ಹೊಳೆಹೊನ್ನೂರು: ರೈತರ, ಯುವಕರ, ಮಹಿಳೆಯರು ಹಾಗೂ ಹಿಂದುಳಿದ ವರ್ಗದ ಕ್ಷೇತ್ರದ ಜನತೆಯ ಹಿತಕಾಯಲು ಎಸ್ಸಿ, ಎಸ್ಟಿ ಕಾಲೊನಿಗಳಲ್ಲಿ ಸಿಮೆಂಟ್ ರಸ್ತೆ ಮತ್ತು ಬಾಕ್ಸ್ ಚರಂಡಿ, ವಾಟರ್ ಟ್ಯಾಂಕ್ ನಿರ್ಮಾಣ ಕಾಮಗಾರಿಗಳನ್ನು ಶಂಕುಸ್ಥಾಪನೆ ಮಾಡಿ ಕ್ಷೇತ್ರದ ಜನತೆಗೆ ಕೆಲಸ ಮಾಡಿ ತೋರಿಸುವ ಮೂಲಕ ಜನಜಾಗೃತಿ ಮಾಡುವುದಾಗಿ ಶಾಸಕ ಬಿ.ಕೆ. ಸಂಗಮೇಶ್ವರ ತಿಳಿಸಿದರು.

ಸಮೀಪದ ನಾಗತಿಬೆಳಗಲು ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳಲ್ಲಿ ಹಮ್ಮಿಕೊಂಡಿದ್ದ ಭದ್ರಾ ಯೋಜನೆಯ ಎಸ್ಸಿಪಿ ಅಡಿಯಲ್ಲಿ ವಿವಿಧ ಕಾಮಗಾರಿ ಉದ್ಘಾಟಿಸಿ, ಗ್ರಾ.ಪಂ. ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಾಗತಿಬೆಳಗಲು ಗ್ರಾ.ಪಂ. ವ್ತಾಪ್ತಿಯ ಹೊಸಹಳ್ಳಿ, ನಾಗತಿಬೆಳಗಲು ತಾಂಡಾ, ತಳ್ಳಿಕಟ್ಟೆ, ಗ್ರಾಮಗಳಿಗೆ ್ಙ 3 ಕೋಟಿ 20 ಲಕ್ಷ ವೆಚ್ಚದಲ್ಲಿ ಸಿಮೆಂಟ್ ರಸ್ತೆ ಮತ್ತು ಡ್ರೈನೇಜ್ ಕಾಮಗಾರಿ ಗುದ್ದಲಿಪೂಜೆ ಕಾರ್ಯಕ್ರಮ ನೆರವೇರಿಸಿ, ಅವುಗಳನ್ನು ಪಕ್ಷಾತೀತವಾಗಿ, ಜಾತ್ಯತೀತವಾಗಿ, ವಿಷಯಾಧಾರಿತವಾಗಿ ಕೆಲಸ ಮಾಡುತ್ತಾ, ಕ್ಷೇತ್ರದಲ್ಲಿ ಉಳಿದಿರುವ ಇತರೆ ಕೆಲಸಗಳನ್ನು ಹಂತಹಂತವಾಗಿ ನೆರವೇರಿಸಲಾಗುವುದು ಎಂದು ಆವರು ತಿಳಿಸಿದರು.

ಸಭೆಯಲ್ಲಿ ಹೊಳೆಹೊನ್ನೂರು ಜಿ.ಪಂ. ಕ್ಷೇತ್ರದ ಸದಸ್ಯ ಎಚ್.ಎಲ್. ಷಡಾಕ್ಷರಿ, ಕೂಡ್ಲಿಗೆರೆ ಜಿ.ಪಂ. ಕ್ಷೇತ್ರದ ಸದಸ್ಯೆ ಸುಜಾತಾ, ಭದ್ರಾವತಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಹಾಲಪ್ಪ, ತಳ್ಳಿಕಟ್ಟೆ ಗ್ರಾಮದ ಮುಖಂಡ ಟಿ.ಎಸ್ ಮಂಜುನಾಥ್, ಪಿಎಲ್ಡಿ ಬ್ಯಾಂಕ್ ಸದಸ್ಯ ಹೊಸಹಳ್ಳಿ ಚನ್ನಬಸಪ್ಪ, ಗ್ರಾಮದ ಮುಖಂಡರಾದ ಬಿ.ಜಿ. ನಾಗೇಂದ್ರಪ್ಪಗೌಡ, ಜಯಕುಮಾರ್ ಸ್ವಾಮಿ, ಗ್ರಾ.ಪಂ. ಮಾಜಿ ಅಧ್ಯಕ್ಷ ಸುರೇಶ್, ಹೆಬ್ಬಂಡಿ ಹನುಮಂತಪ್ಪ, ಸದಸ್ಯರಾದ ರಂಗಪ್ಪ, ಮುನಿಸ್ವಾಮಿ. ಸುಮಲತಾ, ಮಂಗೋಟೆ ನಂಜುಂಡಪ್ಪ, ಪಾರ್ವತಿಬಾಯಿ ಹಾಜರಿದ್ದರು.

ನಾಗತಿಬೆಳಗಲು ಗ್ರಾ.ಪಂ. ಅಧ್ಯಕ್ಷ ಭೀಮನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಹಾಲೇಶ್ನಾಯ್ಕ ಸ್ವಾಗತಿಸಿದರು. ಸತ್ಯಂನವರ್ ವಂದಿಸಿದರು. ಎಂ.ಎಚ್. ಅಣ್ಣಪ್ಪ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.