ನವದೆಹಲಿ (ಐಎಎನ್ಎಸ್): ಆಫ್ರಿಕಾ ದೇಶಗಳ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಘೋಷಿಸಿರುವ ಭಾರತ, ಆ ದೇಶಗಳ ಜತೆಗಿನ ಆರ್ಥಿಕ ಬಾಂಧವ್ಯ ವೃದ್ಧಿಗೆ ಶ್ರಮಿಸುವುದಾಗಿ ಹೇಳಿದೆ.

ಇಲ್ಲಿ ನಡೆದ ಆಫ್ರಿಕಾ ದೇಶಗಳ ಸಚಿವರ ಹಾಗೂ ಉದ್ಯಮಿಗಳ ಸಭೆಯಲ್ಲಿ ಮಾತನಾಡಿದ ವಿದೇಶಾಂಗ ಇಲಾಖೆ ರಾಜ್ಯ ಸಚಿವೆ ಪ್ರಣೀತ್ ಕೌರ್, ಆಫ್ರಿಕಾ ದೇಶಗಳೊಂದಿಗೆ ಭಾರತ ತಂತ್ರಜ್ಞಾನ ವಿನಿಮಯ ಮಾಡಿಕೊಳ್ಳುವುದಕ್ಕೆ ಬದ್ಧವಾಗಿದೆ ಎಂದರು.

ಆಫ್ರಿಕಾದಲ್ಲಿ ಬಂಡವಾಳ ಹೂಡಿಕೆ ಮತ್ತು ತರಬೇತಿ ಸಂಸ್ಥೆಗಳನ್ನು ಸ್ಥಾಪಿಸುವ ಭಾರತದ ನಿರ್ಧಾರವನ್ನು ಅವರು ಪ್ರತಿಪಾದಿಸಿದರು.

ಭಾರತ- ಆಫ್ರಿಕಾ ನಡುವಿನ ದ್ವಿಪಕ್ಷೀಯ ವ್ಯವಹಾರ 2010-11ರಲ್ಲಿ ಶೇ 35ರಷ್ಟು ವೃದ್ಧಿಯಾಗಿದೆ. ಪ್ರಸ್ತುತ ಐವತ್ತು ಶತಕೋಟಿ ಡಾಲರ್ ವ್ಯವಹಾರದ ಗುರಿ ಅಂದಾಜು ಮಾಡಲಾಗಿದೆ ಎಂದರು.

ಅಡಿಸ್ ಅಬಾಬಾದಲ್ಲಿ ನಡೆದ ಎರಡನೇ ಸಭೆಯಲ್ಲಿ ಭಾರತ, ಆಫ್ರಿಕಾ ದೇಶಗಳಿಗೆ ಐದು ಶತಕೋಟಿ ಡಾಲರ್ ಸಾಲ ಹಾಗೂ ನೂರು ತರಬೇತಿ ಸಂಸ್ಥೆಗಳನ್ನು ಸ್ಥಾಪಿಸಲು ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಏಳು ಶತಕೋಟಿ ಡಾಲರ್ ನೆರವು ನೀಡುವುದಾಗಿ ಭರವಸೆ ನೀಡಿತ್ತು ಎನ್ನುವುದನ್ನು ಅವರು ಸ್ಮರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.