪ್ರೆಸ್ ರೈಲು ಜೋಲಾರ್‌ಪೇಟೆ, ಕೃಷ್ಣರಾಜಂ ಹಾಗೂ ಧರ್ಮಾವರಂ ಮಾರ್ಗದ ಬದಲು ಅರಕ್ಕೋಣಂ, ರೇನಿಗುಂಟ, ಗುಂತಕಲ್ ಹಾಗೂ ರಾಯಚೂರು ಮಾರ್ಗವಾಗಿ ಸಂಚರಿಸಲಿದೆ.ಗಾಡಿ ಸಂಖ್ಯೆ:12245 ಹೌರಾ- ಯಶವಂತಪುರ ಎಕ್ಸ್‌ಪ್ರೆಸ್ ರೈಲು ರೇನಿಗುಂಟ, ಪಕ್ಕಳ, ಕಾಟ್ಪಾಡಿ ಹಾಗೂ ಜೋಲಾರ್‌ಪೇಟೆ ಮಾರ್ಗವಾಗಿ ತೆರಳಲಿದೆ.ವೇಳಾಪಟ್ಟಿ ಬದಲಾದ ರೈಲಿನ ವಿವರ: ಚೆನ್ನೈನಿಂದ ಮಧ್ಯಾಹ್ನ 1.35ಕ್ಕೆ ಹೊರಡಬೇಕಿದ್ದ ಚೆನ್ನೈ- ಬೆಂಗಳೂರು ಎಕ್ಸ್‌ಪ್ರೆಸ್ ರೈಲು (ಗಾಡಿ ಸಂಖ್ಯೆ: 12609) ಸಂಜೆ 5 ಗಂಟೆಗೆ ಹೊರಡಲಿದೆ ಎಂದು ರೈಲ್ವೆ ಇಲಾಖೆಯ ಪ್ರಕಟಣೆ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.