ಮಂಗಳವಾರ, ಜನವರಿ 21, 2020
28 °C

ಅಬಕಾರಿ ಸುಂಕ ರದ್ದು ಮಾಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿವೇಚನಾರಹಿತವಾಗಿ ವಿಧಿಸಿರುವ ಅಬಕಾರಿ ಸುಂಕವನ್ನು ಕೂಡಲೇ ತೆಗೆದುಹಾಕುವಂತೆ ಜವಳಿ ಮಂತ್ರಾಲಯವನ್ನು ದಕ್ಷಿಣ ಭಾರತ ಗಾರ್ಮೆಂಟ್ ಒಕ್ಕೂಟದ ಅಧ್ಯಕ್ಷ ಕುಂದನ್‌ಜೈನ್ ಒತ್ತಾಯಿಸಿದ್ದಾರೆ.ಸಿದ್ಧ ಉಡುಪು ತಯಾರಿಕೆಗೆ ಅಬಕಾರಿ ಸುಂಕವನ್ನು ವಿಧಿಸಲಾಗುತ್ತಿದೆ ಆದರೆ ಸಾಂಪ್ರದಾಯಿಕವಾಗಿ ಲೇಬಲ್ ಇಲ್ಲದೇ ಎಷ್ಟೋ ಸಿದ್ಧ ಉಡುಪುಗಳು ಈ ವ್ಯಾಪ್ತಿಯಿಂದ ಹೊರಗಿವೆ. ಆದ್ದರಿಂದ ಗಾರ್ಮೆಂಟ್‌ನಲ್ಲಿ ತಯಾರಾಗುವ  ಸಿದ್ಧ ಉಡುಪುಗಳನ್ನು  ಈ ವ್ಯಾಪ್ತಿಯಿಂದ ಹೊರಗಿಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಪ್ರತಿಕ್ರಿಯಿಸಿ (+)