ಸೋಮವಾರ, ಮೇ 23, 2022
24 °C

ಅಲ್‌ಖೈದಾ ಉಗ್ರ ಲಿಬಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ): ಪಾಕಿಸ್ತಾನದಲ್ಲಿ ಅಮೆರಿಕ ಪಡೆಗಳು  ನಡೆಸಿದ ಡ್ರೋಣ್ ದಾಳಿಯಲ್ಲಿ ಅಲ್‌ಖೈದಾ ಸಂಘಟನೆಯ ಎರಡನೇ ಪ್ರಮುಖ ನಾಯಕ ಅಬು ಯಾಹ್ಯಾ ಅಲ್-ಲಿಬಿ ಮೃತಪಟ್ಟಿರುವುದಾಗಿ ಅಮೆರಿಕ ಬುಧವಾರ ದೃಢಪಡಿಸಿವೆ.



ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಜಾಯ್ ಕಾರ್ನೆ ಅವರು ಸುದ್ದಿ ಗೋಷ್ಠಿಯಲ್ಲಿ ಲಿಬಿ ಸತ್ತಿರುವುದನ್ನು ಖಚಿತಪಡಿಸಿದ್ದಾರೆ.ಆದರೆ ಲಿಬಿ ಹೇಗೆ ಹಾಗೂ ಎಲ್ಲಿ ಸತ್ತಿದ್ದಾನೆ ಎಂಬ ಮಾಹಿತಿ ನೀಡಲು ಅವರು ನಿರಾಕರಿಸಿದ್ದಾರೆ.



ಅಲ್‌ಖೈದಾದಲ್ಲಿ ಸಂಚು ರೂಪಿಸುವ ಹೊಣೆ ಹೊತ್ತಿದ್ದ 49 ವರ್ಷದ ಲಿಬಿ ತಲೆಯ ಮೇಲೆ ಅಮೆರಿಕ ಸರ್ಕಾರ 10 ಲಕ್ಷ ಡಾಲರ್ ಬಹುಮಾನ ಘೋಷಿಸಿತ್ತು. ಲಿಬಿ, ಅಲ್‌ಖೈದಾ ಮುಖ್ಯಸ್ಥ ಅಯ್ಮನ್ ಅಲ್-ಜವಾಹಿರಿ ನಂತರ ಪ್ರಭಾವಿ ನಾಯಕನಾಗಿದ್ದ. ಆತನಿಗೆ ಸಂಘಟನೆಯಲ್ಲಿ ಪ್ರಧಾನ ವ್ಯವಸ್ಥಾಪಕನ ಜವಾಬ್ದಾರಿ ನೀಡಲಾಗಿತ್ತು ಎಂದೂ ಕಾರ್ನೆ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.