ಶುಕ್ರವಾರ, ಮೇ 7, 2021
20 °C

ಅಮೆರಿಕ ಕಾಲೇಜಿನಲ್ಲಿ ಗುಂಡಿನ ದಾಳಿ: ಭಾರತೀಯ ಸೇರಿ 7 ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ): ಕ್ಯಾಲಿಫೋರ್ನಿಯಾದ ಕಾಲೇಜೊಂದರ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿಗಳ ಮೇಲೆ ಯದ್ವಾತದ್ವಾ ಗುಂಡಿನ ದಾಳಿ ನಡೆಸಿದ ಪರಿಣಾಮ ಭಾರತೀಯ ಮೂಲದ ವಿದ್ಯಾರ್ಥಿ ಸೇರಿ ಏಳು ಮಂದಿ ಮೃತಪಟ್ಟಿದ್ದು, ಜೊತೆಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಸೇರಿ ಮೂವರು ಗಾಯಗೊಂಡಿದ್ದಾರೆ.



ಮೃತರಲ್ಲಿ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನೆಲೆಸಿದ್ದ ಅಸ್ಸಾಂನ ತ್ಸೇರಿಂಗ್ ರಿಂಜಿಂಗ್ ಭುಟಿಯ (38) ಸೇರಿದ್ದು, ಈತನ ಕಾರನ್ನು ಆರೋಪಿ ಕಳ್ಳವು ಮಾಡಿ, ನಂತರ ಗುಂಡಿಟ್ಟು ಕೊಂದಿದ್ದಾನೆ. ಈತನು ನರ್ಸಿಂಗ್ ಅಧ್ಯಯನ ಮಾಡುತ್ತಿದ್ದು, ವಿಮಾನ ನಿಲ್ದಾಣ ಮತ್ತು ರೆಸ್ಟೋರೆಂಟ್‌ನಲ್ಲಿ ಹಂಗಾಮಿ ಕೆಲಸವನ್ನೂ ಮಾಡುತ್ತಿದ್ದ. ತೀವ್ರ ಗಾಯಗೊಂಡಿರುವ ವಿದ್ಯಾರ್ಥಿನಿಯನ್ನು ಪಂಜಾಬ್‌ನ ದಾವೀಂದರ್ ಕೌರ್ (19) ಎನ್ನಲಾಗಿದೆ. ಆಕೆಯ ಬಲ ತೋಳಿಗೆ ಗುಂಡು ಗುಲಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.



ಆರೋಪಿ ಸೆರೆ: ಶಂಕಿತ ಆರೋಪಿ ಕೊರಿಯಾ ಮೂಲದ ಅಮೆರಿಕ ಪ್ರಜೆ ಗೊಹ್ (43) ಎಂಬಾತನನ್ನು ಇಲ್ಲಿನ ಓಕ್ಲಂಡ್ ಪೊಲೀಸರು ಬಂಧಿಸಿದ್ದಾರೆ.



`ಓಕ್ಲಂಡ್ ಟ್ರಿಬ್ಯೂನ್~ ಪತ್ರಿಕೆ ಪ್ರಕಾರ, `ಗುಂಡು ಹಾರಿಸಿದ ವ್ಯಕ್ತಿ ಕೆಲವು ತಿಂಗಳಿಂದ ಕಾಲೇಜಿಗೆ ಗೈರು ಹಾಜರಾಗಿದ್ದ. ಘಟನೆ ನಡೆದ ಸೋಮವಾರ ದಿಢೀರನೆ ಪ್ರತ್ಯಕ್ಷನಾದ. ವಿದ್ಯಾರ್ಥಿಗಳಿಗೆ ಗೋಡೆಗೆ ಎದುರಾಗಿ ನಿಲ್ಲುವಂತೆ ಬಂದೂಕನ್ನು ತೋರಿಸಿ ಬೆದರಿಸಿದ. ಇದರಿಂದ ಗಾಬರಿಯಾದ ವಿದ್ಯಾರ್ಥಿಗಳು ಓಡಲಾರಂಭಿಸಿದರು. ಆಗ ಗುಂಡಿನ ದಾಳಿ ನಡೆಸಿದ~ ಎಂದು ಕೌರ್ ಸಂಬಂಧಿಕರಿಗೆ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.