ಮಂಗಳವಾರ, ಜೂನ್ 15, 2021
25 °C

ಅಲೆವೂರು: ಮತದಾನ ಹಕ್ಕಿಗಾಗಿ ಆಗ್ರಹ:ವಲಸೆ ಕಾರ್ಮಿಕರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಲೆವೂರು: ಅಲೆವೂರಿನ ಪ್ರಗತಿ ನಗರದಲ್ಲಿ ವಾಸವಾಗಿರುವ ಉತ್ತರ ಕರ್ನಾಟಕದ ನೂರಾರು ವಲಸೆ ಕಾರ್ಮಿಕರು ತಮಗೂ ಮತದಾನದ ಹಕ್ಕು ನೀಡುವಂತೆ ಒತ್ತಾಯಿಸಿ ರಾಜ್ಯ ವಲಸೆ ಕಾರ್ಮಿಕ ಸಂಘಟನೆ ನೇತೃತ್ವದಲ್ಲಿ ಭಾನುವಾರ ಬೆಳಗ್ಗೆ ಅಲೆವೂರು ನೆಹರು ಪ್ರೌಢಶಾಲೆ ಸಮೀಪ ಮೌನ ಪ್ರತಿಭಟನೆ ನಡೆಸಿದರು.`ನಾವು 30 ವರ್ಷದಿಂದ ಇಲ್ಲಿ ಜೀವಿಸುತ್ತಿದ್ದೇವೆ. ಈ ಬಗ್ಗೆ ತಹಶೀಲ್ದಾರರಿಗೆ ದಾಖಲೆಗಳನ್ನು ನೀಡಿದ್ದೇವೆ. 150 ಕುಟುಂಬಗಳಲ್ಲಿ 500 ಜನ ವಾಸಿಸುತ್ತಿದ್ದು ಕೇವಲ ನೂರು ಮಂದಿಗೆ ಮಾತ್ರ ಮತ ಚಲಾಯಿಸುವ ಹಕ್ಕಿದೆ.  ಆದರೆ ಉಳಿದವರಿಗೆ ಮತಚಲಾಯಿಸುವ ಹಕ್ಕನ್ನು ಒದಗಿಸಿಲ್ಲ.

 

ನಮ್ಮ ಬೇಡಿಕೆಯನ್ನು ಈಡೇರಿಸಬೇಕು~ ಎಂದು ಪ್ರತಿಭಟನಾನಿರತ ಕಾರ್ಮಿಕರು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಸಂಘಟನೆಯ ಚೆನ್ನವೀರಪ್ಪ, ಬಸಪ್ಪ ಬಾಗಲಕೋಟೆ ಮತ್ತಿತರರು ಪಾಲ್ಗೊಂಡರು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.