ಅವಧಿ ಮುಗಿದ ಆಹಾರ ಪದಾರ್ಥ ಮಾರಾಟ: ದಂಡ

ಬುಧವಾರ, ಜೂಲೈ 24, 2019
27 °C

ಅವಧಿ ಮುಗಿದ ಆಹಾರ ಪದಾರ್ಥ ಮಾರಾಟ: ದಂಡ

Published:
Updated:

ಬೆಂಗಳೂರು:  ಅವಧಿ ಮುಗಿದಂತಹ ಆಹಾರ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಸ್ಟಾರ್ ಬಜಾರ್ ಹಾಗೂ ರಿಲೆಯನ್ಸ್ ಮಳಿಗೆಗೆ ಬಿಬಿಎಂಪಿಯು ಸೋಮವಾರ ಕ್ರಮವಾಗಿ 1 ಲಕ್ಷ ಹಾಗೂ 50 ಸಾವಿರ ರೂಪಾಯಿ ದಂಡ ವಿಧಿಸಿದೆ.ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ಪಶ್ಚಿಮ ವಲಯ ವ್ಯಾಪ್ತಿಗೊಳಪಡುವ ವಾರ್ಡ್ ನಂ. 66ರಲ್ಲಿನ ಓರಿಯನ್ ಮಾಲ್‌ನಲ್ಲಿರುವ ಸ್ಟಾರ್ ಬಜಾರ್ ಹಾಗೂ ವಾರ್ಡ್ ನಂ. 99ರಲ್ಲಿನ ಬಸವೇಶ್ವರನಗರದ ರಿಲೆಯನ್ಸ್ ಶೋಂ ರೂಮ್‌ಗಳ ಮೇಲೆ ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿಯು ಆರೋಗ್ಯಾಧಿಕಾರಿ, ಉಪ ಆರೋಗ್ಯಾಧಿಕಾರಿ, ಹಿರಿಯ ಆರೋಗ್ಯ ಪರಿವೀಕ್ಷಕರ ನೆರವಿನೊಂದಿಗೆ ತಪಾಸಣೆ ನಡೆಸಿದಾಗ ಅವಧಿ ಮುಗಿದ ನಂತರವೂ ಆಹಾರ ಪದಾರ್ಥಗಳನ್ನು ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ ಎಂದು ಪಾಲಿಕೆಯ ಪಶ್ಚಿಮ ವಲಯದ ಆರೋಗ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry