ಮಡಿಕೇರಿ: ವಿರಾಜಪೇಟೆಯ ಮಸ್ಜಿದ್-ಏ-ಆಝಂ ಮತ್ತು ಬಿಸ್ಮಿಲ್ಲಾ ಶಾವಲಿ ಮಕಾನ್ ಸಮಿತಿಯಲ್ಲಿ ಸ್ಥಳೀಯ ಕೆಲವು ಸ್ವಯಂಘೋಷಿತ ಮುಸ್ಲಿಂ ನಾಯಕರು ಭಾರೀ ಹಣ ದುರುಪಯೋಗಪಡಿಸಿಕೊಂಡಿದ್ದಾರಲ್ಲದೆ, ವಕ್ಫ್ ಆಸ್ತಿ ಕಬಳಿಕೆ ಕೂಡ ನಡೆದಿದೆ ಎಂದು ವಿರಾಜಪೇಟೆ ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷ ಡಿ.ಎಂ. ಫರೂಕ್ ರಹೀಂ ಆರೋಪಿಸಿದ್ದಾರೆ.ಬುಧವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಅವ್ಯವಹಾರದಲ್ಲಿ ವಕ್ಫ್ ಅಧಿಕಾರಿ ವರ್ಗ ಹಾಗೂ ಜಿಲ್ಲಾ ವಕ್ಫ್ ಸಲಹಾ ಸಮಿತಿ ಕೂಡ ನೇರವಾಗಿ ಶಾಮೀಲಾಗಿದೆ ಎಂದು ಗಂಭೀರ ಆರೋಪ ಮಾಡಿದರು.

ವಿರಾಜಪೇಟೆಯ ಬಂಗಾಳಿ ಬೀದಿ ಸಮೀಪದಲ್ಲಿರುವ ಮಸ್ಜಿದ್-ಏ-ಆಝಂ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಆಸ್ತಿ ಇದೆ. ಆದರೆ, 1997ರಿಂದ ಈಚೆಗೆ ಈ ಮಸೀದಿಯಲ್ಲಿ ಮಹಾಸಭೆಯಾಗಲಿ ಅಥವಾ ಚುನಾವಣೆಯಾಗಲೀ ನಡೆದಿಲ್ಲ. ಹಾಲಿ, ಬೆಂಗಳೂರಿನಲ್ಲಿ ವಾಸ್ತವ್ಯವಿರುವ ವ್ಯಕ್ತಿಯೊಬ್ಬರು ಇದರ ಸ್ವಯಂಘೋಷಿತ ಅಧ್ಯಕ್ಷರಾಗಿದ್ದಾರೆ. ಕೆಲವು ಸ್ಥಳೀಯ ನಾಯಕರು ಈ ವ್ಯಕ್ತಿಯೊಂದಿಗೆ ಸೇರಿ ಅಕ್ರಮ ಕೂಟ ರಚಿಸಿಕೊಂಡು ಮಸೀದಿ ಸಮಿತಿ ಆಡಳಿತವನ್ನು ಕಾನೂನುಬಾಹಿರವಾಗಿ ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ದೂರಿದರು.

ಪಟ್ಟಣದ ಮತ್ತೊಂದು ಪ್ರಮುಖ ವಕ್ಫ್ ಆಸ್ತಿಯಾಗಿರುವ ಬಿಸ್ಮಿಲ್ಲಾ ಶಾವಲಿ ಮಕಾನ್ ಸಂಸ್ಥೆಯಲ್ಲೂ ಇದೇ ರೀತಿ ಕಾನೂನುಬಾಹಿರವಾಗಿ ವ್ಯಕ್ತಿಯೊಬ್ಬರು ಸ್ವಯಂಘೋಷಿತ ಅಧ್ಯಕ್ಷರೆಂದು ಹೇಳಿಕೊಂಡಿದ್ದಾರೆ. ಇವರನ್ನು ಯಾರಾದರೂ ಪ್ರಶ್ನಿಸಲು ಮುಂದಾದಲ್ಲಿ ಅವರ ವಿರುದ್ಧ ಗೂಂಡಾಗಿರಿ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.

ಮಸ್ಜಿದ್-ಏ-ಆಝಂ ಸಮಿತಿಯಲ್ಲಿ ಸ್ವಯಂಘೋಷಿತ ಅಧ್ಯಕ್ಷರಾಗಿರುವ ವ್ಯಕ್ತಿ ಕಳೆದ 10 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದು, ಮಸೀದಿಯ ಬಾಡಿಗೆ ಮಳಿಗೆಗಳ ಹಣ ಲಪಟಾಯಿಸಲು ತಿಂಗಳಿಗೊಮ್ಮೆ ವಿರಾಜಪೇಟೆಗೆ ಆಗಮಿಸುತ್ತಾರೆ. ಈತ ರಚಿಸಿಕೊಂಡಿರುವ ಅಕ್ರಮ ಕೂಟದಲ್ಲಿ ಸ್ಥಳೀಯ ಕೆಲವರು ಸೇರಿಕೊಂಡು ಹಣ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ಮಸ್ಜಿದ್-ಏ-ಆಝಂ ಸ್ವಾಮ್ಯದಲ್ಲಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಆಸ್ತಿ ಹಾಗೂ ಬಾಡಿಗೆ ಮಳಿಗೆಗಳಿದ್ದು, ಇವುಗಳಿಂದ ಬರುವ ಆದಾಯದ ಬಗ್ಗೆ ಯಾವುದೇ ಲೆಕ್ಕಪತ್ರಗಳನ್ನು ಸಮುದಾಯ ಬಾಂಧವರ ಮುಂದಿಡಲು ಈ ಕೂಟ ತಯಾರಿಲ್ಲ. ಮಸೀದಿಯ ಹಲವಾರು ಬಾಡಿಗೆ ಮಳಿಗೆಗಳನ್ನು ತಮಗೆ ಬೇಕಾದವರಿಗೆ ಅಕ್ರಮವಾಗಿ ನೀಡಿರುವ ಈ ಕೂಟ ಕಾನೂನನ್ನು ಗಾಳಿಗೆ ತೂರಿ ಸ್ವೇಚ್ಛಾಚಾರದಿಂದ ವರ್ತಿಸುತ್ತಿದೆ ಎಂದು ಆರೋಪಿಸಿದರು.

ವಿರಾಜಪೇಟೆ ವಕ್ಫ್ ಆಸ್ತಿಗಳ ಸಮಗ್ರ ತನಿಖೆಗೆ ಸರ್ಕಾರ ಕೂಡಲೇ ಆದೇಶಿಸಬೇಕು. ವಕ್ಫ್ ಆಡಳಿತ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಇಲಾಖೆಗೆ ಸೂಚಿಸಬೇಕು ಎಂದು ಆಗ್ರಹಿಸಿದರು. ವಕ್ಫ್ ಮಂಡಳಿಯ ಜಿಲ್ಲಾಧ್ಯಕ್ಷ ಉಸ್ಮಾನ್ ಹಾಜಿ ಮಸೀದಿಯಿಂದ ಐದು ಸಾವಿರ ರೂಪಾಯಿ ಪಡೆದಿರುವ ರಸೀದಿ ತಮ್ಮ ಕೈಗೆ ಸಿಕ್ಕಿದೆ. ಈ ರೀತಿ ಮಸೀದಿ ಹಣವನ್ನು ಪಡೆಯಲು ವಕ್ಫ್ ಮಂಡಳಿ ಜಿಲ್ಲಾಧ್ಯಕ್ಷರಿಗೆ ಕಾನೂನಿನಲ್ಲಿ ಅವಕಾಶವಿಲ್ಲ. ಯಾವ ಉದ್ದೇಶಕ್ಕಾಗಿ ಹಣ ಪಡೆಯಲಾಗಿದೆ ಎಂಬುದನ್ನು ಅಧ್ಯಕ್ಷರು ಬಹಿರಂಗಪಡಿಸಬೇಕು. ಇಲ್ಲವಾದಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ವಿರಾಜಪೇಟೆ ಪಟ್ಟಣ ಪಂಚಾಯ್ತಿ ಮಾಜಿ ಸದಸ್ಯ ಎಸ್.ವೈ. ಮುನವರ್ ಹಾಗೂ ವಕೀಲ ಎ.ಎ. ಶಫೀರ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.