ಬೆಂಗಳೂರು: ಅಭಿವೃದ್ಧಿಯ ವಿವಿಧ ಮಾನದಂಡಗಳಲ್ಲಿ ನೆರೆಯ ಕೇರಳ, ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳಿಗಿಂತ ಕರ್ನಾಟಕ ಹಿಂದುಳಿದಿರುವ ಸಂಗತಿಯನ್ನು 2011ನೇ ಸಾಲಿನ ಮನೆ ಗಣತಿಯ ಮುಖ್ಯಾಂಶಗಳು ಬಯಲು ಮಾಡಿವೆ.

ವಿದ್ಯುತ್ ಸಂಪರ್ಕ, ಕುಡಿಯುವ ನೀರಿನ ಸೌಲಭ್ಯ, ಶೌಚಾಲಯಗಳು, ಸಾರಿಗೆ ಮತ್ತು ದೂರಸಂಪರ್ಕ ಕ್ಷೇತ್ರಗಳಲ್ಲಿ ಕೇರಳ, ದಕ್ಷಿಣ ಭಾರತದ ಉಳಿದೆಲ್ಲ ರಾಜ್ಯಗಳಿಗಿಂತ ಮುಂದಿದೆ.

ವಿದ್ಯುತ್: ವಿದ್ಯುತ್ ಸಂಪರ್ಕ ಹೊಂದುವಲ್ಲಿ ದಕ್ಷಿಣ ಭಾರತದ ರಾಜ್ಯಗಳ ಪೈಕಿ ಕರ್ನಾಟಕ ಕಡೆಯ ಸ್ಥಾನದಲ್ಲಿದೆ. ಇಲ್ಲಿ ಶೇಕಡ 90.6ರಷ್ಟು ಮನೆಗಳಿಗೆ ಮಾತ್ರ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಕೇರಳದ ಶೇಕಡ 94.4ರಷ್ಟು ಮನೆಗಳಿಗೆ ವಿದ್ಯುತ್ ಸಂಪರ್ಕ ಇದ್ದರೆ, ತಮಿಳುನಾಡಿನ ಶೇಕಡ 93.4ರಷ್ಟು ಮನೆಗಳು ವಿದ್ಯುತ್ ಸಂಪರ್ಕ ಪಡೆದಿವೆ. ಆಂಧ್ರಪ್ರದೇಶದಲ್ಲಿ ಈ ಸಂಖ್ಯೆ ಶೇಕಡ 92.2ರಷ್ಟಿದೆ.
ಇದರ ಪರಿಣಾಮ ಎಂಬಂತೆ ಸೀಮೆಎಣ್ಣೆ ಬಳಕೆಯಲ್ಲಿ ಕರ್ನಾಟಕ ಉಳಿದ ಮೂರು ರಾಜ್ಯಗಳಿಗಿಂತ ಮುಂದಿದೆ!

ಕುಡಿಯುವ ನೀರು: ಕುಡಿಯುವ ನೀರಿನ ಸಂಪರ್ಕ ಅತ್ಯಂತ ಹೆಚ್ಚಿರುವ ರಾಜ್ಯ ತಮಿಳುನಾಡು (ಶೇ 79.8ರಷ್ಟು). ಈ ಪಟ್ಟಿಯಲ್ಲಿ ಕರ್ನಾಟಕಕ್ಕೆ ಮೂರನೆಯ ಸ್ಥಾನ (ಶೇ 66.1ರಷ್ಟು). ಎರಡನೆಯ ಸ್ಥಾನದಲ್ಲಿರುವ ಆಂಧ್ರಪ್ರದೇಶದ ಶೇ 69.9ರಷ್ಟು ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಇದೆ. ಆದರೆ ಈ ವಿಷಯದಲ್ಲಿ ಕೇರಳ ತೀರಾ ಹಿಂದುಳಿದಿದ್ದು, ಅಲ್ಲಿನ ಶೇ 29.3ರಷ್ಟು ಮನೆಗಳಿಗೆ ಮಾತ್ರ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗಿದೆ ಎಂದು ಗಣತಿ ಹೇಳುತ್ತದೆ.

ಆದರೆ ಕೇರಳದ ಶೇ 62ರಷ್ಟು ಮನೆಗಳು ಬಾವಿಯ ಸೌಕರ್ಯ ಹೊಂದಿವೆ. ಕರ್ನಾಟಕದ ಶೇ 9ರಷ್ಟು ಮನೆಗಳಿಗೆ ಮಾತ್ರ ಈ ಸೌಲಭ್ಯವಿದೆ. ಕರ್ನಾಟಕದಲ್ಲಿ ಕೊಳವೆ ಬಾವಿ ಹೊಂದಿರುವ ಮನೆಗಳ ಶೇಕಡಾವಾರು ಸಂಖ್ಯೆ 21.5 ರಷ್ಟಿದೆ.

ಶೌಚಾಲಯ: ನೀರಿನ ಸೌಕರ್ಯ ಇರುವ ಶೌಚಾಲಯ ಹೊಂದಿರುವ ಮನೆಗಳ ಸಂಖ್ಯೆ ಕೇರಳದಲ್ಲಿ ಅತಿಹೆಚ್ಚು (ಶೇ 66.7ರಷ್ಟು). ಈ ಪಟ್ಟಿಯಲ್ಲಿ ಕಡೆಯ ಸ್ಥಾನ ಪಡೆದುಕೊಂಡಿರುವ ಕರ್ನಾಟಕದ ಶೇ 36.9ರಷ್ಟು ಮನೆಗಳು ಮಾತ್ರ ನೀರಿನ ಸೌಕರ್ಯ ಇರುವ ಶೌಚಾಲಯಗಳನ್ನು ಹೊಂದಿವೆ.

ನೀರಿನ ನೇರ ಸಂಪರ್ಕ ಇಲ್ಲದ ಶೌಚಾಲಯ ಹೊಂದಿರುವ ಮನೆಗಳ ಸಂಖ್ಯೆ ಕರ್ನಾಟಕದಲ್ಲಿ ಶೇ 13.6ರಷ್ಟು. ಕೇರಳದಲ್ಲಿ ಈ ಪ್ರಮಾಣ ಶೇ 28.3ರಷ್ಟಿದೆ. ಕೇರಳದ ಶೇ 4.8ರಷ್ಟು ಮನೆಗಳು ಮಾತ್ರ ಶೌಚಾಲಯ ಸೌಲಭ್ಯ ಹೊಂದಿಲ್ಲ ಎಂದು ಗಣತಿಯ ಅಂಕಿ-ಅಂಶಗಳು ಬಹಿರಂಗಪಡಿಸಿವೆ. ತಮಿಳುನಾಡಿನ ಶೇ 51.7ರಷ್ಟು ಮತ್ತು ಆಂಧ್ರಪ್ರದೇಶದ ಶೇ 50.4ರಷ್ಟು ಮನೆಗಳು ಶೌಚಾಲಯ ಹೊಂದಿಲ್ಲ.

ಇಂಟರ್ನೆಟ್: ಕಂಪ್ಯೂಟರ್ ಹೊಂದಿರುವ ಮನೆಗಳ ಸಂಖ್ಯೆಯೂ ಕೇರಳದಲ್ಲಿ ಹೆಚ್ಚಾಗಿದೆ (ಶೇ 15.8). ಅಲ್ಲಿನ ಶೇ 6.3ರಷ್ಟು ಮನೆಗಳು ಇಂಟರ್ನೆಟ್ ಸೌಲಭ್ಯ ಪಡೆದಿವೆ. ಕರ್ನಾಟಕದ ಶೇ 12.8ರಷ್ಟು ಮನೆಗಳಲ್ಲಿ ಕಂಪ್ಯೂಟರ್ ಸೌಲಭ್ಯ ಇದ್ದರೆ, ಶೇ 4.8ರಷ್ಟು ಮನೆಗಳಲ್ಲಿ ಇಂಟರ್ನೆಟ್ ಸೌಕರ್ಯ ಇದೆ.

ಕಂಪ್ಯೂಟರ್ ಇರುವ ಮನೆಗಳು ಮತ್ತು ಇಂಟರ್ನೆಟ್ ಸಂಪರ್ಕ ಪಡೆದಿರುವ ಮನೆಗಳ ಪ್ರಮಾಣ ಆಂಧ್ರಪ್ರದೇಶದಲ್ಲಿ ಕ್ರಮವಾಗಿ ಶೇ 8.4ರಷ್ಟು ಮತ್ತು ಶೇ 2.6ರಷ್ಟಿದೆ. ತಮಿಳುನಾಡಿನಲ್ಲಿ ಈ ಪ್ರಮಾಣ ಶೇ 10.6ರಷ್ಟು ಮತ್ತು ಶೇ 4.2ರಷ್ಟಿದೆ.

ದೂರವಾಣಿ: ಸ್ಥಿರ ಅಥವಾ ಮೊಬೈಲ್ ದೂರವಾಣಿ ಸಂಪರ್ಕ ಹೊಂದಿರುವ ಮನೆಗಳ ಪಟ್ಟಿಯಲ್ಲೂ ಕೇರಳ ಪ್ರಾಬಲ್ಯ ಮೆರೆದಿದೆ. ಕೇರಳದ ಶೇ 89.7ರಷ್ಟು ಮನೆಗಳಿಗೆ ದೂರವಾಣಿ ಸಂಪರ್ಕ ಇದೆ. ತಮಿಳುನಾಡಿನ ಶೇ 74.9ರಷ್ಟು ಮನೆಗಳಿಗೆ ಈ ಸಂಪರ್ಕ ಇದೆ.

ಕರ್ನಾಟಕದ ಶೇ 56.5ರಷ್ಟು ಮನೆಗಳು ಮೊಬೈಲ್ ದೂರವಾಣಿ ಸಂಪರ್ಕ ಮತ್ತು ಶೇ 7ರಷ್ಟು ಮನೆಗಳು ಸ್ಥಿರ ದೂರವಾಣಿ ಸಂಪರ್ಕ ಹೊಂದಿವೆ. ಟಿ.ವಿ/ರೇಡಿಯೊ: ಕರ್ನಾಟಕದ ಶೇ 60ರಷ್ಟು ಮನೆಗಳಲ್ಲಿ ಟಿ.ವಿ ಸೌಲಭ್ಯ ಇದೆ ಎಂದು ಗಣತಿಯಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.