ಬೆಂಗಳೂರು: ದೇಶದಲ್ಲಿ ಅಲ್ಯುಮಿನಿ ಯಂ ಉದ್ಯಮಕ್ಕೆ ಶಕ್ತಿ ತುಂಬಬೇಕಾದರೆ ತಯಾರಿಕೆ ಪ್ರಕ್ರಿಯೆಯಲ್ಲಿ ಪರ್ಯಾಯ ಮಾರ್ಗಗಳತ್ತ ಗಮನ ಹರಿಸಬೇಕಿದೆ ಎಂದು ಟಾಟಾ ಸಂಶೋಧನಾ ಅಭಿ ವೃದ್ಧಿ ಮತ್ತು ವಿನ್ಯಾಸ ಕೇಂದ್ರದ (ಟಿಆರ್ಡಿಡಿಸಿ) ಮುಖ್ಯಸ್ಥ ಪ್ರದೀಪ್ ಅಭಿಪ್ರಾಯಪಟ್ಟರು.

ನಗರದಲ್ಲಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಗುರುವಾರ ನಡೆದ ‘ಭಾರತೀಯ ಅಲ್ಯುಮಿನಿಯಂ ಉದ್ಯಮಕ್ಕೆ ತಂತ್ರಜ್ಞಾನದ ಮಾರ್ಗಸೂಚಿ’ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ 300 ಕೋಟಿ ಟನ್ಗೂ ಅಧಿಕ ಪ್ರಮಾಣದ ಬಾಕ್ಸೈಟ್ ಅದಿರು ನಿಕ್ಷೇಪವಿದೆ. ಪೂರ್ವ ಘಟ್ಟಗಳ ಸಾಲಿನಲ್ಲಿಯೇ 200 ಕೋಟಿ ಟನ್ ಅದಿರು ಸಂಗ್ರಹವಿದೆ. ಕಾಸ್ಟಿಂಗ್ ಲೀಚಿಂಗ್ ಪ್ರಕ್ರಿಯೆಗಿಂತ ಬಾಕ್ಸೈಟ್ ಅದಿರಿನ ಭೌತಿಕ ಪ್ರಯೋಜನ ಪಡೆಯುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದರು.

ಭಾರತಕ್ಕೆ ಮೆಟಿರಿಯಲ್ ಎಂಜಿನಿಯರಿಂಗ್ ವಿಭಾಗದಲ್ಲಿ ವಿಪುಲ ಅವಕಾಶಗಳಿವೆ. ಆದರೆ, ಇಲ್ಲಿ ಭಾರಿ ಸವಾಲುಗಳನ್ನೂ ಎದುರಿಸಬೇಕಿದೆ. ಇದೇ ವೇಳೆ, ಇಂಟಿಗ್ರೇಟೆಡ್ ಕಂಪ್ಯುಟೇಷನಲ್ ಮೆಟಿರಿಯಲ್ಸ್ ಎಂಜಿನಿಯರಿಂಗ್ ಕ್ಷೇತ್ರಕ್ಕೂ ಆದ್ಯತೆ ನೀಡಬೇಕಿದೆ ಎಂದು ಗಮನ ಸೆಳೆದರು.

ಅಲ್ಯುಮಿನಿಯಂ ಉದ್ಯಮಕ್ಕಾಗಿ ಹೊಸ ಮಾರುಕಟ್ಟೆ ಮತ್ತು ಸಂಶೋಧನೆ ಕ್ಷೇತ್ರ ಗುರುತಿಸುವ ನಿಟ್ಟಿನಲ್ಲಿ ತಜ್ಞರು ಚರ್ಚಿಸಲೆಂದೇ ಈ ಸಂವಾದ ಸಭೆಯನ್ನು ‘ಅಲ್ಯುಮಿನಿಯಂ ಅಸೋಸಿಯೇಷನ್ ಆಫ್ ಇಂಡಿಯಾ’ ಆಯೋಜಿಸಿದೆ. ಗುರಿ ಆಧಾರಿತ ಸಂಶೋಧನೆ ಮತ್ತು ಅಭಿವೃದ್ಧಿಗೆ ಕಾರ್ಯತಂತ್ರ ಕುರಿತ ಚರ್ಚೆಯೇ ಮುಖ್ಯವಾಗಬೇಕಿದೆ ಎಂದು ‘ಎಎಐ’ ಪ್ರಧಾನ ಕಾರ್ಯದರ್ಶಿ ಪ್ರೊ. ಕೆ.ಎಸ್.ಎಸ್.ಮೂರ್ತಿ ಹೇಳಿದರು.

ಪ್ರಾಥಮಿಕ ಲೋಹ ಮತ್ತು ಬಳಕೆ ವಿಭಾಗದಲ್ಲಿ ಅಲ್ಯುಮಿನಿಯಂ ಉದ್ಯಮ ಸದ್ಯ ಚುರುಕಿನ ಬೆಳವಣಿಗೆ ಕಾಣುತ್ತಿದೆ. ಕಟ್ಟಡ, ಮೂಲಸೌಕರ್ಯ, ವಾಹನೋದ್ಯಮ, ಪ್ಯಾಕೇಜಿಂಗ್, ವಿದ್ಯುತ್, ಗ್ರಾಹಕ ಉತ್ಪನ್ನಗಳ ಕೈಗಾರಿಕಾ ಕ್ಷೇತ್ರಗಳಿಂದ ಅಲ್ಯುಮಿನಿಯಂ ಬೇಡಿಕೆ ಹೆಚ್ಚಿದೆ. ೨೦೨೦ರ ವೇಳೆಗೆ ಕಟ್ಟಡ ನಿರ್ಮಾಣ ಕ್ಷೇತ್ರವೇ ದೇಶದಲ್ಲಿನ ಅಲ್ಯುಮಿನಿಯಂ ಒಟ್ಟು ಬಳಕೆಯಲ್ಲಿ ಶೇ ೧೮ರಿಂದ ಶೇ ೨೦ರಷ್ಟು ಬಳಸಿಕೊಳ್ಳುವ ನಿರೀಕ್ಷೆ ಇದೆ ಎಂದರು.

ಆದರೆ, ತಲಾವಾರು ಅಲ್ಯುಮಿನಿಯಂ ಬಳಕೆ ಇತರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ (೧.೮ ಕೆ.ಜಿ) ಬಹಳ ಕಡಿಮೆ ಇದೆ. ಉತ್ತರ ಅಮೆರಿಕಾ ಮತ್ತು ಯೂರೋಪ್ ದೇಶಗಳಲ್ಲಿ ತಲಾವಾರು ೩೦ರಿಂದ ೩೫ಕೆಜಿ, ಜಪಾನಿನಲ್ಲಿ ೨೦ ಕೆಜಿ, ತೈವಾನಿನಲ್ಲಿ 1೦ ಕೆಜಿ, ಚೀನಾದಲ್ಲಿ ೮-೯ ಕೆ.ಜಿಯಷ್ಟಿದೆ ಎಂದು ಮೂರ್ತಿ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.