ಶಿರಸಿ: ತಾಲ್ಲೂಕಿನ ದೇವನಳ್ಳಿ ಮೂಲಕ ತಲುಪುವ ವಡ್ಡಿಘಾಟ್-ಗೋಕರ್ಣ ರಸ್ತೆ ರಾಜ್ಯ ಹೆದ್ದಾರಿಯ ಸಾಲಿನಲ್ಲಿ ಸೇರ್ಪಡೆಗೊಂಡಿದ್ದರೂ ಸಹ ತೀರಾ ದುಸ್ಥಿತಿಯಲ್ಲಿದೆ. ಘಟ್ಟದ ಕೆಳಗಿನ ಭಾಗಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆ ಇದಾಗಿದ್ದರೂ, ರಸ್ತೆ ದುಸ್ಥಿತಿ ನೋಡಿ ಪ್ರಯಾಣಿಕರು ಈ ರಸ್ತೆಯಲ್ಲಿ ಸಂಚರಿಸಲು ಹಿಂಜರಿಯುತ್ತಾರೆ.

ತಡಸ್-ಕುಮಟಾ ರಾಜ್ಯ ಹೆದ್ದಾ ರಿಯ ಶಿರಸಿ ಮತ್ತು ಕುಮಟಾ ನಡುವಿನ ರಸ್ತೆಯಲ್ಲಿ ಕಾಂಕ್ರಿಟೀಕರಣ ಕಾಮಗಾರಿ ನಡೆಯುತ್ತಿದ್ದು, ಕಾಮ ಗಾರಿ ಸಂದರ್ಭದಲ್ಲಿ ವಾಹನ ಸಂಚಾರ ಸ್ಥಗಿತಗೊಂಡರೆ ಪರ್ಯಾಯ ಮಾರ್ಗ ವಾಗಿ ವಡ್ಡಿಘಾಟ್ ರಸ್ತೆ ಸಹಕಾರಿ ಯಾಗಲಿದೆ.

ಆದರೆ ರಸ್ತೆ ನಡುವಿನ ತೀರಾ ದುಸ್ಥಿತಿಯಲ್ಲಿರುವ ನಾಲ್ಕು ಕಿಮೀ ಮಾರ್ಗ ದುರಸ್ಥಿಗೊಂಡರೆ ಮಾತ್ರ ಸಂಚಾರ ಸಾಧ್ಯವಾಗುತ್ತದೆ. ಅನೇಕ ವರ್ಷಗಳ ಹಿಂದೆ ನಿರ್ಮಿಸಿದ ರಸ್ತೆಯಲ್ಲಿ ಡಾಂಬರ್ ಕಿತ್ತು ಹೋಗಿದ್ದು, ಮಣ್ಣು ರಸ್ತೆಯಲ್ಲಿ ವಾಹನ ಹಾದು ಹೋದರೆ ಧೂಳೆದ್ದು ಸಂಚಾರ ಕಷ್ಟಕರವಾಗಿದೆ. ಘಟ್ಟ ಪ್ರದೇಶದಲ್ಲಿ ರಸ್ತೆಯ ಈ ಸ್ಥಿತಿ ಅನಾಹುತಕ್ಕೆ ಆಸ್ಪದವಾಗುತ್ತದೆ ಎಂಬುದು ಸ್ಥಳೀಯ ನಿವಾಸಿಗಳ ಅಭಿಪ್ರಾಯ.

ಅಂಕೋಲಾ ತಾಲೂಕಿನ ಅಚವೆ ಗ್ರಾಮ ಪಂಚಾಯತ ವ್ಯಾಪ್ತಿಯ ಮಾಬಗಿಯಿಂದ ವಡ್ಡಿಘಾಟ್ ಮೂಲಕ ಶಿರಸಿ ತಲುಪಲು ಇದು ಏಕೈಕ ಮಾರ್ಗವಾಗಿದೆ. ಈಗಾಗಲೇ ಘಟ್ಟ ಪ್ರದೇಶದ 6.25ಕಿಮೀಯಲ್ಲಿ 1.5 ಕಿಮೀ ಡಾಂಬರೀಕರಣ ಪೂರ್ಣಗೊಂಡಿದೆ. ರೂ. 45 ಲಕ್ಷ ಅನುದಾನದಲ್ಲಿ 2.5ಕಿಮೀ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಶಿರಸಿ ವ್ಯಾಪ್ತಿಯಲ್ಲಿ 2ಕಿಮೀ ಹಾಗೂ ಅಂಕೋಲಾ ತಾಲ್ಲೂಕಿನ 2ಕಿಮೀ ರಸ್ತೆ ನಿರ್ಮಾಣ ಆಗಬೇಕಾಗಿದೆ.

ರಸ್ತೆ ಕಾಮಗಾರಿ ಕುರಿತು ವಿವರಿಸಿದ ಎಂಜನೀಯರ್ ರಾಜೇಶ ಶಾನಭಾಗ, ಗೋಕರ್ಣ-ವಡ್ಡಿ-ದೇವನಳ್ಳಿ-ಶಿರಸಿ ಮಾರ್ಗ ಒಟ್ಟೂ 82ಕಿಮೀ ದೂರ ವಿದ್ದು, ರಸ್ತೆಯ ಕೆಲ ಭಾಗದ ಅಭಿ ವೃದ್ಧಿಗೆ 2011-12ನೇ ಸಾಲಿನಲ್ಲಿ ರೂ.45ಲಕ್ಷ ಮಂಜೂರಾ ಗಿದೆ. ಘಟ್ಟ ಪ್ರದೇಶವಾಗಿದ್ದರಿಂದ ಕಾಮಗಾರಿ ತುಸು ನಿಧಾನವಾಗಿ ನಡೆಯುತ್ತಿದೆ ಎಂದರು. ಶೀಘ್ರ ವಡ್ಡಿ ಘಾಟ್ ರಸ್ತೆ ವ್ಯವಸ್ಥಿತಗೊಂಡರೆ ಅನುಕೂಲ ಎಂಬುದು ಜನರ ಅಭಿಪ್ರಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.