ಅಸ್ಸಾಂ ಜನರು ನಗರ ತೊರೆಯುವ ಅಗತ್ಯವಿಲ್ಲ

ಗುರುವಾರ , ಮೇ 23, 2019
29 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಅಸ್ಸಾಂ ಜನರು ನಗರ ತೊರೆಯುವ ಅಗತ್ಯವಿಲ್ಲ

Published:
Updated:

ಬೆಂಗಳೂರು: `ಈಶಾನ್ಯ ರಾಜ್ಯದ ಜನರಿಗೆ ಬೆಂಗಳೂರು ಸುರಕ್ಷಿತವಾಗಿದೆ. ಅಸ್ಸಾಂ ಜನರು ನಗರ ಬಿಡುವ ಅಗತ್ಯವಿಲ್ಲ~ ಎಂದು ಬೆಂಗಳೂರು ಅಸ್ಸಾಂ ಸೊಸೈಟಿ ಪ್ರಧಾನ ಕಾರ್ಯದರ್ಶಿ ಪ್ರಂಜಲ್ ಮೇಧಿ ಹೇಳಿದರು.`ಬೆಂಗಳೂರು ನಗರದಲ್ಲಿಯೇ 40 ಸಾವಿರ ಅಸ್ಸಾಂ ಮೂಲದ ಜನ ನೆಲೆಸಿದ್ದಾರೆ. ಹಿಂದಿನಿಂದಲೂ ರಾಜ್ಯದಲ್ಲಿ ಅಸ್ಸಾಂ ಜನರು ಸುರಕ್ಷಿತವಾಗಿದ್ದಾರೆ. ಸೊಸೈಟಿಯು 1998ರಿಂದ ಅಸ್ಸಾಂ ವಲಸಿಗರ ಧ್ವನಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಸೊಸೈಟಿಗೆ 7 ಸಾವಿರ ಜನ ಸದಸ್ಯರಿದ್ದಾರೆ~ ಎಂದು ತಿಳಿಸಿದರು.

 

`ಅಸ್ಸಾಂನಲ್ಲಿ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದರೆ, ನಗರದಲ್ಲಿ ಯಾವುದೇ ಒಂದು ಸಮುದಾಯದ ಮೇಲೆ ಸಂಶಯಪಟ್ಟು ಬೆಂಗಳೂರು ತೊರೆಯುವ ಯಾವುದೇ ಘಟನೆಗಳು ನಡೆದಿಲ್ಲ~ ಎಂದು ಅಭಿಪ್ರಾಯಪಟ್ಟರು.`ಹೆಚ್ಚಿನ ಸಂಖ್ಯೆ ಜನರು ಮಾಲ್‌ಗಳಲ್ಲಿ, ಹೋಟೆಲ್, ಸೆಕ್ಯುರಿಟಿ ಗಾರ್ಡ್‌ಗಳಾಗಿ ಕೆಲಸವನ್ನು ಮಾಡುತ್ತಿದ್ದಾರೆ. ಅಲ್ಲದೇ, ಸಾಕಷ್ಟು ಪ್ರಮಾಣದಲ್ಲಿ ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿದ್ದಾರೆ ಹೇಳಿದರು.`ಜನರು ಸರ್ಕಾರದ ಮೇಲೆ ನಂಬಿಕೆಯನ್ನಿಡಬೇಕು. ಅವರಿಗೆ ಅಗತ್ಯ ನೆರವನ್ನು ಸರ್ಕಾರ ನೀಡಲು ಸಿದ್ಧವಿದೆ. ವದಂತಿಗಳನ್ನು ನಂಬಿ ಅವಸರವಾಗಿ ನಿರ್ಧಾರ ಕೈಗೊಳ್ಳುವ ಅವಶ್ಯಕತೆಯಿಲ್ಲ. ಯಾರಿಗಾದರೂ ತೊಂದರೆಯಾಗಿದ್ದರೆ, ಅವರು ಪೊಲೀಸರ ಅಥವಾ ಸೊಸೈಟಿ ಸಹಾಯ ಪಡೆಯಬಹುದು~ ಎಂದರು.`ರಂಜಾನ್ ನಂತರ ಅಸ್ಸಾಂ ಜನರ ಮೇಲೆ ದಾಳಿಗಳು ನಡೆಯಲಿವೆ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ವದಂತಿ ಹರಡುತ್ತಿದೆ. ಅಲ್ಲದೇ, ಟಿವಿ ಚಾನೆಲ್‌ಗಳು ಕೂಡ ಬಿಟ್ಟು ಬಿಡದೆ ಪ್ರಸಾರ ಮಾಡಿ ಈ ವದಂತಿಗಳು ದಟ್ಟವಾಗಿ ಹಬ್ಬಲು ಕಾರಣವಾಗಿವೆ~ ಎಂದು ಆರೋಪಿಸಿದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry