ಮಂಗಳವಾರ, ಜನವರಿ 21, 2020
29 °C
ಕೃಷಿ ಉತ್ಪನ್ನ ಮಾರುಕಟ್ಟೆ ಸಪ್ತಾಹ ಆಚರಣೆ

ಆಡಳಿತ ಮಂಡಳಿ ರಚನೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೊಡ್ಡಬಳ್ಳಾಪುರ: ‘ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಶೀಘ್ರ ಚುನಾವಣೆ ನಡೆಸಿ ಆಡಳಿತ ಮಂಡಳಿ ರಚಿಸಬೇಕು’ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಟಿ.ವಿ. ಲಕ್ಷ್ಮೀನಾರಾಯಣ್‌ ಆಗ್ರಹಿಸಿದರು.ನಗರದ ಎಪಿಎಂಸಿ ಆವರಣದಲ್ಲಿ ನಡೆದ ಕೃಷಿ ಉತ್ಪನ್ನ ಮಾರುಕಟ್ಟೆ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗ ವಹಿಸಿ ಅವರು ಮಾತನಾಡಿದರು.‘ನಗರದ ಎಪಿಎಂಸಿ ಆವರಣದಲ್ಲಿ ಸರ್ಕಾರದ ವತಿಯಿಂದ ಬೆಂಬಲ ಬೆಲೆ ಯಲ್ಲಿ ಮೆಕ್ಕೆಜೋಳ ಖರೀದಿ ಆರಂಭ ವಾಗಿದೆ. ಎಪಿಎಂಸಿ ಆವರಣದಲ್ಲಿ ಆಧುನಿಕ ಗೋದಾಮು ನಿರ್ಮಾಣ ವಾಗಿರುವ ಹಿನ್ನೆಲೆಯಲ್ಲಿ ರೈತರು ಜೋಳ ಸೇರಿದಂತೆ ಯಾವುದೇ ರೀತಿಯ ಧಾನ್ಯಗಳನ್ನು ಗೋದಾಮಿನಲ್ಲಿ ಸಂಗ್ರಹಿ ಸಿಟ್ಟು ಸೂಕ್ತ ಬೆಲೆ ಬಂದಾಗ ಮಾರಾಟ ಮಾಡಿಕೊಳ್ಳಬಹುದು. ರೈತರು ಗೋದಾಮಿನಲ್ಲಿ ಸಂಗ್ರಹಿಸಿರುವ ಧಾನ್ಯಕ್ಕೆ ಶೇ.75ರಷ್ಟು ಸಾಲ ಸೌಲಭ್ಯವು ದೊರೆಯಲಿದೆ’ ಎಂದು ಹೇಳಿದರು.ಎಪಿಎಂಸಿ ಮಾಜಿ ಅಧ್ಯಕ್ಷ ತಿ.ರಂಗ ರಾಜು ಮಾತನಾಡಿ, ‘ಎಪಿಎಂ ಸಿಯಲ್ಲಿ  ಇಂದಿಗೂ ಬಿಳಿ ಚೀಟಿಯಲ್ಲಿಯೇ ರೈತ ರಿಗೆ ಹಣ ನೀಡುವ ವ್ಯವಸ್ಥೆ ಜಾರಿಯ ಲ್ಲಿದೆ. ತೂಕ ಮತ್ತು ಆಳತೆ ಅಧಿಕಾರಿ ಗಳು ವಿದ್ಯುತ್‌ ಚಾಲಿತ ತೂಕದ ಯಂತ್ರಗಳನ್ನು ಪರಿಶೀಲಿಸುವ ಮೂಲಕ ವಿದ್ಯುತ್‌ ಚಾಲಿತ ಯಂತ್ರಗಳಲ್ಲೇ ತರಕಾರಿ ಸೇರಿದಂತೆ ಮಾರು ಕಟ್ಟೆಯ ಎಲ್ಲ ಧಾನ್ಯಗಳನ್ನು ತೂಕ ಮಾಡುವಂತ ವ್ಯವಸ್ಥೆ ಜಾರಿಗೆ ತರಬೇಕು’ ಎಂದರು.ಸಪ್ತಾಹ ಸಭೆಯ ಅಧ್ಯಕ್ಷತೆಯನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಉಪನಿರ್ದೇಶಕಿ ಗಾಯಿತ್ರಿ ವಹಿಸಿದ್ದರು.ಸಮಾರಂಭದಲ್ಲಿ ಎಪಿಎಂಸಿ ಕಾರ್ಯದರ್ಶಿ ಆರ್‌.ಭಾಗ್ಯಲಕ್ಷ್ಮೀ, ತಾ.ಪಂ. ಅಧ್ಯಕ್ಷೆ ನರಸಮ್ಮ, ಉಪಾಧ್ಯಕ್ಷ ಮುನಿ ಯಪ್ಪ, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಬಿ.ಸಿ. ನಾರಾಯಣಸ್ವಾಮಿ, ನಗರ ಸಭೆ ಸದಸ್ಯ ಲೋಕೇಶ್‌ಬಾಬು, ಜಿಲ್ಲಾ ಸಹಕಾರಿ ಯೂನಿಯನ್‌ ನಾರಾಯಣಗೌಡ, ಅಖಿಲ ಭಾರತ ವಿದ್ಯುತ್‌ ಮಗ್ಗಗಳ ಮಂಡಳಿ ನಾಮನಿರ್ದೇಶಕ ಸದಸ್ಯ ಕೆ.ಜಿ. ಅಶೋಕ್‌, ಕಾಂಗ್ರೆಸ್‌ ಯುವ ಮುಖಂಡ ರಾಮಣ್ಣ, ಮಂಜುನಾಥ್‌, ಅಲ್ತಾಫ್‌ ಮತ್ತಿತರರು ಹಾಜರಿದ್ದರು.

ಪ್ರತಿಕ್ರಿಯಿಸಿ (+)