ಗುರುವಾರ , ಮೇ 13, 2021
24 °C

ಅಮೆರಿಕ ದೇಗುಲಕ್ಕೆ ಸಿದ್ದಾಪುರದ ಪ್ರಭಾವಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಮೆರಿಕ ದೇಗುಲಕ್ಕೆ ಸಿದ್ದಾಪುರದ ಪ್ರಭಾವಳಿ

ಸಿದ್ದಾಪುರ:  ಪಟ್ಟಣದ ಹಾಳದಕಟ್ಟಾದ ರಜತ ಕಲಾಕಾರ ರಮೇಶ ಕೇಶವ ರಾಯ್ಕರ್ ತಯಾರಿಸಿರುವ ಬೆಳ್ಳಿಯ ಮೂರು ಪ್ರಭಾವಳಿಗಳು ಅಮೆರಿಕದಲ್ಲಿನ ದೇವಾಲಯಗಳನ್ನು ಸಿಂಗರಿಸಲು ಸಜ್ಜಾಗಿವೆ.



ಕ್ಯಾಲಿಫೋರ್ನಿಯಾ ರಾಜ್ಯದಲ್ಲಿನ ಬಾಲಾಜಿ ದೇವಾಲಯಗಳಿಗಾಗಿ ಈ ಪ್ರಭಾವಳಿಗಳನ್ನು ತಯಾರಿಸಿರುವ ಅವರು, ಇದಕ್ಕಾಗಿ ಒಟ್ಟು 28 ಕೆ.ಜಿ. ಬೆಳ್ಳಿ ಉಪಯೋಗಿಸಿದ್ದಾರೆ. ಈ ಪ್ರಭಾವಳಿಗಳು ಅನುಕ್ರಮವಾಗಿ ಆರೂವರೆ, ಆರೂಕಾಲು ಮತ್ತು ಐದು ಅಡಿ ಎತ್ತರವಿದ್ದು, ಇವುಗಳ ಮೇಲೆ ಸುಂದರವಾರ ಚಿತ್ರಗಳನ್ನು ರಮೇಶ ರಚಿಸಿದ್ದಾರೆ.



`ಈ ಪ್ರಭಾವಳಿಗಳನ್ನು ತಯಾರಿಸಲು ಆರು ತಿಂಗಳು ತಗುಲಿದೆ. ಈ ಕೆಲಸದಲ್ಲಿ ಜಗದೀಶ್ ಶೇಟ್ ಮತ್ತು ವಿಶ್ವಜೀತ್ ರಾಯ್ಕರ್ ಸಹಾಯ ಮಾಡಿದ್ದಾರೆ. ಈ ಬೆಳ್ಳಿ ಪ್ರಭಾವಳಿಗಳನ್ನು ಬೆಂಗಳೂರಿನ ನಿವಾಸಿಯೊಬ್ಬರ ನೇತೃತ್ವದಲ್ಲಿ ಅಮೆರಿಕದ ಅನಿವಾಸಿ ಭಾರತೀಯರು ದೇವಾಲಯಗಳಿಗಾಗಿ ಮಾಡಿಸಿದ್ದಾರೆ' ಎನ್ನುತ್ತಾರೆ ರಮೇಶ ರಾಯ್ಕರ್.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.