ಗುರುವಾರ , ಜನವರಿ 30, 2020
20 °C
ಲೈಂಗಿಕ ಕಿರುಕುಳ ಪ್ರಕರಣ

ಅರಣ್ಯ ಅಧಿಕಾರಿ ಇನ್ನೂ ನಾಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದು­ರಿಸುತ್ತಿರುವ ಬಾಗಲಕೋಟೆ ಸಾಮಾಜಿಕ ಅರಣ್ಯ ವಿಭಾಗದ ಉಪ ಸಂರಕ್ಷಣಾ­ಧಿಕಾರಿ (ಡಿಎಫ್‌ಒ) ಎಚ್‌.ಬಿ.ನಾಯಕ ಇದುವರೆಗೂ ಪತ್ತೆಯಾಗಿಲ್ಲ.ಡಿಎಫ್‌ಒ ಅವರ ಮೊಬೈಲ್‌ ಪೋನ್‌ ಸ್ವಿಚ್‌ ಆಫ್‌ ಆಗಿದ್ದು, ಗುರುವಾರ ಕಚೇರಿಗೂ ಆಗಮಿಸಿರಲಿಲ್ಲ. ಬೆಳಗಾವಿಗೆ ಹೋಗಿರುವ ಸಾಧ್ಯತೆ ಇರುವುದರಿಂದ ಅವರನ್ನು ವಶಕ್ಕೆ ತೆಗೆದುಕೊಳ್ಳಲು ಇಬ್ಬರು ಪೊಲೀಸರನ್ನು ಅಲ್ಲಿಗೆ ಕಳುಹಿಸಲಾ­ಗಿದೆ ಎಂದು ನವ­ನಗರ ಪೊಲೀಸ್‌ ಠಾಣೆ ಸಬ್‌ ಇನ್ ಸ್ಪೆಕ್ಟರ್  ತಿಳಿಸಿದರು.ಲೈಂಗಿಕ ಕಿರುಕುಳಕ್ಕೆ ಒಳಗಾದ ಮಹಿಳೆಯು ಪೊಲೀಸರಿಗೆ ನೀಡಿರುವ ಅಶ್ಲೀಲ ಸಂಭಾಷಣೆಯ ಧ್ವನಿ ಮುದ್ರಿಕೆಯ ನೈಜತೆಯನ್ನು ದೃಢಪಡಿಸಿಕೊಳ್ಳಲು ಅದನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾ­ಗಿದೆ ಎಂದು ತಿಳಿದು­ಬಂದಿದೆ.

ಪ್ರತಿಕ್ರಿಯಿಸಿ (+)