ಅಹಮದಾಬಾದ್(ಪಿಟಿಐ): ವಾರ್ಷಿಕ ರೂ. 5 ಲಕ್ಷದವರೆಗೆ ಆದಾಯ ಹೊಂದಿರುವ ವೇತನ ವರ್ಗದವರು ಆದಾಯ ತೆರಿಗೆ ಲೆಕ್ಕಪತ್ರ (ರಿಟರ್ನ್ಸ್) ಸಲ್ಲಿಕೆ ಮಾಡಬೇಕಾಗಿಲ್ಲ ಎನ್ನುವುದಕ್ಕೆ ಸಂಬಂಧಿಸಿದ ಅಧಿಸೂಚನೆ ಜೂನ್ ತಿಂಗಳ ಮೊದಲ ವಾರದಲ್ಲಿ ಹೊರಬೀಳಲಿದೆ ಎಂದು ಕೇಂದ್ರ ನೇರ ತೆರಿಗೆ ಮಂಡಳಿಯ ಅಧ್ಯಕ್ಷ ಸುಧೀರ್ ಚಂದ್ರ ತಿಳಿಸಿದ್ದಾರೆ.

ಈ ಯೋಜನೆಯನ್ನು 2011-12ನೇ ಸಾಲಿನ ಬಜೆಟ್ನಲ್ಲಿ ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಘೋಷಿಸಿದ್ದರು. ಇದರಿಂದ 70 ರಿಂದ 80 ಲಕ್ಷ ಜನರಿಗೆ ಆದಾಯ ತೆರಿಗೆ ಲೆಕ್ಕಪತ್ರ ಸಲ್ಲಿಕೆಯಿಂದ ಬಿಡುಗಡೆ ಲಭಿಸಲಿದೆ. ಹೊಸ ಯೋಜನೆಯಲ್ಲಿ ರೂ. 5 ಲಕ್ಷದ ವರೆಗೆ ವಾರ್ಷಿಕ ಆದಾಯ ಮಿತಿ ಹೊಂದಿರುವ ಮಧ್ಯಮ ಮತ್ತು ಚಿಕ್ಕ ವೇತನ ವರ್ಗಕ್ಕೆ ಆದಾಯ ತೆರಿಗೆ ಲೆಕ್ಕಪತ್ರ ಸಲ್ಲಿಕೆಯಿಂದ ವಿನಾಯ್ತಿ ಕಲ್ಪಿಸಲಾಗಿದೆ. ಆದರೆ, ಯಾರು ಮರುಪಾವತಿ ಬಯಸುವರೋ ಅವರು ರಿಟನ್ಸ್ ಸಲ್ಲಿಸಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.