ಮದ್ದೂರಿನಲ್ಲಿ ಯುವತಿಯನ್ನು ತಳ್ಳಿದ ಘಟನೆ ಪರಿಣಾಮ `ಸಹಾಯವಾಣಿ~ ಕಲ್ಪಿಸುವ ವ್ಯವಸ್ಥೆ ಮಾಡಿದ ರೈಲ್ವೆ ಇಲಾಖೆಗೆ ಅಭಿನಂದನೆಗಳು. `ಸಹಾಯವಾಣಿ~ಯಲ್ಲದೇ ಮಹಿಳೆಯರಿಗಾಗಿ ಹೆಚ್ಚುವರಿ ಬೋಗಿ, ಭದ್ರತೆ ಒದಗಿಸುತ್ತಿರುವುದೂ ಕೂಡ ಸ್ವಾಗತಾರ್ಹ. ಮಹಿಳಾ ಬೋಗಿಗಳ ಕೊರತೆಯಿಂದಾಗಿಯೇ ಒಂಟಿ ಹೆಣ್ಣುಮಕ್ಕಳು, ಉದ್ಯೋಗಸ್ಥ ಮಹಿಳೆಯರು ಇಂತಹ ಕಿರುಕುಳ ಅನುಭವಿಸಬೇಕಾಗಿ ಬಂದಿದೆ.

ಈ ಅವಕಾಶವನ್ನು ಕೇವಲ ಮೈಸೂರು-ಬೆಂಗಳೂರು ರೈಲಿಗೆ ಅಳವಡಿಸಿದರೆ ಸಾಲದು. ಅರಸೀಕೆರೆ, ಬೆಂಗಳೂರು ಮತ್ತು ಇತರೆ ವೇಗದ ರೈಲಿಗೂ ವಿಸ್ತರಿಸಬೇಕು. (ವೇಗದ ರೈಲಿಗೆ ಒಂದು ದೊಡ್ಡ ಬೋಗಿಯಾದರೆ ಸಾಕು)

`ಸಹಾಯವಾಣಿ~ ಸಂಖ್ಯೆ ಸದಾ ಚಲನಶೀಲವಾಗಿರಲಿ. ರೈಲಿನಲ್ಲಿ ಗಾರ್ಡ್ ಮಾತ್ರವೇ ಶೀಘ್ರ ಲಭ್ಯವಿರುವುದರಿಂದ ಅವರು ಸೂಕ್ತ ರೀತಿಯಲ್ಲಿ ಸ್ಪಂದಿಸುವಂತೆ ಇಲಾಖೆ ಅವರಿಗೆ ತರಬೇತಿ ನೀಡಬೇಕು. ರೈಲುಗಳಲ್ಲಿ ದೀಪಗಳು ಉರಿಯುವ ಸ್ಥಿತಿಯಲ್ಲಿರುವಂತೆ ನಿಗಾವಹಿಸುವುದು ಸೂಕ್ತ. (ಎಷ್ಟೋ ಬೋಗಿಗಳಲ್ಲಿ ದೀಪಗಳು ಸರಿಯಾಗಿ ಹತ್ತುವುದಿಲ್ಲ).

ಈಗಲಾದರೂ ರೈಲ್ವೆ ಇಲಾಖೆ ಮಹಿಳೆಯರ ಸಮಸ್ಯೆಗೆ ಸ್ಪಂದಿಸುವಂತಾಗಿದ್ದಕ್ಕೆ (ಅದಕ್ಕಾಗಿ ಒಬ್ಬ ಮಹಿಳೆ ತ್ಯಾಗ-ಬಲಿದಾನವಾಗಬೇಕಾಯ್ತಲ್ಲ!) ಧನ್ಯವಾದಗಳು.

ಅರಸೀಕೆರೆ-ಬೆಂಗಳೂರು ಪುಶ್ಪುಲ್ ರೈಲಿನಲ್ಲಿಯೂ ಅಂತಹ ಘಟನೆಯಾಗುವ ಮುನ್ನವೇ ಹೆಚ್ಚಿನ ಮಹಿಳಾ ಬೋಗಿ ಒದಗಿಸಿ ಸಹಾಯವಾಣಿ ವ್ಯವಸ್ಥೆ ಮಾಡಬೇಕೆಂದು ಕೋರುತ್ತೇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.