ಮಂಗಳವಾರ, ಮೇ 11, 2021
27 °C

ಅವ್ಯವಹಾರದ ಆಗರವಾದ ಸಿಇಟಿ ಸೆಲ್

-ಶ್ರಿನಿವಾಸ ಎಂ.ಬಿ. ಬೆಂಗಳೂರು . Updated:

ಅಕ್ಷರ ಗಾತ್ರ : | |

ಪಾರದರ್ಶಕತೆಗೆ ಹೆಸರಾಗಿದ್ದ ಸಿಇಟಿ ಸೆಲ್ ಈಗ ಹಲವು ಅವ್ಯವಹಾರಗಳ ಗೂಡಾಗುತ್ತಿದೆ. ಇತ್ತೀಚೆಗೆ ಅದು ತೆಗೆದುಕೊಂಡ ಎರಡು ನಿರ್ಧಾರಗಳು ಇದಕ್ಕೆ ಸಾಕ್ಷಿ. ಕಳೆದ ವರ್ಷದವರೆಗೆ ಸಿಇಟಿ ದಾಖಲೆ ಪರಿಶೀಲನೆ ಸಂದರ್ಭದಲ್ಲಿ ವಿದ್ಯಾರ್ಥಿಯ ಹಾಜರಿ ಕಡ್ಡಾಯವಾಗಿತ್ತು.ಇದರಿಂದ ನಕಲಿ ವಿದ್ಯಾರ್ಥಿಗಳ ಹಾವಳಿ ಮತ್ತು ಸೀಟ್ ಬ್ಲಾಕಿಂಗ್ ತಡೆಗೆ ಅಲ್ಪವಾದರೂ ಕಡಿವಾಣ ಹಾಕಲು ಸಾಧ್ಯವಾಗುತ್ತಿತ್ತು. ಆದರೆ ಈ ಬಾರಿ ಈ ನಿಯಮವನ್ನು ಸಡಿಲಿಸಲಾಗಿದೆ. ಅಭ್ಯರ್ಥಿಯ ಬದಲು ಆತನ ಸಂಬಂಧಿಕರೂ ಈ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು ಎಂದು ತಿಳಿಸಲಾಗಿದೆ. ಇದು ಖಂಡಿತವಾಗಿಯೂ ನಕಲಿ ವಿದ್ಯಾರ್ಥಿಗಳ ಮತ್ತು ಸೀಟು ಬ್ಲಾಕಿಂಗ್ ಏಜೆಂಟರ ಕೆಲಸವನ್ನು ಇನ್ನಷ್ಟು ಸುಲಭ ಮಾಡುವಂತದ್ದು.ಇದರ ಜತೆಗೆ ಕಳೆದ ಎರಡು ವರ್ಷಗಳಲ್ಲಿ ಬೆಳಕಿಗೆ ಬಂದ ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಸಮಸ್ಯೆಯನ್ನು ಸರಿಯಾಗಿ ನಿಭಾಯಿಸದ ಆರೋಪ ಎದುರಿಸುತ್ತಿದ್ದ ಹಾಗೂ ಮೇ 30ರಂದು ನಿವೃತ್ತಿ ಹೊಂದಿದ ಪಿಯು ಇಲಾಖೆಯ ಇಬ್ಬರು ಅಧಿಕಾರಿಗಳನ್ನು ಸಿಇಟಿ ಸೆಲ್‌ಗೆ ಅಕ್ರಮವಾಗಿ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗಿದೆ.

ಒಂದು ಇಲಾಖೆಯಲ್ಲಿ ನಿವೃತ್ತಿ ಹೊಂದಿದ ಎರಡೇ ದಿನಗಳಲ್ಲಿ ಇನ್ನೊಂದು ಇಲಾಖೆಗೆ ಅಷ್ಟೊಂದು ತರಾತುರಿಯಲ್ಲಿ ನೇಮಿಸಿಕೊಳ್ಳುವ ಅಗತ್ಯ ಏನಿತ್ತು? ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಸಿಇಟಿ ಸೆಲ್‌ನಲ್ಲಿ ನಡೆಯುತ್ತಿರುವ ಇಂತಹ ಅವ್ಯವಹಾರ ನೋಡಿದರೆ ಇಡೀ ಸೀಟು ಹಂಚಿಕೆ ಪ್ರಕ್ರಿಯೆ ಬಗ್ಗೆಯೇ ಸಂಶಯ ಮೂಡುತ್ತದೆ.

 -ಶ್ರಿನಿವಾಸ ಎಂ.ಬಿ.  ಬೆಂಗಳೂರು .

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.