ಸೋಮವಾರ, ಏಪ್ರಿಲ್ 12, 2021
24 °C

ಅಭಿವೃದ್ಧಿಯಲ್ಲಿ ವಿಶ್ವಕರ್ಮರ ಕೊಡುಗೆ ಅಪಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂಡಿಗೆರೆ: `ರಾಜ್ಯದ ಅಭಿವೃದ್ಧಿಯಲ್ಲಿ ವಿಶ್ವಕರ್ಮ ಜನಾಂಗದ ಪಾತ್ರ ಮಹತ್ತರವಾಗಿದೆ. ಆದರೆ ಈ ಸಮುದಾಯ ಮಾತ್ರ ಅತ್ಯಂತ ಹಿಂದುಳಿದಿದೆ~ ಎಂದು ತಾಲ್ಲೂಕು ವಿಶ್ವಕರ್ಮ ಸಂಘಟನೆಯ ಅಧ್ಯಕ್ಷ ಘಟ್ಟದಹಳ್ಳಿ ಜಿ.ಡಿ. ಮಂಜುನಾಥ್ ಆಚಾರ್ ಹೇಳಿದರು.ಮೈಸೂರಿನಲ್ಲಿ ಇದೇ 8 ರಿಂದ 18 ರವರೆಗೆ ನಡೆಯಲಿರುವ ವಿಶ್ವಕರ್ಮ ಜನಾಂಗದ ರಾಜ್ಯ ಮಟ್ಟದ ಸಮಾವೇಶಕ್ಕೆ ಬೆಂಬಲ ಕೋರಿ ಶುಕ್ರವಾರ ಪಟ್ಟಣದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.ವಿಶ್ವಕರ್ಮರು ಇಂದಿಗೂ ಮರದ ಕೆಲಸ, ಕಮ್ಮಾರಿಕೆ, ಚಿನ್ನದ ಕೆಲಸಗಳಂತಹ ಗುಡಿ ಕೈಗಾರಿಕೆಗಳನ್ನು ಮುನ್ನೆಡೆಸಿಕೊಂಡು ಬರುತ್ತಿದ್ದಾರೆ. ಆದರೆ ಇಂದು ಆಧುನಿಕತೆಯ ಭರದಲ್ಲಿ ಗುಡಿಕೈಗಾರಿಕೆಗಳು ನಶಿಸುತ್ತಿದ್ದು, ಸರ್ಕಾರ ಮರದ ಕೆತ್ತನೆ, ಕಮ್ಮಾರಿಕೆ ಗಳಿಗೆ ಪ್ರೋತ್ಸಾಹದಾಯಕ ಯೋಜನೆಗಳನ್ನು ರೂಪಿಸಬೇಕು ಎಂದು ಒತ್ತಾಯಿಸಿದರು.ವಿಶ್ವಕರ್ಮ ಸಂಘಟನೆಯ ತಾಲ್ಲೂಕು ಕಾರ್ಯದರ್ಶಿ ಮಂಜುನಾಥ್ ಆಚಾರ್ ಮಾತನಾಡಿ ವಿಶ್ವಕರ್ಮ ಜನಾಂಗವು ಹಿಂದುಳಿದ ವರ್ಗದ 2 ಎ ಗುಂಪಿನಲ್ಲಿದ್ದು, ಈ ಗುಂಪಿಗೆ ನೀಡುವ ಮೀಸಲಾತಿಗಳೆಲ್ಲವನ್ನೂ ಗುಂಪಿನಲ್ಲಿರುವ ಬಲಿಷ್ಠ ಜನಾಂಗಗಳು ಉಪಯೋಗಿಸಿಕೊಳ್ಳುತ್ತಿವೆ. 2 ಎ ಗೆ ನೀಡುವ ಶೇಕಡ 15 ರ ಮೀಸಲಾತಿಯಲ್ಲಿ ಶೇ. 3 ರಷ್ಟನ್ನು ವಿಶ್ವಕರ್ಮ ಜನಾಂಗಕ್ಕೆ ಒಳ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು.ಸಂಘಟನೆಯ ಗೌರವ ಅಧ್ಯಕ್ಷ ಹಾಗೂ ನಿವೃತ್ತ ಉಪ ತಹಶೀಲ್ದಾರ್ ಗಣಪತಿ ಆಚಾರ್ ಮಾತನಾಡಿ, ಜನಾಂಗದ ವಿದ್ಯಾಭ್ಯಾಸಕ್ಕೆ ಸರ್ಕಾರವು ವಿಶೇಷ ಯೋಜನೆಗಳನ್ನು ರೂಪಿಸಿ ವಿಶ್ವಕರ್ಮ ಜನಾಂಗವನ್ನು ಸಮಾಜದ ಮುಖ್ಯವಾಹಿನಿಗೆ ಕರೆತರಬೇಕು ಎಂದರು.ಪ್ರತಿಭಟನೆಯ ನಂತರ ತಹಶೀಲ್ದಾರ್ ಮಂಜುನಾಥ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.  ಸಂಘಟನೆಯ ಪದಾಧಿಕಾರಿಗಳಾದ ವಿಠಲಾಚಾರ್, ಪರಮೇಶ್ ಆಚಾರ್, ರಮೇಶ್ ಆಚಾರ್, ಸುಬ್ರಮಣ್ಯಾಚಾರ್, ಶ್ರೀನಿವಾಸಾಚಾರ್, ಮಂಜುನಾಥ್ ಆಚಾರ್, ಚಂದ್ರಾಚಾರ್ ಇದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.