ಸೊಲ್ಲಾಪುರ: ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆತ್ಮವಿಶ್ವಾಸದಿಂದ ಎದುರಿಸಬೇಕು. ಯಾವುದೇ ಕಾರಣಕ್ಕೂ ಎದೆಗುಂದಬಾರದು ಎಂದು ಜಿಲ್ಲಾಧಿಕಾರಿ ಡಾ.ಪ್ರವೀಣ ಗೇಡಾಮ ಹೇಳಿದರು.

ನಗರದ ಶಿವ ಸ್ಮಾರಕ ಭವನದಲ್ಲಿ ಡ್ರೀಮ್ ಫೌಂಡೇಷನ್ ವತಿಯಿಂದ ಈಚೆಗೆ ಏರ್ಪಡಿಸಿದ್ದ ಯುಪಿಎಸ್ಸಿ, ಎಂಪಿಎಸ್ಸಿ ಪರೀಕ್ಷಾ ವ್ಯಾಖ್ಯಾನ ಮಾಲೆಯ ಸಮಾರೋಪ, ಡ್ರೀಮ್ ಯುವ ಚೇತನ ಮತ್ತು ಡ್ರೀಮ್ ರಾಷ್ಟ್ರ ಚೇತನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಇಂಗ್ಲೀಷ ಭಾಷೆಯ ಬಗ್ಗೆ ಭಯ ಬೇಡ. ನಿರಂತರ ಅಭ್ಯಾಸದಿಂದ ಯಶಸ್ಸು ಖಚಿತವಾಗುತ್ತದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಸಂವಾದ ನಡೆಯಿತು.

ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸ್ವಾಮಿ ವಿವೇಕಾನಂದ ಕೇಂದ್ರ, ಶಿವಲಾಲ ರಾಮಚಂದ ವಾಚನಾಲಯ, ಗುಜರಾತಿಮಿತ್ರ ಮಂಡಳಿ ಹಾಗೂ ಸಾಂಗೋಲೆ ಮಹಿಳಾ ನೂಲಿನ ಗಿರಣಿ ಸಂಸ್ಥೆಗಳಿಗೆ ‘ಡ್ರೀಮ್ ರಾಷ್ಟ್ರ ಚೇತನ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಆನಂದ ಬನಸೋಡೆ, ಶ್ರೀಲೇಖಾ ಪಾಟೀಲ, ಸಂಭಾಜಿ ಗಾವಖರೆ, ಪ್ರೊ.ಆರ್.ಎಂ.ಖಾಜಿ, ಗುರುಬಾಳ ತಾವಸೆ, ಧನಂಜಯ ಶಹಾ, ಸಚಿನ್ ಕಲ್ಯಾಣ ಶೆಟ್ಟಿ ಅವರಿಗೆ ‘ಡ್ರೀಮ್ ಯುವ ಚೇತನ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಜಯಸಿದ್ದೇಶ್ವರ ಶಿವಚಾರ್ಯ ಮಹಾಸ್ವಾಮಿ, ಶಾಸಕ ವಿಜಯ ದೇಶಮುಖ, ಸಿದ್ದೇಶ್ವರ ದೇವಸ್ಥಾನ ಅಧ್ಯಕ್ಷ ಧರ್ಮರಾಜ ಕಾಡಾದಿ, ಡಾ.ಎಸ್.ಎಸ್.ಮಾಲದಾರ, ಶ್ರೀರಾಮ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರಕಾಶ ಪಾಟೀಲ ಇದ್ದರು.
ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಕಾಶಿನಾಥ ಭತಗುಣಕಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಂಗೀತಾ ಭತಗುಣಕಿ ನಿರೂಪಿಸಿದರು. ಫೌಂಡೇಷನ್ ಸಲಹೆಗಾರ ಅರವಿಂದ ಜೋಷಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.