ಶುಕ್ರವಾರ, ಜನವರಿ 24, 2020
28 °C

ಆಂಧ್ರದಲ್ಲಿ ಲಘು ಭೂಕಂಪನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್ (ಐಎಎನ್‌ಎಸ್):  ಆಂಧ್ರ ಪ್ರದೇಶದ ಉತ್ತರ ಭಾಗದ ಕೃಷ್ಣಾ ಮತ್ತು ಗುಂಟೂರು ಜಿಲ್ಲೆಯ ಕೆಲವು ಭಾಗಗಳಲ್ಲಿ ಹಾಗೂ  ತೆಲಂಗಾಣ ವ್ಯಾಪ್ತಿಯ ಖಮ್ಮಮ್ ಜಿಲ್ಲೆಯಲ್ಲಿ ಗುರುವಾರ ಲಘು ಭೂಕಂಪನ ಸಂಭವಿಸಿದ್ದು, ಯಾವುದೇ ಹಾನಿಯಾದ ವರದಿಯಾಗಿಲ್ಲ.ಭೂಮಿ ಕೆಲವು ಸೆಕೆಂಡುಗಳ ಕಾಲ ಕಂಪಿಸಿದ ಪರಿಣಾಮವಾಗಿ ಭಯಗೊಂಡ ಜನ ಮನೆಗಳಿಂದ ಹೊರಗೋಡಿ ಬಂದರು. ಕೆಲವೆಡೆ 12.25ರಿಂದ 12.30ರವರೆಗಿನ ಅವಧಿಯಲ್ಲಿ ಭೂಮಿ ಐದು ಬಾರಿ ಕಂಪಿಸಿತು. ಇದರಿಂದ ಜನ ಮನೆಗಳಿಗೆ ತೆರಳಲು ಹಿಂಜರಿದರು ಎನ್ನಲಾಗಿದೆ.ಲಘು ಭೂಕಂಪನ ಆಗಿರುವುದರಿಂದ ರಿಕ್ಟರ್ ಮಾಪಕದಲ್ಲಿ ದಾಖಲಾಗಿಲ್ಲ.

 

ಪ್ರತಿಕ್ರಿಯಿಸಿ (+)