ಗುರುವಾರ , ಜೂನ್ 17, 2021
29 °C

ಅಬೋಟಾಬಾದ್‌ನಲ್ಲಿ ಸಿಕ್ಕಿದ ಮಾಹಿತಿ:ಒಬಾಮ ಹತ್ಯೆಗೆ ಅಲ್‌ಖೈದಾ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್(ಪಿಟಿಐ):  ಅಲ್‌ಖೈದಾ ಮುಖ್ಯಸ್ಥ ಒಸಾಮ ಬಿನ್ ಲಾಡೆನ್ ತನ್ನ  ಕೊನೆಯ ದಿನಗಳಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರನ್ನು ಹತ್ಯೆಗೈಯುವ ಮತ್ತು ಅಮೆರಿಕಾದ ಮೇಲೆ ಪರಿಣಾಮಕಾರಿ ದಾಳಿ ನಡೆಸುವ ಯೋಜನೆ ರೂಪಿಸಿದ್ದ ಎಂದು ಮಾಧ್ಯಮವೊಂದು ಶನಿವಾರ ಬಯಲುಗೊಳಿಸಿದೆ.ಇದಕ್ಕೆ ಸಂಬಂಧಿಸಿದ ಮಾಹಿತಿಗಳು ಅಬೋಟಾಬಾದ್‌ನಲ್ಲಿ ಲಾಡೆನ್ ಮನೆಯಿಂದ ವಶಪಡಿಸಿಕೊಂಡಿದ್ದ ಹಾಡ್‌ಡಿಸ್ಕ್‌ಗಳಿಂದ ಲಭ್ಯವಾಗಿವೆ ಎಂಬುದನ್ನೂ ಅದು ತಿಳಿಸಿದೆ.ಒಬಾಮ ಹತ್ಯೆಯ ನಂತರ ಉಪಾಧ್ಯಕ್ಷ ಜಾಯ್ ಬಿಡೆನ್ ಅಧಿಕಾರ ವಹಿಸಿಕೊಳ್ಳಲಿದ್ದು, ಆಗ ಉದ್ಭವಿಸುವ ಗೊಂದಲಮಯ ಪರಿಸ್ಥಿತಿಯನ್ನು ನಿಭಾಯಿಸಲು ಬಿಡೆನ್ ವಿಫಲರಾಗುತ್ತಾರೆ. ಆ ಪರಿಸ್ಥಿತಿಯ ಲಾಭವನ್ನು ನಾವು ಪಡೆಯಬೇಕು ಎಂದು ಲಾಡೆನ್ ತನ್ನ ಸಹಚರರಿಗೆ ಬರೆದಿದ್ದ ಪತ್ರವೂ ಈಗ ಅಮೆರಿಕ ಸೇನೆಯ ವಶದಲ್ಲಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.