ಶುಕ್ರವಾರ, ಮೇ 14, 2021
27 °C

ಅಳಿವಿನ ಅಂಚಿನಲ್ಲಿ ದೇಶಿಯ ತಳಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಚ್.ಡಿ.ಕೋಟೆ: ಅಕ್ಕಡಿ ಪದ್ಧತಿಯ ಮೂಲಕ ಭಾರತ ದೇಶವೂ ಪ್ರಪಂಚದಲ್ಲೇ ವಿಶಿಷ್ಟ ವೈಜ್ಞಾನಿಕ ರೀತಿಯಲ್ಲಿ ಬೆಳೆಗಳನ್ನು ಬೆಳೆಯುತ್ತಿದ್ದರು ಎಂದು ಬೆಂಗಳೂರಿನ ಸಹಜ ಸಮೃದ್ಧ ಸಂಸ್ಥೆಯ ಜಿ.ಕೃಷ್ಣಪ್ರಸಾದ್ ತಿಳಿಸಿದರು.ತಾಲ್ಲೂಕಿನ ಹ್ಯಾಂಡ್‌ಪೋಸ್ಟ್‌ನ ಮೈರಾಡ ಕಚೇರಿಯ ಆವರಣದಲ್ಲಿ ಮಂಗಳವಾರ ಪೀಪಲ್ ಟ್ರೀ, ಸಹಜ ಸಮೃದ್ಧ, ಬೆಂಗಳೂರು ಮತ್ತು ತಾಲ್ಲೂಕಿನ ಸಾವಯವ ಕೃಷಿಕರ ಬಳಗದ ಆಶ್ರಯದಲ್ಲಿ ಏರ್ಪಡಿಸಿದ್ದ ಸಿರಿಧಾನ್ಯ ಸಂರಕ್ಷಣಾ ಮೇಳದಲ್ಲಿ ಮಾತನಾಡಿದರು.ದೇಶಿ ತಳಿಗಳು ಅಳಿವಿನ ಅಂಚಿನಲ್ಲಿದ್ದು, ಅವುಗಳ ಸಂರಕ್ಷಣೆ ಮಾಡಿ ಮುಂದಿನ ಪೀಳಿಗೆಗೆ ಉಳಿಸಬೇಕು. ಈ ದವಸ ಧಾನ್ಯಗಳನ್ನು ಬಳಸುವುದರಿಂದ ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳು ಸೇರಿದಂತೆ ಇನ್ನಿತರ ಹಲವು ರೋಗಗಳಿಗೆ ಆಹಾರದಲ್ಲೇ ಔಷಧಿ ಸಿಗುತ್ತದೆ ಎಂದರು.ಈ ಧಾನ್ಯಗಳನ್ನು ಬಳಸುವುದರಿಂದ ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳು ಸೇರಿದಂತೆ ಇನ್ನಿತರ ಹಲವು  ರೋಗಗಳಿಗೆ ಆಹಾರದಲ್ಲೇ ಔಷಧಿ ಸಿಗುತ್ತದೆ. ಬೆಂಗಳೂರಿನಲ್ಲಿ ಶೇ 21ರಷ್ಟು ಮಂದಿಗೆ ಮಧುಮೇಹ ಕಾಯಿಲೆ ಇದೆ. ರೈತರು ದೇಶಿ ತಳಿಗಳನ್ನು ಉಳಿಸುವ ನಿಟ್ಟಿನಲ್ಲಿ ಬೀಜ ಬ್ಯಾಂಕ್‌ಗಳನ್ನು ಸ್ಥಾಪಿಸಿಕೊಂಡು, ಕೊಟ್ಟು ಪಡೆಯುವ ಪದ್ಧತಿಯನ್ನು ಮಾಡುವುದರಿಂದ ಆಹಾರ ಸಮತೋಲವನ್ನು ಕಾಪಾಡಬೇಕು ಎಂದು ಹೇಳಿದರು.ಸಿರಿಧಾನ್ಯ ಸಂರಕ್ಷಣಾ ಮೇಳದಲ್ಲಿ ರಾಗಿಯ ವಿವಿಧ ತಳಿಗಳಾದ ಕೋಣಕುಂಬು ರಾಗಿ, ಹಸಿರುಗುಂಡಗ, ಜಗಳೂರು, ನಾಗಮುತ್ತಿನ, ದೊಡ್ಡರಾಗಿ, ಬೆಂಗಳೂರುಕುಳ್ಳ ಸೇರಿದಂತೆ ಇನ್ನಿತರ ತಳಿಗಳನ್ನು ರೈತರ ಆಸಕ್ತಿಗೆ ತಕ್ಕಂತೆ ವಿತರಿಸಿದರು.ರಾಗಿ ಕುಟ್ಟುವ ಮೂಲಕ ಸಹಾಯಕ ಕೃಷಿ ನಿರ್ದೇಶಕ ಜೆ.ವೆಂಕಟೇಶ್ ಉದ್ಘಾಟಿಸಿದರು. ಪೀಪಲ್ ಟ್ರೀ ಸಂಸ್ಥೆ ಸಿದ್ಧಾರ್ಥ, ಸಾವಯವ ಕೃಷಿಕರ ಸಂಘದ ಅಧ್ಯಕ್ಷ ಮಹದೇವಪ್ಪ, ನಾಗಪ್ಪ ನಿಂಬೇಗೊಂದಿ, ಪುಟ್ಟರಾಜು, ರಾಮಶೆಟ್ಟಿ, ಚಂದ್ರಶೇಖರ್, ಕ್ಷೀರಸಾಗರ್, ಜೆ.ಪಿ.ನಾಗರಾಜು, ಗೋವಿಂದಪ್ಪ, ಚನ್ನಬಸಪ್ಪ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.