ಮಂಡ್ಯ ಜಿಲ್ಲೆಯ ಪಾಂಡವಪುರದ ಅಭಿಷೇಕ್ ಗೌಡ ಏಳನೇ ತರಗತಿ ಮುಗಿಸಿದ ಕೂಡಲೇ ಕೆಲಸಕ್ಕಾಗಿ ಮೈಸೂರಿಗೆ ಹೋದರು. ಅಲ್ಲಿ ದೊರೆ ಎಂಬುವವರು ನಡೆಸುತ್ತಿದ್ದ ಶಿವದರ್ಶಿನಿ ಸಸ್ಯಾಹಾರಿ ಹೋಟೆಲ್ನಲ್ಲಿ ಸಪ್ಲೇಯರ್ ಆಗಿ ಕೆಲಸಕ್ಕೆ ಸೇರಿಕೊಂಡರು. ಸಪ್ಲೇಯರ್ ಆಗಿ ಕೆಲಸ ಮಾಡುತ್ತಲೇ ಅಡುಗೆ ಭಟ್ಟರಿಗೆ ಸಹಾಯ ಮಾಡುತ್ತಿದ್ದರು. ಕೊನೆಗೆ ಅಡುಗೆ ಮಾಡುವುದನ್ನು ಕಲಿತರು. ಮೊದಲು ಟೀ, ಕಾಫಿ ಮಾಡಲು ಕಲಿತ ಅಭಿಷೇಕ್ ನಂತರ ಸಾಂಬಾರ್, ಪಲ್ಯ, ಪಲಾವ್ ಸೇರಿದಂತೆ ಇತರೆ ತಿಂಡಿಗಳನ್ನು ಮಾಡುವಷ್ಟು ಪರಿಣತಿ ಹೊಂದಿದರು.

ಅನಿವಾರ್ಯ ಕಾರಣಗಳಿಂದ ಹೋಟೆಲ್ ಮುಚ್ಚಿದರು. ಅಭಿಷೇಕ್ ಉದ್ಯೋಗ ಅರಸಿ ಬೆಂಗಳೂರಿಗೆ ಬಂದರು. ವಿದ್ಯಾರಣ್ಯಪುರದ ‘ದೊನ್ನೆ ಬಿರಿಯಾನಿ ಮನೆ’ ಹೋಟೆಲ್ನಲ್ಲಿ ಕೆಲಸಕ್ಕೆ ಸೇರಿಕೊಂಡರು. ಇಲ್ಲಿಯೂ ಕೂಡ ಸಪ್ಲೇಯರ್ ಆಗಿದ್ದುಕೊಂಡೇ ಬಿರಿಯಾನಿ, ಮಟನ್ ಚಾಪ್ಸ್, ಚಿಕನ್ ಲಾಲಿಪಪ್, ಸೇರಿದಂತೆ ವಿವಿಧ ಮಾಂಸಾಹಾರ ಅಡುಗೆ ಮಾಡುವುದನ್ನು ಕಲಿತರು. ಸದ್ಯ ಬೆಂಗಳೂರಿನ ಚರ್ಚ್ ಸ್ಟ್ರೀಟ್ನಲ್ಲಿ ದೊನ್ನೆ ಬಿರಿಯಾನಿ ಮನೆಯ ಪ್ರಮುಖ ಬಾಣಸಿಗರಾಗಿ ಅಭಿಷೇಕ್ ಬಾಡೂಟ ಉಣಬಡಿಸುತ್ತಿದ್ದಾರೆ. ಮಟನ್ ಮಸಾಲ, ಚಿಕನ್ ಪೆಪ್ಪರ್ ಫ್ರೈ ಹಾಗೂ ಫಿಶ್ ಫ್ರೈ ಮಾಡುವ ಬಗೆಯನ್ನು ಇಲ್ಲಿ ವಿವರಿಸಿದ್ದಾರೆ.

ಮಟನ್ ಮಸಾಲ
ಸಾಮಗ್ರಿ: ಮಾಂಸ (ಕುರಿ ಅಥವಾ ಮೇಕೆ) 1ಕೆ.ಜಿ, ಟೊಮೆಟೊ ಕಾಲು ಕೆ.ಜಿ, ಈರುಳ್ಳಿ ಕಾಲು ಕೆ.ಜಿ, ಬೆಳ್ಳುಳ್ಳಿ 50 ಗ್ರಾಂ, ಶುಂಠಿ 50 ಗ್ರಾಂ, ಖಾರದ ಪುಡಿ100 ಗ್ರಾಂ, ಧನಿಯಾ ಪುಡಿ 200 ಗ್ರಾಂ, ಅರಿಶಿಣ ಪುಡಿ ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು. ಕೊತ್ತಂಬರಿ, ಪುದೀನಾ ಸ್ವಲ್ಪ, ಚಕ್ಕೆ, ಲವಂಗ, ಏಲಕ್ಕಿ ಸ್ವಲ್ಪ.

ವಿಧಾನ: ಮೊದಲು ಟೊಮೆಟೊವನ್ನು ಪ್ರತ್ಯೇಕವಾಗಿ ರುಬ್ಬಿಟ್ಟುಕೊಳ್ಳಬೇಕು. ಆಮೇಲೆ ಪುದೀನಾ, ಕೊತ್ತಂಬರಿ, ಚಕ್ಕೆ, ಲವಂಗ, ಏಲಕ್ಕಿ, ಶುಂಠಿ, ಬೆಳ್ಳುಳ್ಳಿ ರುಬ್ಬಿಟ್ಟುಕೊಳ್ಳಬೇಕು. ನಂತರ ಹೆಚ್ಚಿದ ಈರುಳ್ಳಿಯನ್ನು ಎಣ್ಣೆ ಹಾಕಿ ಫ್ರೈ ಮಾಡಿ, ಇದಕ್ಕೆ ಅರಿಶಿಣ, ಸ್ವಲ್ಪ ಉಪ್ಪು, ಪುದೀನಾ ಪೇಸ್ಟ್ ಅನ್ನು ಹಾಕಬೇಕು. ಎರಡು ನಿಮಿಷದ ನಂತರ ಮಾಂಸವನ್ನು ಹಾಕಿ ಫ್ರೈ ಮಾಡಬೇಕು. ಮೂರು ನಿಮಿಷ ಬೆಂದ ನಂತರ ಟೊಮೆಟೊ ಪೇಸ್ಟ್ ಹಾಕಿ ಮಿಶ್ರಣ ಮಾಡಬೇಕು. ನಂತರ ಖಾರದಪುಡಿ, ಧನಿಯಾಪುಡಿ, ಗರಂ ಮಸಾಲ ಹಾಕಿ ಬೇಯಲು ಬಿಡಬೇಕು. ಎರಡು ವಿಶಲ್ ಕೂಗುವವರೆಗೂ ಬೇಯಿಸಿ ಇಳಿಸಬೇಕು. ರುಚಿ ನೋಡಿಕೊಂಡು ಉಪ್ಪು ಕಡಿಮೆ ಆಗಿದ್ದರೆ ಸೇರಿಸಿಕೊಳ್ಳಿ.

ಫಿಶ್ ಫ್ರೈ
ಸಾಮಗ್ರಿ: ಅಂಜಲ್ ಮೀನು 1 ಕೆ.ಜಿ, ಕಾರ್ನ್ಫ್ಲೋರ್ 150 ಗ್ರಾಂ, ಮೈದಾ ಹಿಟ್ಟು 100 ಗ್ರಾಂ, ಖಾರದ ಪುಡಿ 50 ಗ್ರಾಂ, ಜೀರಿಗೆ ಪುಡಿ ಸ್ವಲ್ಪ, ಶುಂಠಿ ಬೆಳ್ಳುಳ್ಳಿ ಪೇಸ್ಟ್100 ಗ್ರಾಂ, ಹಸಿರು ಮೆಣಸಿನಕಾಯಿ ಪೇಸ್ಟ್150 ಗ್ರಾಂ, ರುಚಿಗೆ ತಕ್ಕಷ್ಟು ಉಪ್ಪು.

ವಿಧಾನ: ಮೆಣಸಿನಕಾಯಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಗೂ ಉಪ್ಪು ಕಲೆಸಿದ ಪೇಸ್ಟ್ಅನ್ನು ಕತ್ತರಿಸಿದ ಮೀನಿನ ತುಂಡಿಗೆ ಲೇಪಿಸಬೇಕು. ಖಾರ ಹಚ್ಚಿದ ಮೀನನ್ನು ಫ್ರಿಜ್ನಲ್ಲಿ ಎರಡು ಗಂಟೆ ಇಡಬೇಕು (ಫ್ರಿಜ್ ಇಲ್ಲದಿದ್ದರೆ ಹಾಗೆಯೇ ಇಡಬಹುದು). ಮತ್ತೊಂದು ಪಾತ್ರೆಗೆ ಮೈದಾ, ಕಾರ್ನ್ಫ್ಲೋರ್, ಜೀರಿಗೆ ಪುಡಿ, ಖಾರದ ಪುಡಿ, ಎರಡು ಮೊಟ್ಟೆ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕಲೆಸಿಟ್ಟುಕೊಳ್ಳಿ. ನಂತರ ಫ್ರಿಜ್ನಲ್ಲಿಟ್ಟಿದ ಮೀನನ್ನು ತೆಗೆದು ಕಲೆಸಿದ ಮೈದಾಹಿಟ್ಟನ್ನು ಹಚ್ಚಬೇಕು. ಎರಡು ನಿಮಿಷದ ನಂತರ ಕಾದ ಎಣ್ಣೆಗೆ ಹಾಕಿ 6ರಿಂದ 8 ನಿಮಿಷ ಬಿಟ್ಟು ತೆಗೆಯಬೇಕು. ರುಚಿಯಾದ ಮೀನಿನ ಫ್ರೈ ಸವಿಯಬಹುದು.

ಚಿಕನ್ ಪೆಪ್ಪರ್ ಫ್ರೈ
ಸಾಮಗ್ರಿ: ಚಿಕನ್ 1 ಕೆ.ಜಿ, ಎರಡು ಲೀಟರ್ನಷ್ಟು ನೀರು, ಈರುಳ್ಳಿ 150 ಗ್ರಾಂ, ಸ್ವಲ್ಪ ಅರಿಶಿಣ ಪುಡಿ, ಕೊತ್ತಂಬರಿ, ಪುದೀನಾ ತಲಾ ಒಂದು ಕಟ್ಟು, ಚಕ್ಕೆ, ಲವಂಗ, ಏಲಕ್ಕಿ–100ಗ್ರಾಂ, ರುಚಿಗೆ ತಕ್ಕಷ್ಟು ಉಪ್ಪು, ಮಣಸು 100 ಗ್ರಾಂ.

ವಿಧಾನ: ಪಾತ್ರೆಗೆ ನೀರು ಹಾಗೂ ಚಿಕನ್ ಹಾಕಿ. ನಂತರ ಅರಿಶಿಣ ಪುಡಿ ಹಾಕಿ 15 ನಿಮಿಷ ಬೇಯಿಸಿ ಕೆಳಗಿಳಿಸಿ, ಪಾತ್ರೆಯಲ್ಲಿ ಉಳಿಯುವ ನೀರನ್ನು ಬಸಿಯಬೇಕು. ಕೊತ್ತಂಬರಿ, ಪುದೀನಾ, ಚಕ್ಕೆ, ಲವಂಗ, ಏಲಕ್ಕಿ, ಈರುಳ್ಳಿ ರುಬ್ಬಿಕೊಳ್ಳಬೇಕು. ಮೆಣಸನ್ನು ಪ್ರತ್ಯೇಕವಾಗಿ ರುಬ್ಬಿಟ್ಟುಕೊಳ್ಳಬೇಕು (ನುಣ್ಣಗೆ ರುಬ್ಬಿಕೊಳ್ಳಬಾರದು). ಪಾತ್ರೆಗೆ ಎಣ್ಣೆ ಹಾಕಿ ರುಬ್ಬಿದ ಕೊತ್ತಂಬರಿ, ಪುದೀನಾ ಹಾಕಬೇಕು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕೈಯಾಡಿಸಬೇಕು. ನಂತರ ಚಿಕನ್ ಹಾಕಿ ಎರಡು ನಿಮಿಷ ಫ್ರೈ ಮಾಡಬೇಕು. ಕೊನೆಗೆ ಮೆಣಸು ಪುಡಿ ಉದುರಿಸಿ ಐದು ನಿಮಿಷ ಬೇಯಿಸಿ ಕೆಳಗಿಳಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.