ಮೈಸೂರು: ಎರಡು ಹೆಣ್ಣುಮಕ್ಕಳ ನಂತರ ಗಂಡುಮಗು ಹುಟ್ಟಿದಾಗ ಆ ತಂದೆ-ತಾಯಿಗೆ ಸಂತಸವೋ ಸಂತಸ. ಆದರೆ, ಅದು ಬಹಳ ದಿನ ಉಳಿಯಲಿಲ್ಲ!

ಕೆಲವೇ ದಿನಗಳಲ್ಲಿ ವಿಚಿತ್ರವಾದ ನರರೋಗದಿಂದ ಮಗು ಬಳಲಿತು. ಆ ಮಗುವಿಗೆ ಈಗ ನಾಲ್ಕು ವರ್ಷ. ಅಲ್ಲಿಂದ ಇಲ್ಲಿಯವರೆಗೆ ನಾಲ್ಕು ಲಕ್ಷ ರೂಪಾಯಿ ಸುರಿದರೂ ಮಗುವಿನ ಸಮಸ್ಯೆ ಬಗೆಹರಿಯಲಿಲ್ಲ. ಮಗುವಿಗೆ ಸೆರೆಬ್ರಲ್ ಪಾಲ್ಸಿ (ಮಸ್ತಿಷ್ಕ ಪಾರ್ಶ್ವವಾಯು) ಸಮಸ್ಯೆ ಇರುವುದನ್ನು ಕಂಡುಹಿಡಿದಿದ್ದೇ ಸಾಧನೆ.

ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಾರ್ವಜನಿಕ ಕುಂದುಕೊರತೆ ಮತ್ತು ಫೋನ್-ಇನ್ ಕಾರ್ಯಕ್ರಮಕ್ಕೆ ಪಿರಿಯಾಪಟ್ಟಣ ತಾಲ್ಲೂಕಿನ ಬೈಲುಕುಪ್ಪೆಯಿಂದ ಬಂದಿದ್ದ ಪ್ರೇಮಾ ಮತ್ತು ಮೋಹನ್ ಅವರು ತಮ್ಮ ಮಗುವಿನ ಆರೈಕೆಗೆ ಸಹಾಯ ನೀಡುವಂತೆ ಜಿಲ್ಲಾಧಿಕಾರಿ ರಾಮೇಗೌಡ ಅವರಿಗೆ ಮನವಿ ಮಾಡಿಕೊಂಡರು. ಸಮಸ್ಯೆಯನ್ನು ಆಲಿಸಿ, ಮಗುವನ್ನು ನೋಡಿದ ಜಿಲ್ಲಾಧಿಕಾರಿ, `ಇವರಿಗೆ ವೈದ್ಯಕೀಯ ಸಹಾಯ ನೀಡುವ ಅವಕಾಶಗಳ ಬಗ್ಗೆ ಪರಿಶೀಲಿಸಿ' ಎಂದು ಜಿಲ್ಲಾ ಆರೋಗ್ಯಾಧಿಕಾರಿ ಮಾಲೇಗೌಡ ಅವರಿಗೆ ಸೂಚಿಸಿದರು.

ಈ ಕೃಷಿಕ ದಂಪತಿ ಶ್ರೀಮಂತರಲ್ಲ. ಆದರೆ, ತಮ್ಮ ಮಗ ಪ್ರಜ್ವಲ್ ಬದುಕಿಗಾಗಿ ಅಹರ್ನಿಶಿ ಹೋರಾಡುತ್ತಿದ್ದಾರೆ. ಕಂಡ ಕಂಡ ದೇವರಿಗೆ ಮೊರೆ ಇಟ್ಟಿದ್ದಾರೆ. ವೈದ್ಯರಿಗೆಲ್ಲ ತೋರಿಸಿದ್ದಾರೆ. ಪ್ರಜ್ವಲ್ನನ್ನು ತೊಡೆ ಮೇಲೆ ಹಾಕಿಕೊಂಡಿದ್ದ ಮೋಹನ್ `ಪ್ರಜಾವಾಣಿ' ಮುಂದೆ ತಮ್ಮ ಅಳಲು ತೋಡಿಕೊಂಡರು.

`ಎರಡು ಹೆಣ್ಣುಮಕ್ಕಳು ಆರೋಗ್ಯವಾಗಿವೆ. ಅವರ ನಂತರ ಒಬ್ಬ ಗಂಡು ಮಗು ಎಂಬ ಆಸೆ ಇತ್ತು. ಅದು ಈಡೇರಿತು. ಆದರೆ, ಕೆಲವು ತಿಂಗಳ ನಂತರ ವಿಚಿತ್ರ ನಡವಳಿಕೆಗಳು ಆರಂಭವಾದವು. ತನ್ನ ದೇಹದ ಮೇಲೆ ನಿಯಂತ್ರಣವಿಲ್ಲದೇ ಬೀಳುವ. ಮಾತನಾಡಲು ಆಗದೇ ಒದ್ದಾಡುತ್ತಿದ್ದ. ಕುಶಾಲನಗರದ ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ತೋರಿಸಿದೆವು. ಅಂದಿನಿಂದ ಇಂದಿನವರೆಗೂ ಬೆಂಗಳೂರು, ಮೈಸೂರು ಸೇರಿದಂತೆ ಹಲವಾರು ವೈದ್ಯರಿಗೆ ತೋರಿಸಿದ್ದೇವೆ. ಪ್ರತಿ ತಿಂಗಳೂ ಬಂದು ಔಷಧಿ ತೆಗೆದುಕೊಳ್ಳಿ ಎಂದು ಹೇಳುತ್ತಾರೆ. ಆದರೆ, ಶಾಶ್ವತ ಪರಿಹಾರ ಮಾತ್ರ ಸಿಗುತ್ತಿಲ್ಲ' ಎಂದು ಕಣ್ಣೀರಾದರು.

`ನನ್ನ 12 ವರ್ಷದ ಮಗಳು ಚೈತ್ರಾ ಮತ್ತು 8 ವರ್ಷದ ಚಿತ್ರಾ ಆರೋಗ್ಯವಾಗಿದ್ದಾರೆ. ಆಯುರ್ವೇದ, ಅಲೋಪತಿ ಸೇರಿದಂತೆ ಎಲ್ಲ ವೈದ್ಯಕೀಯ ಪದ್ಧತಿಗಳ ಚಿಕಿತ್ಸೆ ಕೊಡಿಸಿದ್ದೇವೆ. ಆದರೆ, ಅದರಿಂದ ಏನೂ ಪ್ರಯೋಜನವಾಗುತ್ತಿಲ್ಲ' ಎಂದು ಗದ್ಗದಿತರಾದರು.

ಅಫೀಫಾಗೂ ಕಾಡುವ ಪಾಲ್ಸಿ
ಪಿರಿಯಾಪಟ್ಟಣದ ಬೈಲುಕುಪ್ಪೆಯ 6 ವರ್ಷದ ಮುದ್ದುಮುಖದ ಬಾಲಕಿ ಅಫೀಫಾ ತಬ್ರಕ್ಗೆ ನಿಲ್ಲಲೂ ಸಾಧ್ಯವಿಲ್ಲ, ಕೂರಲೂ ಆಗುವುದಿಲ್ಲ. ಏಕೆಂದರೆ ಅವಳ ಬೆನ್ನುಹುರಿಯು ಸೆರೆಬ್ರಲ್ ಪಾಲ್ಸಿಯಿಂದಾಗಿ ನಿಯಂತ್ರಣ ಕಳೆದುಕೊಂಡಿದೆ. ಸದಾ ಮಲಗಿರಬೇಕು ಇಲ್ಲವೇ ಯಾರದಾದರೂ ಆಸರೆಯಿಂದ ಕೂರಬೇಕು, ನಡೆಯಬೇಕು. ಜಿಲ್ಲಾಧಿಕಾರಿ ಅವರ ಸಾರ್ವಜನಿಕ ಕುಂದುಕೊರತೆ ಗಳ ಕಾರ್ಯಕ್ರಮಕ್ಕೆ ತನ್ನ ತಂದೆ ಸೈಯದ್ ಮುನೀರ್ ಜೊತೆಗೆ ಆಗಮಿಸಿದ್ದ ಈ ಮುದ್ದು ಮಗುವನ್ನು ನೋಡಿದವರೆಲ್ಲರೂ ಮಮ್ಮಲ ಮರುಗಿದರು. ಚೆಂದಾಗಿ ಮಾತನಾಡುವ ಈ ಹುಡುಗಿಗೆ 11 ತಿಂಗಳ ವಯಸ್ಸಿನಿಂದಲೇ ಸೆರೆಬ್ರಲ್ ಪಾಲ್ಸಿ ಗಂಟುಬಿದ್ದಿದೆ. ಆಟೋರಿಕ್ಷಾ ಚಾಲಕರಾಗಿರುವ ತಂದೆ ಗಳಿಸುವ ಆದಾಯ ಸಂಸಾರ ನಡೆಸಲೂ ಸಾಕಾಗದು. ಆದರೆ, ಮಗಳ ಚಿಕಿತ್ಸೆಗಾಗಿ ಸಾಲ, ಸೋಲ ಮಾಡಿ ಸುಮಾರು ನಾಲ್ಕು ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. `ಅಫೀಫಾ 11ನೇ ತಿಂಗಳಲ್ಲಿ ದೇಹ ಹೊರಳಿಸಲಿಲ್ಲ. ಅಂಬೆಗಾಲು ಇಡಲೂ ಇಲ್ಲ. ಆಗ ಸಂಶಯ ಗೊಂಡು ವೈದ್ಯರಿಗೆ ತೋರಿಸಿದಾಗ ಸೆರೆಬ್ರಲ್ ಪಾಲ್ಸಿ ಇರುವುದು ಗೊತ್ತಾಯಿತು. ಇತ್ತೀಚೆಗೆ ವೈದ್ಯರು ಹೇಳಿದ ಪ್ರಕಾರ ಒಂದು ಚುಚ್ಚುಮದ್ದು ಕೊಡಿಸುತ್ತಿದ್ದೇವೆ. ಒಂದು ಚುಚ್ಚುಮದ್ದಿಗೆ 25 ಸಾವಿರ ರೂಪಾಯಿ.

ಈಗಾಗಲೇ ಅಂತಹ ನಾಲ್ಕು ಚುಚ್ಚುಮದ್ದು ನೀಡಿದ್ದೇವೆ. ಚೆನ್ನಾಗಿ ಮಾತನಾಡುತ್ತಾಳೆ. ಈ ವರ್ಷ ಶಾಲೆಗೆ ಕಳುಹಿಸಬೇಕು ಎಂದುಕೊಂಡಿದ್ದೇವೆ. ಶಸ್ತ್ರಚಿಕಿತ್ಸೆ ಮಾಡಿಸಲು, ಚುಚ್ಚುಮದ್ದು ಕೊಡಿಸಲು ದುಡ್ಡು ಇಲ್ಲ. ಅದಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದೇನೆ.

ಆರೋಗ್ಯಾಧಿಕಾರಿಗಳೊಂದಿಗೆ ಮಾತನಾಡಲು ಸೂಚಿಸಿದ್ದಾರೆ. ಮುಂದೇನಾಗುತ್ತೋ ನೋಡಬೇಕು' ಎಂದು ಮುನೀರ್ ಮೌನವಾದರು.

ಮಕ್ಕಳಿಗೆ ಮಾಸಿಕ ಒಂದು ಸಾವಿರ ರೂಪಾಯಿ
ಜಿಲ್ಲಾಧಿಕಾರಿ ಅವರು ಮಾತು ಕೊಟ್ಟಿರುವ ಪ್ರಕಾರ ಈ ಮಕ್ಕಳಿಗೆ ಮಾಸಿಕ ಒಂದು ಸಾವಿರ ರೂಪಾಯಿ ವೈದ್ಯಕೀಯ ಸಹಾಯಧನವಾಗಿ ನೀಡಲಾಗುವುದು. ಪ್ರಜ್ವಲ್ ಸಮಸ್ಯೆಯೂ ತೀವ್ರವಾಗಿದೆ. ಅದೇ ಬಾಲಕಿ ಅಫೀಫಾ ಸಮಸ್ಯೆ ಸಹಜವಾಗಿದೆ. ಆದ್ದರಿಂದ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಪರಿಶೀಲಿಸಲಾಗುವುದು.
-ಡಾ.ಮಾಲೇಗೌಡ ಜಿಲ್ಲಾ ಆರೋಗ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.