ಸೋಮವಾರ, ಜೂನ್ 14, 2021
26 °C

ಅಭಿವೃದ್ಧಿ ಮರೆತ ಶಾಸಕ: ಜಯಣ್ಣ ಕಟು ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಳ್ಳೇಗಾಲ: `ಪಟ್ಟಣದ ಅಭಿವೃದ್ಧಿ ಯಲ್ಲಿ ಶಾಸಕರ ಸಾಧನೆ ಶೂನ್ಯ. ಸರ್ಕಾರದಿಂದ ಒಂದು ಬಿಡಿಗಾಸು ವಿಶೇಷ ಅನುದಾನ ದೊರೆತಿಲ್ಲ~ ಎಂದು ಮಾಜಿ ಶಾಸಕ ಎಸ್. ಜಯಣ್ಣ ಆರೋಪಿಸಿದರು.ಪಟ್ಟಣದ ಲೋಕೋಪಯೋಗಿ ಪರಿವೀಕ್ಷಣಾ ಮಂದಿರದಲ್ಲಿ ಬುಧವಾರ ಸುದ್ದಿಗಾರರೊಡನೆ ಮಾತನಾಡಿದ ಅವರು, ಶಾಸಕರು ಪಟ್ಟಣದ ಅಭಿವೃದ್ಧಿ ಮಾಡುವುದಿರಲಿ. ಅವರಲ್ಲಿ ಪ್ರಗತಿ ಬಗ್ಗೆ ಆಲೋಚನೆಯೇ ಇಲ್ಲ. ಪಟ್ಟಣದ ಅಭಿವೃದ್ಧಿ ಬಗ್ಗೆ ಯಾವುದೇ ಯೋಜನೆ ಯನ್ನು ಸರ್ಕಾರಕ್ಕೆ ಸಲ್ಲಿಸಿಲ್ಲ. ಅಂತಹ ಗುಣ ಹಾಗೂ ಅಭಿಪ್ರಾಯ ಅವರಲ್ಲಿ ಇಲ್ಲವೇ ಇಲ್ಲ ಎಂದು ಜರಿದರು.ಸಂಸದ ಆರ್.ಧ್ರುವನಾರಾಯಣ ಶಾಸಕರಾಗಿದ್ದ ಸಂದರ್ಭದಲ್ಲಿ ಪಟ್ಟಣದ ಅಭಿವೃದ್ಧಿಗೆ ಉತ್ತಮ ಅಡಿಪಾಯ ಹಾಕಿದ್ದರು. ಅವರಿಂದಾಗಿ ಪಟ್ಟಣದಲ್ಲಿ 1 ಕೋಟಿ ವೆಚ್ಚದಲ್ಲಿ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಳಿ ಗಡಿನಾಡ ಭವನ ನಿರ್ಮಾಣಗೊಳ್ಳು ತ್ತಿದೆ. 70 ಲಕ್ಷ ಅಂದಾಜು ವೆಚ್ಚದಲ್ಲಿ ಸ್ಟೇಡಿಯಂ ಕಾರ್ಯ ಪ್ರಗತಿಯಲ್ಲಿದೆ. ಪಟ್ಟಣದಲ್ಲಿ  ಹಿಂದುಳಿ ದವರ ಹಾಸ್ಟೆಲ್ ಕಾರ್ಯಾರಂಭವಾಗಿದೆ. ನಗರಸಭೆ ವಾರ್ಷಿಕ ಅನುದಾನದಲ್ಲಿ ಮಾತ್ರ ನಗರ ಸಭೆಯಲ್ಲಿ ಕೆಲಸಗಳಾಗುತ್ತಿವೆ. ನಂತರ ಬೆಳವಣಿಗೆಯಲ್ಲಿ ಕ್ಷೇತ್ರದ ಶಾಸಕರ ಕೊಡುಗೆ ಪಟ್ಟಣಕ್ಕೆ ಶೂನ್ಯ ಎಂದರು.ಉಪಚುನಾವಣೆ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕೊಳ್ಳೇಗಾಲ ಪಟ್ಟಣವನ್ನು ದತ್ತು ತೆಗೆದುಕೊಂಡು ಸರ್ವಾಂಗೀಣ ಅಭಿವೃದ್ಧಿಯ ಭರವಸೆ ನೀಡಿದ್ದರು. ಈ ಭರವಸೆ ಈಡೇರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಟೀಕೆ ಮಾಡಿದರು.ಪಟ್ಟಣದ ಅಭಿವೃದ್ಧಿ ಬಗ್ಗೆ ಸಂಸದರ ಜತೆ ಶಾಸಕರು ಒಂದೇ ಒಂದು ಸಭೆ ನಡೆಸಿಲ್ಲ. ನಗರಸಭೆ ಸದಸ್ಯರುಗಳನ್ನು ಸಹ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಮನಸ್ಸು ಮಾಡಿಲ್ಲ. ಬಂದ ಅಧಿಕಾರಿಗಳಿಗೆ ನಗರಸಭೆ ಸದಸ್ಯರ ಯಾವುದೇ ಕೆಲಸ ಮಾಡಬಾರದು ಎಂದು ಸೂಚಿಸುವುದೇ ಅವರ ಮುಖ್ಯ ಅಜೆಂಡಾ. ಶಾಸಕರಾದವರು ಮೊದಲು ಎಲ್ಲ ವಾರ್ಡ್‌ಗಳ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರದ ಯೋಜನೆಗಳ ಅನುಷ್ಠಾನಕ್ಕೆ ಮುಂದಾಗ ಬೇಕು. ತಾವು ಪಕ್ಷವನ್ನು ತೊರೆದಾಗ ತಮ್ಮನ್ನು ಹಿಂಬಾಲಿಸಲಿಲ್ಲ ಎಂಬುದನ್ನೇ ಮುಖ್ಯವಾಗಿಸಿಕೊಂಡು ಸದಸ್ಯರು ಗಳನ್ನು ಕಡೆಗಣಿಸುತ್ತಿದ್ದಾರೆ ಇದು ಆರೋಪಿಸಿದರು.ನಗರಸಭೆ ಅಧ್ಯಕ್ಷೆ ಮಂಗಳಗೌರಿ ಮಾತನಾಡಿ, ಶಾಸಕರು ಒಂದು ವರ್ಷ ವಾದರೂ ನಗರಸಭೆಗೆ ಆಯುಕ್ತರನ್ನು ನೇಮಕ ಮಾಡುವ ಬಗ್ಗೆ ಕ್ರಮವಹಿಸದೇ ತೊಂದರೆಯಾಗಿದೆ. ತಕ್ಷಣವೇ ಅಧಿಕಾರಿಯನ್ನು ನೇಮಿಸಲು ಶಾಸಕರು ಮುಂದಾಗಬೇಕು ಎಂದು ಹೇಳಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ನಗರಸಭೆ ಉಪಾಧ್ಯಕ್ಷ ಅಕ್ಮಲ್ ಪಾಷ, ನಗರಸಭಾ ಸದಸ್ಯ ಮುಡಿಗುಂಡ ಶಾಂತರಾಜು, ಎ.ಬಿ. ಶಂಕರ್, ಬಸ್ತೀಪುರ ಶಾಂತರಾಜು, ಮುಖಂಡ ಶಿವಮಲ್ಲು ಇತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.