ಬುಧವಾರ, ಸೆಪ್ಟೆಂಬರ್ 30, 2020
23 °C

ಅಸ್ಸಾದ್ ಪದತ್ಯಾಗ ಮಾಡಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಸ್ಸಾದ್ ಪದತ್ಯಾಗ ಮಾಡಲಿ

ವಾಷಿಂಗ್ಟನ್ (ಪಿಟಿಐ): ಸಿರಿಯಾ ಮೇಲಿನ ಹಿಡಿತ ಕಳೆದುಕೊಳ್ಳುತ್ತಿರುವ ಅಧ್ಯಕ್ಷ ಬಶಾರ್ ಅಲ್-ಅಸ್ಸಾದ್ ಖುದ್ದಾಗಿ ಅಧಿಕಾರದಿಂದ ನಿರ್ಗಮಿಸಬೇಕು ಎಂದು ಅಮೆರಿಕ ಆಗ್ರಹಿಸಿದೆ.`ಅಸ್ಸಾದ್ ಅಧಿಕಾರದಿಂದ ತೊಲಗಬೇಕು. ಪರಿಸ್ಥಿತಿಯನ್ನು ಅವರು ಅರಿತುಕೊಳ್ಳಬೇಕು. ಅವರು ಸ್ವತಃ ನೋಡುತ್ತಿರುವಂತೆ ಸಿರಿಯಾ ಮೇಲಿನ ಅವರ ಹಿಡಿತ ಕೈತಪ್ಪುತ್ತಿದೆ. ಹಿಂಸಾಚಾರ ಎಲ್ಲದ್ದಕ್ಕೂ ಪರಿಹಾರವಲ್ಲ. ಆದಕಾರಣ ಅವರು ಕೂಡಲೇ ಪದತ್ಯಾಗ ಮಾಡಬೇಕು~ ಎಂದು ಅಮೆರಿಕ ವಿದೇಶಾಂಗ ನಾಗರಿಕ ವ್ಯವಹಾರಗಳ ಸಹಾಯಕ ಕಾರ್ಯದರ್ಶಿ ಮೈಕ್ ಹ್ಯಾಮರ್ ಹೇಳಿದ್ದಾರೆ.ಹೆಲಿಕಾಪ್ಟರ್ ದಾಳಿಗೆ ಬಲಿ

ಬೈರೂತ್ (ಎಎಫ್‌ಪಿ):
ಸಿರಿಯಾದಲ್ಲಿ ಸರ್ಕಾರ ವಿರೋಧಿ ಬಂಡುಕೋರರ ಮೇಲೆ ಸೇನೆ ನಡೆಸಿದ ಹೆಲಿಕಾಪ್ಟರ್ ದಾಳಿಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ.ಅಲೆಪ್ಪೊದಲ್ಲಿ ಮೂವರು ಮತ್ತು ಫರ್ದೋಸ್ ಜಿಲ್ಲೆಯ ಮೇಸಲೂನ್‌ನಲ್ಲಿ ಒಬ್ಬ ಬಂಡುಕೋರನನ್ನು ಹತ್ಯೆ ಮಾಡಲಾಗಿದೆ ಎಂದು ಸಿರಿಯಾದ ಮಾನವ ಹಕ್ಕುಗಳ ವೀಕ್ಷಕರು ತಿಳಿಸಿದ್ದಾರೆ.ರಾಷ್ಟ್ರದಾದ್ಯಂತ ಗುರುವಾರ ನಡೆದ ಹಿಂಸಾಚಾರದಲ್ಲಿ 164 ಜನ ಮೃತಪಟ್ಟಿದ್ದಾರೆ. ಇದರಲ್ಲಿ 84 ನಾಗರಿಕರು, 43 ಸೈನಿಕರು ಮತ್ತು ಏಳು ಬಂಡುಕೋರರು ಸೇರಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.