ಹೈದರಾಬಾದ್ ಕರ್ನಾಟಕ ಪ್ರದೇಶದ ಆರು ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ನೀಡಿ ಸಮಗ್ರ ಅಭಿವೃದ್ಧಿ ಮಾಡಬೇಕು ಎಂಬ ಜನರ ಒತ್ತಾಯ ಕಾರ್ಯಗತವಾಗುವ ಲಕ್ಷಣಗಳು ಕಾಣುತ್ತಿವೆ. ಹೈ ಕ ಭಾಗದ ಜನರು ಅಂತಹ ಕ್ಷಣಗಳಿಗಾಗಿ ಎದುರು ನೋಡುತ್ತಿದ್ದಾರೆ.

ಸಮಗ್ರ ಅಭಿವೃದ್ಧಿ ಎಂದರೆ ಶಿಕ್ಷಣ, ಉದ್ಯೋಗ ಮೀಸಲಾತಿ ಸೇರಿದಂತೆ ಆರೂ ಜಿಲ್ಲೆಗಳನ್ನು ರಾಜ್ಯ ಮುಂದುವರಿದ ಜಿಲ್ಲೆಗಳ ಸಮಾನವಾಗಿ ಅಭಿವೃದ್ಧಿಪಡಿಸುವುದು. ಅದಕ್ಕಾಗಿ ಒಂದು ಪ್ರತ್ಯೇಕ ಅಭಿವೃದ್ಧಿ ಮಂಡಳಿ ರಚಿಸುವುದು ಉದ್ದೇಶಿತ ಪ್ರಸ್ತಾವದಲ್ಲಿದೆ. ಈ ಮಂಡಳಿಯಲ್ಲಿ ಶೈಕ್ಷಣಿಕವಾಗಿ, ಆರ್ಥಿಕ ಪರಿಣತಿ ಹೊಂದಿದ ತಜ್ಞ ಸದಸ್ಯರು ಇರುವಂತೆ ಸರ್ಕಾರ ನೋಡಿಕೊಳ್ಳಬೇಕು.

ಆರ್ಥಿಕ ಅಭಿವೃದ್ಧಿಗೆ ಸಂಬಂಧಿಸಿದಂತೆ, ಕೃಷಿ, ನೀರಾವರಿ, ಕೈಗಾರಿಕೆ, ಸಾರಿಗೆ - ಸಂಪರ್ಕ ಹಾಗೂ ಇತರೆ ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಈ ಪ್ರದೇಶ ಹಿಂದುಳಿದಿದೆ. ಬಡತನ ಈ ಆರೂ ಜಿಲ್ಲೆಗಳಲ್ಲಿದೆ.

ಅದಕ್ಕೆ ಆಗಾಗ ಸಂಭವಿಸಿವ ಬರಗಾಲವೇ ಮುಖ್ಯ ಕಾರಣ. ಬರಗಾಲ ಪ್ರದೇಶಗಳ ಸರಿಯಾದ ಸಮೀಕ್ಷೆ ನಡೆಯದಿರುವುದು ಸರ್ಕಾರದಿಂದ ಬಿಡುಗಡೆಯಾದ ಹಣ ನಿಜವಾದ ಯೋಜನೆಗಳಿಗೆ, ಫಲಾನುಭವಿಗಳಿಗೆ ಮುಟ್ಟದೇ ಇರುವುದು, ರಾಜಕೀಯ ಇಚ್ಛಾಶಕ್ತಿಯ ಕೊರತೆ. ಚುನಾಯಿತ ಪ್ರತಿನಿಧಿಗಳ ನಿರಾಸಕ್ತಿ ಕಾರಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.