ಮಂಗಳವಾರ, ಜನವರಿ 28, 2020
24 °C

ಆಂಧ್ರ ಬಂದ್‌: ಜನರ ತತ್ತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಾವಗಡ: ತೆಲಾಂಗಣ ರಾಜ್ಯ ರಚನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿರುವುದನ್ನು ವಿರೋಧಿಸಿ  ಶುಕ್ರವಾರ ತಾಲ್ಲೂಕನ್ನು ಆವರಿಸಿ­ರುವ ಆಂಧ್ರದ ವಿಭಿನ್ನ ಪ್ರಾಂತ್ಯ­ಗಳಾದ ಮಡಕಶಿರಾ, ಹಿಂದೂಪುರ, ಪೆನುಗೊಂಡ, ಕಂಬದೂರಿನಲ್ಲಿ ವಿಶಾ­ಲಾಂಧ್ರ ಪರಿರಕ್ಷಣಾ ಸಮಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಬಂದ್  ನಡೆಸಲಾಯಿತು.

ಸೀಮಾಂಧ್ರ ಬಂದ್‌ನ ಬಿಸಿ ತಾಲ್ಲೂಕಿನ ಜನತೆಗೂ ತಟ್ಟಿತು. ಆಟೊ ದರ ದುಪ್ಪಟ್ಟಾಯಿತು. ವಾಹನ­ಗಳು ಚಂದ್ರಬಾವಿ ಬಳಿಯೇ ಸ್ಥಗಿತ­ಗೊಂಡವು. ಅಲ್ಲಿಂದ ಪಟ್ಟಣಕ್ಕೆ ತಲು­ಪಲು ಪ್ರಯಾಣಿಕರು ಹರಸಾಹಸ ಪಡಬೇಕಾಯಿತು.ಪದವಿ ಪರೀಕ್ಷೆಗಳ ಹಿನ್ನೆಲೆಯಲ್ಲಿ ಆಂಧ್ರದ ಮೂಲಕ ಪಟ್ಟಣದ ಪದವಿ ಪರೀಕ್ಷಾ ಕೇಂದ್ರಕ್ಕೆ ಬಂದು ಹೋಗುವ ವಿದ್ಯಾರ್ಥಿಗಳ ಪಾಡು ಹೇಳ ತೀರದ್ದಾಗಿತ್ತು. ಅಷ್ಟೇ ಅಲ್ಲದೆ ತಾಲ್ಲೂಕಿನ ಪದವಿ ಕಾಲೇಜುಗಳ ಉತ್ತರ ಪತ್ರಿಕೆಗಳನ್ನು ಕೊಂಡೊ­ಯ್ಯುಲು ಆಗಮಿಸಿದ್ದ ಜಾಗೃತ ದಳ­ದವರು ಬಂದ್‌ನಿಂದ ಸಮಸ್ಯೆ ಎದುರಿ­ಸಿದರು. ಶನಿವಾರವೂ ಬಂದ್ ಮುಂದುವರೆಯಲಿದೆ.

ಪ್ರತಿಕ್ರಿಯಿಸಿ (+)