ಗುರುವಾರ , ಮೇ 13, 2021
35 °C

ಆಂಧ್ರ ಪಾಲಾದ ರಸಗೊಬ್ಬರ: ಖಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿ.ನರಸೀಪುರ: ರಾಜ್ಯ ಸಂಸದರ ಹಾಗೂ ರಾಜ್ಯ ಸರ್ಕಾರದ ಕೃಷಿ ಸಚಿವರ ಬೇಜವಾಬ್ದಾರಿತನದಿಂದಾಗಿ ರಾಜ್ಯದ ರೈತರಿಗೆ ಸಿಗಬೇಕಾದ ರಸಗೊಬ್ಬರ  ಆಂಧ್ರ ಪ್ರದೇಶದ ಪಾಲಾಗುತ್ತಿರುವುದನ್ನು ಕರ್ನಾಟಕ ರಾಜ್ಯ ರೈತ ಸಂಘ ಖಂಡಿಸಿದೆ.ರಾಜ್ಯದ ರೈತರಿಗೆ ರಸಗೊಬ್ಬರ ಸಾಕಾಗುತ್ತಿಲ್ಲ. ಇಂತಹ ವೇಳೆ ರಾಜ್ಯದ ಲೋಕಸಭಾ ಸದಸ್ಯರು ಹಾಗೂ ಕೃಷಿ ಸಚಿವರು ಕೇಂದ್ರ ಸರ್ಕಾರದ ಮೇಲೆ  ಒತ್ತಡ ಹೇರಿ ಹೆಚ್ಚಿನ ರಸಗೊಬ್ಬರ ತರಿಸಿ ರೈತರಿಗೆ ಸರಬರಾಜು ಮಾಡುವ ಬದಲು ನಿರ್ಲಕ್ಷ್ಯ ತೋರಿಸಿದ್ದಾರೆ.ಇದರ ಪರಿಣಾಮವಾಗಿ  ನಮ್ಮ ರೈತರು ಈಗ ಸಂಕಷ್ಟಕ್ಕೀಡಾಗುವಂತಾಗಿದೆ. ಇದರಿಂದ ರಸಗೊಬ್ಬರದ ಕೊರತೆ ಉಂಟಾದಲ್ಲಿ ಅದರ ಬೆಲೆ ಕೂಡ ಹೆಚ್ಚಾಗುವುದು ರೈತರಿಗೆ  ಮತ್ತಷ್ಟು ಹೊರೆ ಮಾಡಿದೆ. ಇದಕ್ಕೆ ರಾಜ್ಯ ಸರ್ಕಾರವೇ ಕಾರಣ ಎಂದು ಅಧ್ಯಕ್ಷ ಆಲಗೂಡು ಮಹಾದೇವ್ ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.