ಭಾನುವಾರ, ಮಾರ್ಚ್ 7, 2021
18 °C
ಮೋಟಾರು ವಾಹನ ಕಾಯ್ದೆ, ರಸ್ತೆ ಸುರಕ್ಷತಾ ಕಾರ್ಯಾಗಾರ

ಅಪಘಾತ ಹೆಚ್ಚಳ: ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಪಘಾತ ಹೆಚ್ಚಳ: ಅಸಮಾಧಾನ

ರಾಮನಗರ: ಸಾರಿಗೆ ಸುರಕ್ಷತೆಗಾಗಿ ಸರ್ಕಾರ ಹಲವು ಕಠಿಣ ಕಾನೂನುಗಳನ್ನು ಜಾರಿಗೆ ತಂದಿದೆ. ನಿಯಮ ಉಲ್ಲಂಘಿಸಿದವರಿಗೆ ಸಾವಿರಾರು ರೂಪಾಯಿ ದಂಡ ವಿಸಲಾಗುತ್ತಿದೆ. ಆದರೂ ಕೂಡ ಅಪಘಾತಗಳು ನಡೆಯುತ್ತಲೇ ಇದೆ ಎಂದು ಸಾರಿಗೆ ಆಯುಕ್ತ ಗುರುಮೂರ್ತಿ ಅಸಮಾಧಾನ ವ್ಯಕ್ತಪಡಿಸಿದರು.ತಾಲ್ಲೂಕಿನ ಬಸವನಪುರ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಸೋಮವಾರ ನಡೆದ ಮೋಟಾರು ವಾಹನ ಕಾಯ್ದೆ ಮತ್ತು ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.‘ಕಾನೂನು ಉಲ್ಲಂಘಿಸಿ ದಂಡ ಕಟ್ಟಿದವರು ಮತ್ತೆ ಅದೇ ತಪ್ಪುಗಳನ್ನು ಎಸಗುತ್ತಿದ್ದಾರೆ. ವಾಹನ ಚಾಲನೆ ವೇಳೆ ನಿರ್ಲಕ್ಷ್ಯ, ನಿಯಮ ಉಲ್ಲಂಘಿಸುತ್ತಿರುವುದೇ  ಅಪಘಾತಗಳಿಗೆ ಪ್ರಮುಖ ಕಾರಣ’ ಎಂದರು.‘ಸಾರ್ವಜನಿಕರು, ವಾಹನ ಚಾಲಕರು ಜಾಗೃತರಾಗದ ಹೊರತು ಎಷ್ಟೇ ಕಾನೂನುಗಳನ್ನು ಜಾರಿಗೆ ತಂದು ಸಾವಿರಾರು ರೂಪಾಯಿ ದಂಡ ವಿಧಿಸಿದರು ಕೂಡ ರಸ್ತೆ ಅಪಘಾತಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ’ ಎಂದು ಅಭಿಪ್ರಾಯ ಪಟ್ಟರು.ವಾಹನ ಚಾಲಕರು ಜಾಗೃತರಾದರೆ ಶೇ 99 ರಷ್ಟು ಅಪಘಾತಗಳನ್ನು ನಿಯಂತ್ರಿಸಬಹುದು. ಚಾಲಕರು ಒತ್ತಡಕ್ಕೆ ಒಳಗಾಗಬಾರದು, ಏಕಾಗ್ರತೆಯನ್ನು ಕಳೆದುಕೊಳ್ಳಬಾರದು, ನೆದ್ದೆ ಗೆಡಬಾರರು, ವಿಶ್ರಾಂತಿ ತೆಗೆದುಕೊಳ್ಳಬೇಕು. ಮಂಪರಿನಲ್ಲಿ ಚಾಲನೆ ಮಾಡಬಾರು. ವಾಹನದ ಒಳಗೆ ಮೊಬೈಲ್, ರೇಡಿಯೊ ಬಳಸಬಾರದು. ಪ್ರಯಾಣಿಕರೊಡನೆ ಅನಗತ್ಯವಾಗಿ ಮಾತನಾಡಬಾರದು. ಪ್ರತಿಕೂಲ ಹವಾಮಾನಕ್ಕೆ ಹೊಂದಿಕೊಳ್ಳಬೇಕು. ತಾಳ್ಮೆ, ಸಹನೆ ಮುಖ್ಯ. ರಕ್ಷಣಾತ್ಮಕ ಚಾಲನಾ ಕೌಶಲ ಮಾಡಿಕೊಳ್ಳಬೇಕು. ಆಗ್ಗಾಗೆ ವಾಹನದ ಲೋಷದೋಷಗಳನ್ನು ಸರಿಪಡಿಸಿಕೊಳ್ಳಬೇಕು. ಇಂಡಿಕೇಟರ್, ಬ್ರೇಕ್ ಲೈಟ್, ಮಿರರ್, ಹೆಲ್ಮೆಟ್‌ಗಳನ್ನು ಕಟ್ಟಾಯವಾಗಿ ಬಳಸಬೇಕು. ಇವುಗಳನ್ನು ನಿರ್ಲಕ್ಷಿಸುವುದು ಚಾಲನೆಯಲ್ಲಿ ಹುಡುಗಾಟ ಆಡುವುದದರಿಂದ ಅಪಘಾತಗಳಲ್ಲಿ ಪ್ರಾಣ ಹಾನಿ ಹೆಚ್ಚಾಗುತ್ತಿದೆ ಎಂದು ಹೇಳಿದರು.ಇದೇ ವೇಳೆ ವಾಹನ ಚಾಲನೆ ವೇಳೆ ಅನುಸರಿಸಬೇಕಾದ ಕೈ ಚಿಹ್ನೆಗಳ ಪ್ರಾತ್ಯಕ್ಷಿಕೆ ಮೂಲಕ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು. ಕಡ್ಡಾಯ ಚಿಹ್ನೆಗಳು, ಎಚ್ಚರಿಕೆ ಚಿಹ್ನೆಗಳು, ಮಾಹಿತಿ ಚಿಹ್ನೆಗಳನ್ನು ವಿವರವಾಗಿ ತಿಳಿಸಿಕೊಟ್ಟರು.ಕಾಲೇಜಿನ ಪ್ರಾಂಶುಪಾಲ ಡಾ. ವೆಂಕಟೇಶಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಧ್ಯಾಪಕರಾದ ಡಾ. ಸಿ.ಬಿ ರಂಗನಾಥಯ್ಯ, ಎನ್.ಎಸ್. ಅಂಬೇಡ್ಕರ್, ಕೆ.ಎನ್. ಅನಿತ, ಎಚ್.ವಿ. ಶಿವಣ್ಣ, ಹನುಮಂತಯ್ಯ, ಜಯಣ್ಣ ಇದ್ದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.