ಅಪ್ಸರ ಲೋಕ

ಹೊಳೆಹೊಳೆವ ಹೊಸ ದಿರಿಸು, ಮಿರುಗುವ ಬೆರಗು ಕಣ್ಣು, ನೀಳಕಾಲು, ಬಿಂಕ ಬಿನ್ನಾಣದ ಬಳುಕು ಹೆಜ್ಜೆ... ಚೆಲುವಿನ ಖನಿಯಂತಿದ್ದ ರೂಪಸಿಯರು ಹೆಜ್ಜೆ ಮೇಲೆ ಹೆಜ್ಜೆಯನಿಟ್ಟು ನಡೆದು ಬರುತ್ತಿದ್ದರೆ ಅಲ್ಲೊಂದು ಅಪ್ಸರೆಯರ ಲೋಕವೇ ನಿಧಾನವಾಗಿ ತೆರೆದುಕೊಳ್ಳುತ್ತಿತ್ತು.
ಈ ಭೂಲೋಕ ಸ್ವರ್ಗ ಮೈದಳೆದದ್ದು ನಗರದ ಹೋಟೆಲ್ ಷೆರಾಟನ್ನಲ್ಲಿ. ವಸ್ತ್ರವಿನ್ಯಾಸಕರಾದ ಲೀನಾ ಸಿದ್ಧಪಡಿಸಿದ ಉಡುಪು ತೊಟ್ಟ ರೂಪದರ್ಶಿಯರು ಬಳುಕುತ್ತಾ ನಡೆದರು.
‘ಬೆಂಗಳೂರು ಫ್ಯಾಷನ್ ವೀಕ್ 15ನೇ ಆವೃತ್ತಿ’ ಕಾರ್ಯಕ್ರಮದಲ್ಲಿ ಅನಾವರಣಗೊಂಡ ಚಂದಕಿಂತ ಚಂದದ ಉಡುಗೆಗಳನ್ನು ಮತ್ತು ಅವನ್ನು ತೊಟ್ಟ ಸುಂದರ ಯುವತಿಯರನ್ನು ಅಚ್ಚುಕಟ್ಟಾಗಿ ಕ್ಯಾಮೆರಾದಲ್ಲಿ ಸೆರೆ ಹಿಡಿದವರು ಸತೀಶ್ ಬಡಿಗೇರ್.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.