ಸೋಮವಾರ, ಮೇ 23, 2022
24 °C

ಅಮೀರ್ ಪಾತ್ರದಲ್ಲಿ ಹಷ್ಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಮೀರ್ ಪಾತ್ರದಲ್ಲಿ ಹಷ್ಮಿ

ಬಾಲಿವುಡ್‌ನಲ್ಲಿ ಹಿಂದೆ ಬಂದಿರುವ ಚಿತ್ರಗಳನ್ನೇ ಮರುಸೃಷ್ಟಿ ಮಾಡುವ ಚಾಳಿ ಮುಂದುವರಿದಿದೆ. ಇದೀಗ 90ರ ದಶಕದ ಸೂಪರ್ ಡೂಪರ್ ಹಿಟ್ ಚಿತ್ರ `ದಿಲ್ ಹೈ ಕೆ ಮಾನ್‌ತಾ ನಹೀ' ಚಿತ್ರದ ರಿಮೇಕ್‌ಗೆ ಸಿದ್ಧತೆ ನಡೆದಿದೆ. ಅಮೀರ್ ನಿರ್ವಹಿಸಿದ್ದ ಪಾತ್ರವನ್ನು ಇದೀಗ ಇಮ್ರಾನ್ ಹಷ್ಮಿ ನಿರ್ವಹಿಸುತ್ತಿದ್ದಾರೆ ಎಂಬ ಸುದ್ದಿ ದಟ್ಟವಾಗಿದೆ.ಫ್ರಾಂಕ್ ಕ್ಯಾಪ್ರಾ ಅವರ `ಇಟ್ ಹ್ಯಾಪೆನ್ಡ್ ಒನ್ ನೈಟ್' ಚಿತ್ರದಿಂದ ಪ್ರೇರೇಪಿತಗೊಂಡು ನಿರ್ಮಿಸಲಾಗಿದ್ದ `ದಿಲ್ ಹೈ ಕೆ...' ಚಿತ್ರದಲ್ಲಿ ನಾಯಕನ ಪಾತ್ರಕ್ಕೆ ನ್ಯಾಯ ಸಿಕ್ಕಿಲ್ಲ ಎಂಬುದು ನಿರ್ದೇಶಕ ಮಹೇಶ್ ಭಟ್ ಅವರ ವಾದ. ಆ ಚಿತ್ರದಲ್ಲಿ ನಾಯಕನ ಪಾತ್ರವನ್ನು ಕ್ಲಾರ್ಕ್ ಗ್ಯಾಬಲ್ ಅವರು ನಿರ್ವಹಿಸಿದ್ದರು. ಇದೀಗ ಆ ಪಾತ್ರಕ್ಕೆ ನ್ಯಾಯ ದೊರಕಿಸುವ ಹೊಣೆಯನ್ನು ನಿರ್ದೇಶಕರು ಹೊತ್ತಿದ್ದಾರೆ. ಚಿತ್ರಕಥೆಯನ್ನು ಅವರು ಹೊಸ ರೀತಿಯಲ್ಲಿ ಹೆಣೆದಿದ್ದಾರಂತೆ.ಹೊಸ ಸ್ವರೂಪದ `ದಿಲ್ ಹೈ ಕೆ...' ಚಿತ್ರದ ನಾಯಕನ ಪಾತ್ರಕ್ಕೆ ಇಮ್ರಾನ್ ಹಷ್ಮಿ ಅವರೇ ಸೂಕ್ತ ಎಂದು ನಿರ್ಧರಿಸಿರುವ ಮಹೇಶ್ ಭಟ್, ನಾಯಕಿಯೇ ನಾಯಕನಿಗೆ ಮನಸೋಲುವುದು ಇದರ ಹೊಸತನ ಎಂದಿದ್ದಾರೆ. ಮೂಲ ಚಿತ್ರದಲ್ಲಿ ನಾಯಕಿ ಹಡಗುಗಳ ಮಾಲೀಕನ ಪುತ್ರಿ. ನಾಯಕ ವರದಿಗಾರ. ನಾಯಕನ ಪಾತ್ರದಲ್ಲಿ ಅಮೀರ್, ನಾಯಕಿಯಾಗಿ ಮಹೇಶ್ ಭಟ್ ಪುತ್ರಿ ಪೂಜಾ ಭಟ್ ನಟಿಸಿದ್ದರು. ಕ

ಳೆದ ವರ್ಷ ಇದೇ ಚಿತ್ರವನ್ನು ಮತ್ತೆ ತೆರೆಯ ಮೇಲೆ ತರಲು ಮನಸ್ಸು ಮಾಡಿದ್ದ ಪೂಜಾ, ಮುಖ್ಯ ಭೂಮಿಕೆಯಲ್ಲಿ ರಣಬೀರ್ ಹಾಗೂ ಅಲಿಯಾ ನಟಿಸಿದರೆ ಉತ್ತಮ ಎಂದಿದ್ದರು. ಆದರೆ ಇದೀಗ ಮಹೇಶ್ ಭಟ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರದಲ್ಲಿ ಇಮ್ರಾನ್ ನಾಯಕರಾಗುವುದು ಬಹುತೇಕ ಖಚಿತ. ನಾಯಕಿ ಯಾರು ಎಂಬುದಷ್ಟೆ ಪ್ರಶ್ನೆ. ಅಂದಹಾಗೆ, ಕನ್ನಡದ `ಹುಡುಗಾಟ' ಚಿತ್ರದಲ್ಲಿ ಇರುವುದೂ ಇದೇ ಕಥೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.