ಶನಿವಾರ, ಜೂಲೈ 11, 2020
28 °C

ಆದಾಯ ಕರ ಸಾಕ್ಷ್ಯಚಿತ್ರದಲ್ಲಿನಟಿಸಿದ್ದ ಪ್ರಿಯಾಂಕಾ ಚೋಪ್ರಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಆದಾಯ ತೆರಿಗೆ ದಾಳಿಗೆ ಒಳಗಾಗಿರುವ ಬಾಲಿವುಡ್ ಸುಂದರಿ ಪ್ರಿಯಾಂಕಾ ಚೋಪ್ರಾ ಕಳೆದ ವರ್ಷವಷ್ಟೇ ತೆರಿಗೆ ಕಟ್ಟಿ ಎಂಬ ಸಂದೇಶ ಸಾರುವ ಕಿರು ಸಾಕ್ಷ್ಯಚಿತ್ರವೊಂದರಲ್ಲಿ ನಟಿಸಿದ್ದರು.ಪ್ರಿಯಾಂಕಾ ಖ್ಯಾತ ಬಾಲಿವುಡ್ ನಟರಾದ ಅಮೀರ್ ಖಾನ್ ಮತ್ತು ಅಕ್ಷಯ್ ಕುಮಾರ್ ಅವರೊಂದಿಗೆ ಆದಾಯ ತೆರಿಗೆ ಇಲಾಖೆ ಹೊರತಂದ ಸುಮಾರು 20 ನಿಮಿಷಗಳ ಸಾಕ್ಷ್ಯಚಿತ್ರದಲ್ಲಿ ತೆರಿಗೆ ಪಾವತಿ ಪಾಲನೆಯ ಪ್ರಚಾರ ರಾಯಭಾರಿಗಳಾಗಿ ಕಾಣಿಸಿಕೊಂಡಿದ್ದರು.ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ತೆರಿಗೆ ಪಾವತಿಸುವಂತೆ ಈ ತಾರೆಯರು ಸಾರ್ವಜನಿಕರಿಗೆ ಚಿತ್ರದಲ್ಲಿ ಮನವಿ ಮಾಡಿಕೊಂಡಿದ್ದರು. ಪ್ರಥಮ ಆದಾಯ ತೆರಿಗೆ ದಿನಾಚರಣೆಯ ಸ್ಮರಣಾರ್ಥವಾಗಿ ಈ ಜಾಹೀರಾತು ಚಿತ್ರವನ್ನು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಕಳೆದ ಜುಲೈ 24ರಂದು ನವದೆಹಲಿಯಲ್ಲಿ ಬಿಡುಗಡೆಗೊಳಿಸಿದ್ದರು.‘ದೋಸ್ತಾನಾ’, ಅಂಜಾನಾ, ಆಜಾನಿ, ಕಾಮಿನೇಯ್’ ಮುಂತಾದ ಪ್ರಮುಖ ಚಿತ್ರಗಳಲ್ಲಿ ನಟಿಸಿರುವ ಪ್ರಿಯಾಂಕಾ ಅವರು ಪ್ರಚಾರ ಜಾಹೀರಾತುಗಳು, ಸಾಗರೋತ್ತರ  ಕಾರ್ಯಕ್ರಮಗಳು ಹಾಗೂ ಖಾಸಗಿ ಅತಿಥಿ ಕಾರ್ಯಕ್ರಮಗಳಲ್ಲಿ ಅಪಾರ ಹಣ ಗಳಿಸಿ ತೆರಿಗೆ ವಂಚಿಸಿರುವ ಅನುಮಾನದ ಮೇಲೆ ಈ ದಾಳಿ ಮಾಡಲಾಗಿದೆ. ‘ಆದಾಯ ತೆರಿಗೆ ಇಲಾಖೆಯು ಪ್ರಿಯಾಂಕಾ ಅವರನ್ನು ಯುವ ಪ್ರತಿನಿಧಿಯಾಗಿ ಮತ್ತು ಚಿತ್ರೋದ್ಯಮದಲ್ಲಿ ಹೆಚ್ಚಿನ ತೆರಿಗೆ ಪಾವತಿಸುತ್ತಿರುವ ಕಾರಣಕ್ಕಾಗಿ ಅಮೀರ್ ಮತ್ತು ಅಕ್ಷಯ್ ಅವರನ್ನು ತನ್ನ ಪ್ರಚಾರ ರಾಯಭಾರಿಗಳಾಗಿ ಸಾಕ್ಷ್ಯಚಿತ್ರದಲ್ಲಿ ಅಭಿನಯಿಸಲು ಆಹ್ವಾನಿಸಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.