ಗುರುವಾರ , ಮೇ 28, 2020
27 °C

ಅರೆಸೇನಾ ಸಿಬ್ಬಂದಿಗೆ ರಿಯಾಯ್ತಿ ಪ್ರಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅರೆಸೇನಾ ಪಡೆಯ ಸಿಬ್ಬಂದಿಯಲ್ಲಿ ಗಡಿ ಭದ್ರತಾ ಪಡೆ, ಇಂಡೊ-ಟಿಬೇಟನ್ ಗಡಿ ಪೊಲೀಸ್, ಕರಾವಳಿ ರಕ್ಷಣಾ ಪಡೆ, ಕೇಂದ್ರೀಯ ಕೈಗಾರಿಕಾ ಸುರಕ್ಷಾ ಪಡೆ, ಕೇಂದ್ರ ಮೀಸಲು ಪೊಲೀಸ್ ಪಡೆ, ಆಸ್ಸಾಂ ರೈಫಲ್ಸ್, ರೈಲ್ವೆ ಸುರಕ್ಷಾ ಪಡೆ, ಬೇಹುಗಾರಿಕಾ ದಳ ಹಾಗೂ ಸಶಸ್ತ್ರ ಸೀಮಾ ಬಲದ ಯೋಧರು ಸೇರ್ಪಡೆಯಾಗಿದ್ದಾರೆ.ದೇಶಿ ವಿಮಾನ ಪ್ರಯಾಣದಲ್ಲಿ ಎಕಾನಾಮಿ ಕ್ಲಾಸ್‌ನಲ್ಲಿ ಈ ರಿಯಾಯಿತಿ ದರ ಅನ್ವಯಿಸಲಿದೆ. ಸೇನಾಧಿಕಾರಿಗಳು ಇಲಾಖೆಯ ಗುರುತಿನ ಚೀಟಿ ತೋರಿಸಿ ಈ ರಿಯಾಯಿತಿ ಪಡೆಯಬಹುದು ಎಂದು ಏರ್ ಇಂಡಿಯಾ ಪ್ರಕಟಣೆ ತಿಳಿಸಿದೆ.2ವರ್ಷದಿಂದ 12 ವರ್ಷದೊಳಗಿನ ಮಕ್ಕಳು ರಿಯಾಯಿತಿ ಲಾಭ ಪಡೆಯಬಹುದಾಗಿದೆ. ಇದರಂತೆ 63 ವರ್ಷ ವಯಸ್ಸು ಮೀರಿದ ಹಿರಿಯ ನಾಗರಿಕರೂ ರಿಯಾಯಿತಿ ದರದಲ್ಲಿ ಪ್ರಯಾಣಿಸಬಹುದಾಗಿದೆ ಎಂದು ತಿಳಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.