ಬುಧವಾರ, ಜನವರಿ 29, 2020
27 °C
ತರುಣ್‌ ತೇಜ್‌ಪಾಲ್‌ ಕೃತ್ಯ

ಅಮೀರ್‌ಖಾನ್‌ಗೆ ಆಘಾತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬಯಿ (ಪಿಟಿಐ): ತೆಹೆಲ್ಕಾ ಪ್ರಧಾನ ಸಂಪಾದಕ ತರುಣ್‌ ತೇಜ­ಪಾಲ್‌ ಕಿರಿಯ ಮಹಿಳಾ ಸಹೋ­ದ್ಯೋಗಿ ಜತೆ ಅನುಚಿತ­ವಾಗಿ ನಡೆದು­ಕೊಳ್ಳುತ್ತಾರೆ ಎಂದು­ಕೊಂಡಿರಲಿಲ್ಲ ಬಾಲಿವುಡ್‌ ನಟ ಅಮೀರ್‌ ಖಾನ್  ಆಘಾತ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ತೇಜ್‌ಪಾಲ್‌ ಅವರಿಂದ ಲೈಂಗಿಕ ಶೋಷಣೆಗೆ ಒಳಗಾಗಿದ್ದಾರೆ ಎನ್ನಲಾದ ಯುವ ಪತ್ರಕರ್ತೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.‘ತರುಣ್ ನನಗೆ ಚೆನ್ನಾಗಿ ಗೊತ್ತು. ಆದರೆ, ಅವರು ಈ ರೀತಿ ನಡೆದುಕೊಳ್ಳುತ್ತಾರೆ ಎಂದು ಎಣಿಸಿರಲಿಲ್ಲ. ನಿಜಕ್ಕೂ ನನಗೆ ಆಘಾತವಾಗಿದೆ. ಆದರೆ, ನಾವೆಲ್ಲರೂ ಆ ಯುವತಿಯ ಬೆಂಬಲಕ್ಕೆ ನಿಲ್ಲಬೇಕಿದೆ’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಪ್ರತಿಕ್ರಿಯಿಸಿ (+)