ಅಬಕಾರಿ ಕಚೇರಿ ಸ್ಥಳಾಂತರ: ಪ್ರತಿಭಟನೆ

7

ಅಬಕಾರಿ ಕಚೇರಿ ಸ್ಥಳಾಂತರ: ಪ್ರತಿಭಟನೆ

Published:
Updated:

ಬಂಗಾರಪೇಟೆ: ಅಬಕಾರಿ ಕಚೇರಿಯನ್ನು ಪಟ್ಟಣದಿಂದ ರಾತ್ರೋ ರಾತ್ರಿ ಕೆಜಿಎಫ್ ಸಮೀಪದ ಪಾರಾಂಡಹಳ್ಳಿಗೆ ಸ್ಥಳಾಂತರಿಸಿರುವುದನ್ನು ವಿರೋಧಿಸಿ ಕರ್ನಾಟಕ ದಲಿತ ಸಿಂಹ ಸೇನೆ ಕಾರ್ಯಕರ್ತರು ಪಟ್ಟಣದ ಅಬಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ತಾಲ್ಲೂಕಿನ ಕೇಂದ್ರ ಸ್ಥಾನದಲ್ಲಿ ಇದುವರೆಗೂ ಕಾರ್ಯನಿರ್ವಹಿಸುತ್ತಿದ್ದ ಕಚೇರಿಯನ್ನು ಸರ್ಕಾರದ ಆದೇಶವಿಲ್ಲದೆ ಸ್ಥಳಾಂತರಿಸಿರುವುದು ಖಂಡನೀಯ. ಈ ಬಗ್ಗೆ ನಿರ್ಧಾರ ಕೈಗೊಂಡಿರುವ ಅಬಕಾರಿ ನಿರೀಕ್ಷಕ ರಘುನಾಥರೆಡ್ಡಿ ಅಮಾನತು ಮಾಡಬೇಕೆಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಸೂಲಿಕುಂಟೆ ಆನಂದ್, ತಾಲ್ಲೂಕು ಅಧ್ಯಕ್ಷ ಹುಣಸನಹಳ್ಳಿ ರಮೇಶ್, ಕಾರ್ಯದರ್ಶಿ ಮುತ್ತೇನಹಳ್ಳಿ ಕೃಷ್ಣಪ್ಪ, ಪಿಳ್ಳಪ್ಪ ಮುಂತಾದವರು ಹಾಜರಿದ್ದರು.ಅಪರಿಚಿತ ಮಹಿಳೆ ಶವ ಪತ್ತೆ

ಮುಳಬಾಗಲು:
ತಾಲ್ಲೂಕಿನ ಭೀಮಪುರ ಗ್ರಾಮದ ಹೊರವಲಯದ ಬೊಡಿಬಂಡ ಗುಡ್ಡದ ಮೇಲೆ ಬುಧವಾರ 30 ವರ್ಷ ವಯಸ್ಸಿನ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದೆ.

ಮಹಿಳೆಯನ್ನು ಹತ್ಯೆ ಮಾಡಿ ಗುರುತು ಸಿಗದಷ್ಟು ಸುಟ್ಟು ಹಾಕಲಾಗಿದೆ. ವೈರಿನಿಂದ ಕತ್ತು ಹಿಸುಕಿರುವುದು ಕಂಡು ಬಂದಿದೆ. ಮಂಗಳವಾರ ರಾತ್ರಿ ಕೊಲೆ ನಡೆದಿರಬಹುದು ಎಂದು ಸಬ್ ಇನ್ಸ್‌ಪೆ ಕ್ಟರ್ ಬಸವರಾಜ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry