ಭಾನುವಾರ, ಏಪ್ರಿಲ್ 11, 2021
26 °C

ಆಗಸ್ಟ್ 12, ಭಾನುವಾರದ ಕಾರ್ಯಕ್ರಮಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಗಸ್ಟ್ 12, ಭಾನುವಾರ
ಸೂಚನೆ

ನಗರದಲ್ಲಿ ಇಂದು ಹಾಗೂ ಸಾಂಸ್ಕೃತಿಕ ಮುನ್ನೋಟಕ್ಕೆ ಕಾರ್ಯಕ್ರಮಗಳ ವಿವರಗಳನ್ನು ನಿಗದಿತ ದಿನಕ್ಕಿಂತ ಕನಿಷ್ಠ

ಎರಡು ದಿನ ಮುಂಚೆ ಕಳುಹಿಸಬೇಕು. ಅಗತ್ಯವಿದ್ದಲ್ಲಿ ಪೂರಕ ಚಿತ್ರಗಳನ್ನೂ ಕಳುಹಿಸಬಹುದು.

ನುಡಿ ಅಥವಾ ಬರಹ ತಂತ್ರಾಂಶ ಉಪಯೋಗಿಸಿ. ಇ- ಮೇಲ್ ಮೂಲಕವೂ ವಿವರಗಳನ್ನು ಕಳುಹಿಸಬಹುದು. ಮೆಟ್ರೊ ಇ-ಮೇಲ್:
metropv@ prajavani.co.in                                
-ಸಂ

ಸಮ್ಮಿಲನ: ವಲ್ಲಭನಿಕೇತನ, ಗಾಂಧಿಭವನದ ಬಳಿ, ಶಿವಾನಂದ ವೃತ್ತ, ಶೇಷಾದ್ರಿಪುರ. ವಿಶ್ವ ಸ್ನೇಹ ದಿನಾಚರಣೆ ಪ್ರಯುಕ್ತ ಸ್ನೇಹಕವಿಗೋಷ್ಠಿ ಹಾಗೂ ಗೀತಗಾಯನ. ಅತಿಥಿ- ಸಾಹಿತಿಗಳಾದ ಅನಂತ ಜೋಷಿ, ಎಂ.ನೀಲಪ್ಪ. ಉಪಸ್ಥಿತಿ- ಹನಿಕವಿ ಕುವರ ಯಲ್ಲಪ್ಪ. ಅಧ್ಯಕ್ಷತೆ- ಕಲಾವಿದ ಬಿ. ಶಾಂತಕುಮಾರ್. ಬೆಳಿಗ್ಗೆ 10.30.ಪಾಜಕ ಪ್ರಕಾಶನ: ದತ್ತಾತ್ರೇಯ ದೇವಸ್ಥಾನ, ನಂ.59, 3ನೇ ಬ್ಲಾಕ್, ತ್ಯಾಗರಾಜನಗರ. ದಾಸವೆಂಕಟಸುತ ರಚಿತ ಹರಿದಾಸ ಗಾನಸುಧಾ (ಭಕ್ತಿಗೀತೆಗಳು), ಅನುಭವದಾಳದಿಂದ (ಕವನ ಸಂಕಲನ) ಕೃತಿ ಲೋಕಾರ್ಪಣೆ. ಅಧ್ಯಕ್ಷತೆ- ಹಿರಿಯ ಕವಿ ಡಾ.ಎಚ್.ಎಸ್. ವೆಂಕಟೇಶಮೂರ್ತಿ. ಅತಿಥಿ- ಗಮಕಿ ಎಂ.ಆರ್. ಸತ್ಯನಾರಾಯಣ, ನಟ ಎಚ್.ಜಿ. ಸೋಮಶೇಖರ ರಾವ್. ಸಂಜೆ 4.ರಂಗ ಕಲಾಕ್ಷೇತ್ರ: ಪರಿಮಳ ಸಭಾಂಗಣ, ರಾಘವೇಂದ್ರ ಸ್ವಾಮಿ ದೇವಸ್ಥಾನ, ಇಂದಿರಾನಗರ ಮೆಟ್ರೊ ಸ್ಟೇಷನ್ ಹಿಂಭಾಗ, ಸಿಎಂಎಚ್ ರಸ್ತೆ, ಇಂದಿರಾನಗರ. 20ನೇ ವಾರ್ಷಿಕೋತ್ಸವದಲ್ಲಿ ಬೆಳಿಗ್ಗೆ 9.30ರಿಂದ ಸಂಸ್ಥೆಯ ಕಿರಿಯ ವಿದ್ಯಾರ್ಥಿಗಳಿಂದ ಸಂಗೀತ ಮತ್ತು ಭರತನಾಟ್ಯ. ಅತಿಥಿ- ರಾಘವೇಂದ್ರ ಸ್ವಾಮಿ ದೇವಸ್ಥಾನದ ಅಧ್ಯಕ್ಷ ಕೆ.ಎನ್. ಬೆಂಗೇರಿ, ವಿದ್ವಾನ್ ಅನಿಲ್ ಡಿ. ಕುಂಬ್ಳೆ. ಸಂಜೆ 5ರಿಂದ ರಂಗನಾಯಕುಲು ಪದ್ಮಶಾಲಿ ಹಾಗೂ ಲಕ್ಷ್ಮಿ ಅವರಿಂದ ಭರತನಾಟ್ಯ. ಅತಿಥಿ- ದಿಯಾ ಅಕಾಡೆಮಿ ಆಫ್ ಲರ್ನಿಂಗ್ ಪ್ರಾಂಶುಪಾಲರಾದ ಡಾ.ಎನ್.ಆರ್. ಶಶಿಕಲಾ. ವಿಶ್ವ ಹಿಂದು ಪರಿಷತ್: ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನ. ಪುಟಾಣಿ ಕೃಷ್ಣರ ಮಿಲನ. ಅಧ್ಯಕ್ಷತೆ- ಇಸ್ಕಾನ್ ಸಾಂಸ್ಕೃತಿಕ ವಿಭಾಗದ ನಿರ್ದೇಶಕ ತಿರುದಾಸ. ಅತಿಥಿ- ವಿಹಿಂಪ ಕೇಂದ್ರೀಯ ಸಲಹಾ ಮಂಡಳಿ ಸದಸ್ಯ ವೈ.ಕೆ. ರಾಘವೇಂದ್ರರಾವ್.  ಬಳಿಕ ಸಾಮೂಹಿಕ ಕೃಷ್ಣಾಷ್ಟಕ ಗಾಯನ. ಬೆಳಿಗ್ಗೆ 10.ಹಂಸಧ್ವನಿ: ನಂ.17, ಕ್ರಿಯೇಟಿವ್ ಚಿತ್ರಕೂಟ ಅಪಾರ್ಟ್‌ಮೆಂಟ್ಸ್, ತಲಕಾವೇರಿ ನಗರ, ಅಮೃತಹಳ್ಳಿ ಮುಖ್ಯರಸ್ತೆ. ಕಲಾಮಂಟಪ ತಿಂಗಳ ಸರಣಿ ಕಾರ್ಯಕ್ರಮದಲ್ಲಿ ಶಿಖಾ ಉಪಾಧ್ಯಾಯ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಕಾರ್ಯಕ್ರಮ. ಅತಿಥಿ- ಎಸ್.ಎನ್. ನಾರಾಯಣಮೂರ್ತಿ. ವಯೊಲಿನ್- ಎಂ.ಪಿ. ಆದಿತ್ಯ, ಮೃದಂಗ- ಬಿ.ಎಸ್ ಪ್ರಶಾಂತ್. ಬೆಳಿಗ್ಗೆ 10.ನಿರ್ಮಲ ನೃತ್ಯ ನಿಕೇತನ: ಮಾರುತಿ ಮಂದಿರ ಸಭಾಂಗಣ, ವಿಜಯನಗರ. ಸಂಗೀತ ಮತ್ತು ಭರತನಾಟ್ಯ ಕಾರ್ಯಕ್ರಮ. ಭಕ್ತಿ ಸಂಗೀತ- ಮದನಿಕ ಮಂಜುನಾಥ್, ನಿರ್ಮಲ ನೃತ್ಯ ನಿಕೇತನದ ವಿದ್ಯಾರ್ಥಿಗಳಿಂದ ಭರತನಾಟ್ಯ. ನಿರ್ದೇಶನ- ನಿರ್ಮಲಾ ಮಂಜುನಾಥ್. ಅತಿಥಿ- ಮಾಜಿ ಕೇಂದ್ರ ಸಚಿವ ವಿ. ಧನಂಜಯ ಕುಮಾರ್, ಸುಶ್ರುತ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಬಿ.ಆರ್. ರಾಮಕೃಷ್ಣ, ಎ.ಎಸ್.ಸಿ. ಮಹಾವಿದ್ಯಾಲಯ ಅಧ್ಯಕ್ಷ ಪ್ರೊ.ಎಚ್.ಎಸ್. ಅನಂತಮೂರ್ತಿ, ಟಿ.ಎಸ್. ಹೆಗ್ಡೆ. ಸಂಜೆ 6.ವಿಶ್ವ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಪರಿಷತ್: ಬಾಪೂಜಿ ವಿದ್ಯಾ ಸಂಸ್ಥೆ, ಮಾಗಡಿ ರಸ್ತೆ. `ಅಸ್ಪೃಶ್ಯತೆಯ ಉಳಿವು ರಾಷ್ಟ್ರ ಹಾಗೂ ಧರ್ಮಕ್ಕೆ ಕಪ್ಪು ಚುಕ್ಕೆ~ ಹಾಗೂ `ಒಳ ಮೀಸಲಾತಿ~ ವಿಷಯದ ಕುರಿತು ರಾಜ್ಯಮಟ್ಟದ ವಿಚಾರ ಸಂಕಿರಣ. ಉದ್ಘಾಟನೆ- ಪ್ರೊ.ಎಸ್.ಜಿ. ಸಿದ್ಧರಾಮಯ್ಯ. ಅಧ್ಯಕ್ಷತೆ- ಡಾ.ಎಲ್. ಹನುಮಂತಯ್ಯ. ಅಗಸನೂರು ತಿಮ್ಮಪ್ಪ ರಚಿತ `ಎದ್ದು ಬಾ ಗುರುವೆ~ ಮಂತ್ರಾಲಯದ ಗುರುರಾಘವೇಂದ್ರ ಸ್ವಾಮಿ ಭಕ್ತಿಗೀತೆ ಕ್ಯಾಸೆಟ್ ಬಿಡುಗಡೆ. ಬೆಳಿಗ್ಗೆ 11.30.ಗಾಂಧಿ ಸಾಹಿತ್ಯ ಸಂಘ: 8ನೇ ಕ್ರಾಸ್, ಮಲ್ಲೇಶ್ವರ. ಕ್ವಿಟ್ ಇಂಡಿಯಾ ದಿನದ ಸ್ಮರಣೆ, ಸ್ವಾತಂತ್ರ್ಯ ಹೋರಾಟಗಾರರ ಸ್ನೇಹಕೂಟ. ಸಂಜೆ 5.ಸಾಯಿ ಗೀತಾಂಜಲಿ: ಸತ್ಯಸಾಯಿ ಸೇವಾ ಕ್ಷೇತ್ರ, 21ನೇ ಮುಖ್ಯರಸ್ತೆ, 7ನೇ ಅಡ್ಡರಸ್ತೆ, ಜೆ. ಪಿ. ನಗರ 2ನೇ ಹಂತ. ಭಜನೆ. ಸಂಜೆ 6.15.ವಿಜಯನಗರ ಆದಾಯ ತೆರಿಗೆ ಬಡಾವಣೆ ಕ್ಷೇಮಾಭಿವೃದ್ಧಿ ಸಂಘ: ಭಾವನಾ ಸಭಾಂಗಣ, ನಂ.34, 2ನೇ ಮುಖ್ಯರಸ್ತೆ, ಇನ್‌ಕಂ ಟ್ಯಾಕ್ಸ್ ಲೇಔಟ್, ವಿಜಯನಗರ. ಶಂಕರ್ ಶಾನುಭೋಗ್ ಅವರಿಂದ ಕಾವ್ಯ ಸಂಗೀತ. ಸಂಜೆ 6.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.