ಸೋಮವಾರ, ಆಗಸ್ಟ್ 2, 2021
20 °C

ಅಲ್‌ಖೈದಾಕ್ಕೆ ಜವಾಹಿರಿ ನೂತನ ಮುಖ್ಯಸ್ಥ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ): ಅಲ್‌ಖೈದಾ ಮುಖ್ಯಸ್ಥ ಲಾಡೆನ್ ಅಮೆರಿಕ ದಾಳಿಯಿಂದ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಸಂಘಟನೆಯ ಎರಡನೇ ನಾಯಕ ಏಮನ್ ಅಲ್ ಜವಾಹಿರಿ ಉತ್ತರಾಧಿಕಾರಿಯಾಗಿ ನೇಮಕಗೊಳ್ಳುವ ಸಾಧ್ಯತೆ ಇದೆ.ಆದರೆ ಈಜಿಪ್ಟ್ ಮೂಲದ ವೈದ್ಯನಾಗಿರುವ ಜವಾಹಿರಿ ಸಂಘಟನೆಯಲ್ಲಿ ಲಾಡೆನ್ ಹೊಂದಿದ್ದ ಹಿಂಬಾಲಕರ ನಿಯತ್ತು ಗಳಿಸುವುದು ಕಷ್ಟಸಾಧ್ಯ ಎನ್ನಲಾಗಿದೆ.ಅಮೆರಿಕ ಪಡೆಗಳು ಲಾಡೆನ್ ಬೆನ್ನಿಗೆ ಬಿದ್ದ ಮೇಲೆ ಆತನ ಬೆಂಗಾವಲಾಗಿ ಜವಾಹಿರಿ ಕಾರ್ಯನಿರ್ವಹಿಸುತ್ತಿದ್ದ. ಹಾಗಾಗಿ ಲಾಡೆನ್ ಉತ್ತರಾಧಿಕಾರಿಯಾಗಿ ಜವಾಹಿರಿ ನೇಮಕವಾಗುವುದು ಬಹುತೇಕ ಖಚಿತವಾಗಿದೆ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.