ಆಂಧ್ರ: 2.92 ಕೋಟಿ ವಶ, ನಾಲ್ವರ ಬಂಧನ

ಭಾನುವಾರ, ಮೇ 26, 2019
27 °C

ಆಂಧ್ರ: 2.92 ಕೋಟಿ ವಶ, ನಾಲ್ವರ ಬಂಧನ

Published:
Updated:

ಕಾಕಿನಾಡ (ಎಪಿ/ಪಿಟಿಐ): ಇಲ್ಲಿನ ಪೂರ್ವ ಗೋಧಾವರಿ ಜಿಲ್ಲೆಯ ವಾಲವಲ್ಲೂರು ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ಕಾರಿನಲ್ಲಿ ಚಲಿಸುತ್ತಿದ್ದ ನಾಲ್ವರಿಂದ ರೂ. 2.92 ಕೋಟಿ ಹಣವನ್ನು ವಶಪಡಿಸಿಕೊಂಡು, ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಂದಿನಂತೆ ಪೊಲೀಸರು ಈ ಭಾಗದಲ್ಲಿ ವಾಹನಗಳ ತಪಾಸಣೆ ನಡೆಸುವ ಕಾರ್ಯದಲ್ಲಿದ್ದರು. ಇವರ ಕಾರನ್ನು ತಪಾಸಣೆ ನಡೆಸಿದಾಗ ಒಟ್ಟು ರೂ. 2.92ಕೋಟಿ ಹಣ ಕಾರಿನಲ್ಲಿ ದೊರೆತಿದೆ. ಹಣವನ್ನು ವಶಪಡಿಸಿಕೊಂಡು ಕಾರಿನಲ್ಲಿದ್ದ ನಾಲ್ವರನ್ನು ಬಂಧಿಸಲಾಗಿದೆ. ಇವರು ಪ್ರವಾಸಕ್ಕೆ ತೆರಳುತ್ತಿದ್ದರು ಎಂದು ಪೊಲೀಸರು ತಿಳಿಸಿದರು.ಭೂಮಿಯನ್ನು ಮಾರಾಟ ಮಾಡಿದರಿಂದ ಬಂದ ಹಣ ಇದಾಗಿದೆ ಎಂದು ಬಂಧಿತರು ಹೇಳಿಕೆಯನ್ನು ನೀಡಿದ್ದಾರೆ. ಆದರೆ, ಈ ಹೇಳಿಕೆ ನಂಬಲರ್ಹವಾಗಿಲ್ಲ. ಹೆಚ್ಚಿನ ವಿಚಾರಣೆಗೆ ಅವರನ್ನು ಒಳಪಡಿಸಲಾಗಿದೆ ಎಂದಿದ್ದಾರೆ.
 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry